ಉಡುಪಿ : ಗೃಹಲಕ್ಷ್ಮೀ ಯೋಜನೆಯಲ್ಲಿ ಬಂದ ಹಣವನ್ನು ಕೂಡಿಟ್ಟ ಕೂಲಿಕಾರ್ಮಿಕ ಮಹಿಳೆಯೊಬ್ಬರು ಮನೆಗೆ ಕಪಾಟೊಂದನ್ನು ಖರೀದಿಸಿದ್ದಾರೆ.
ಪರ್ಕಳದ ಮೋಹನದಾಸ್ ನಾಯಕ್ ಅವರ ಸ್ವಾಗತ್ ಹೊಟೇಲ್‌ನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಹಾವೇರಿ ಮೂಲದ ಕುಸುಮಾ ಮಾಡಿವಾಲ್ತಿ ಅವರೇ ಈ ಮಹಿಳೆ.
ಕುಸುಮಾ ಅವರ ರೇಷನ್ ಕಾರ್ಡ್ನಲ್ಲಿ ಕೆಲವು ದೋಷಗಳಿದ್ದವು. ಅವುಗಳನ್ನು ಪರ್ಕಳದ ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೆಬೆಟ್ಟು ಅವರ ಸಹಾಯದಿಂದ ತಿದ್ದುಪಡಿ ಮಾಡಿ ಬಳಿಕ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಿದ್ದರು. ಬಳಿಕ ಬಂದ ಗೃಹಲಕ್ಷ್ಮೀ ಹಣ 2000ರೂ.ಗಳನ್ನು ಕೂಡಿಟ್ಟು ಮನೆಗೆ ಹೊಸ ಕಪಾಟನ್ನು ಖರೀದಿಸಿದ್ದಾರೆ. ಅಲ್ಲದೇ ಇನ್ನೂ ನಾಲ್ಕು ಕಂತಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇರಿಸಿದ್ದಾರೆ.
‘ನಮ್ಮಂತ ಬಡ ಕೂಲಿಕಾರ್ಮಿಕರಿಗೆ ಗೃಹಲಕ್ಷ್ಮೀ ಯೋಜನೆ ವರದಾನವಾಗಿ ಬಂದಿದೆ. ಈ ಹಣದಿಂದ ಬಹುಕಾಲದಿಂದ ಖರೀದಿಸಲು ಯೋಜಿಸಿದ್ದ ಮನೆಗೆ ಅತ್ಯವಶ್ಯಕಗಳನ್ನು ಖರೀದಿಸಲು ಸಾಧ್ಯವಾಗಲಿದೆ’ ಎಂದು ಕುಸುಮಾ ಖುಷಿ ಹಂಚಿಕೊಂಡಿದ್ದಾರೆ.
ಕುಸುಮಾ ಅವರಿಗೆ ಗೃಹಲಕ್ಷ್ಮೀ ಯೋಜನೆ ಮಂಜೂರಾದ ಬಳಿಕ ಬಂದ ಹಣವನ್ನು ಹಾಗೆಯೇ ಕೂಡಿಟ್ಟಿದ್ದರು ಇದೀಗ ಅದರಿಂದ ಒಂದು ಕಪಾಟು ಖರೀದಿ ಮಾಡಿದ್ದಾರೆ. ಅಲ್ಲದೇ ಇನ್ನೂ ನಾಲ್ಕು ಕಂತಿನ ಹಣವನ್ನ ಬ್ಯಾಂಕಿನಲ್ಲಿ ಠೇವಣಿಯಾಗಿ ಇರಿಸಿದ್ದಾರೆ.
ಕೊನೆಗೆ ಬಂದ ಹಣವನ್ನು ಕೂಡಿಟ್ಟು , ಕಾವಾಟು ಖರೀದಿ ಮಾಡಿದ ಈಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯರು ಈ ಫೋಟೋ ಹಂಚಿಕೊಂಡಿದ್ದಾರೆ .ಇನ್ನು ನಾಲ್ಕು ಕಂತಿನ ಹಣ ಬ್ಯಾಂಕ್ ನಲ್ಲಿ ಠೇವಣಿ ಇರಿಸಿದ್ದಾರೆ. ನಮ್ಮಂತಹ ಕೂಲಿ ಕಾರ್ಮಿಕರಿಗೆ ಗೃಹಲಕ್ಷ್ಮಿ ಹಣ ಆಧಾರವಾಗಿದೆ. ರೇಷನ್ ಕಾರ್ಡ್ ತಿದ್ದು ಪಡಿಗೆ ಮತ್ತು ಅರ್ಜಿ ಸಲ್ಲಿಸಲು ಸಹಕರಿಸಿದವರಿಗೆ ಕುಸುಮಾ ಥ್ಯಾಂಕ್ಸ್ ಹೇಳಿದ್ದಾರೆ.