spot_img
spot_img

ಬೃಹತ್ ಸಂಖ್ಯೆಯಲ್ಲಿ ಆತ್ಮಾಹುತಿ ಡ್ರೋನ್ ತಯಾರಿಕೆ: ಉ.ಕೊರಿಯಾ ನಾಯಕ ಆದೇಶ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಸಿಯೋಲ್: ಆತ್ಮಾಹುತಿ ಡ್ರೋನ್​ಗಳನ್ನು ಸಾಮೂಹಿಕವಾಗಿ ಉತ್ಪಾದಿಸಲು ಉತ್ತರ ಕೊರಿಯಾ ಮುಂದಾಗಿದ್ದು, ಉ.ಕೊರಿಯಾ ನಾಯಕ ಕಿಮ್ ಜಾಂಗ್-ಉನ್ ಆದೇಶ ಹೊರಡಿಸಿದ್ದಾರೆ.

ಆತ್ಮಾಹುತಿ ಡ್ರೋನ್​ಗಳನ್ನು ತ್ವರಿತಗತಿಯಲ್ಲಿ ಸಾಮೂಹಿಕವಾಗಿ ತಯಾರಿಸುವುದು ಅಗತ್ಯ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಹೇಳಿದ್ದಾರೆ.

ಆತ್ಮಾಹುತಿ ದಾಳಿ ಡ್ರೋನ್​ಗಳ ಕಾರ್ಯಕ್ಷಮತೆ ಪರೀಕ್ಷೆಯ ಮೇಲ್ವಿಚಾರಣೆ ನಡೆಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.
ಇದಕ್ಕೂ ಹಿಂದಿನ ದಿನ ಮಾನವರಹಿತ ವೈಮಾನಿಕ ತಂತ್ರಜ್ಞಾನ ಸಂಕೀರ್ಣದ ಸಂಯೋಜಿತ ಸಂಸ್ಥೆ (Unmanned Aerial Technology Complex) ತಯಾರಿಸಿದ ವಿವಿಧ ರೀತಿಯ ಆತ್ಮಾಹುತಿ ದಾಳಿ ಡ್ರೋನ್​ಗಳ ಪರೀಕ್ಷೆಗಳಿಗೆ ಕಿಮ್ ಸ್ಥಳದಲ್ಲೇ ಮಾರ್ಗದರ್ಶನ ನೀಡಿದರು ಎಂದು ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ)ಯನ್ನು ಉಲ್ಲೇಖಿಸಿ ಯೋನ್ ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

“ವಿವಿಧ ದಾಳಿ ವ್ಯಾಪ್ತಿಯಲ್ಲಿ ಬಳಸಬೇಕಾದ ಆತ್ಮಾಹುತಿ ಡ್ರೋನ್​ಗಳು ನೆಲ ಮತ್ತು ಸಮುದ್ರದಲ್ಲಿ ಯಾವುದೇ ಶತ್ರು ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ” ಎಂದು ಕೆಸಿಎನ್ಎ ಹೇಳಿದೆ.

ಗುರುವಾರದ ಪರೀಕ್ಷೆಯಲ್ಲಿ ಡ್ರೋನ್ ಗಳು ಪೂರ್ವನಿರ್ಧರಿತ ಮಾರ್ಗಗಳಲ್ಲಿ ಹಾರಾಟ ನಡೆಸಿದ ನಂತರ ನಿಖರವಾಗಿ ಗುರಿಗಳನ್ನು ಹೊಡೆದುರುಳಿಸಿದವು ಎಂದು ಅದು ವರದಿ ಮಾಡಿದೆ.

ತಮ್ಮ ದೇಶವು ವಿವಿಧ ರೀತಿಯ ಡ್ರೋನ್​ಗಳನ್ನು ಉತ್ಪಾದಿಸಲು ಮತ್ತು ಬಳಸಲು ಸಂಪೂರ್ಣ ಸಾಧ್ಯತೆ ಮತ್ತು ಸಾಮರ್ಥ್ಯವನ್ನು ಹೊಂದಿದೆ ಮತ್ತು ಆಧುನಿಕ ಯುದ್ಧಕ್ಕೆ ಅಗತ್ಯವಿರುವಂತೆ ಹೊಸ ಮತ್ತು ಭರವಸೆಯ ಕಾರ್ಯತಂತ್ರದ ವಿಧಾನಗಳನ್ನು ಸಂಯೋಜಿಸುವ ಮತ್ತು ಅನ್ವಯಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಕಿಮ್ ದೃಢಪಡಿಸಿದರು.

“ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಇತ್ತೀಚೆಗೆ ಮಾನವರಹಿತ ಮಿಲಿಟರಿ ಯಂತ್ರಾಂಶ ವ್ಯವಸ್ಥೆಗಳನ್ನು ಕಾರ್ಯಾಚರಣೆಯ ಯೋಜನೆಗಳೊಂದಿಗೆ ಸಂಪೂರ್ಣವಾಗಿ ಸಂಯೋಜಿಸುವ ಪ್ರಯತ್ನಗಳಿಗೆ ಪ್ರಾಮುಖ್ಯತೆ ನೀಡಿದೆ” ಎಂದು ಕಿಮ್ ಹೇಳಿದರು.

ಸಾಧ್ಯವಾದಷ್ಟು ಬೇಗ ಆತ್ಮಾಹುತಿ ಡ್ರೋನ್​ಗಳನ್ನು ಸಾಮೂಹಿಕವಾಗಿ ಉತ್ಪಾದಿಸಬಲ್ಲ ವ್ಯವಸ್ಥೆಯ ಅಗತ್ಯವನ್ನು ಅವರು ಒತ್ತಿಹೇಳಿದರು ಎಂದು ವರದಿ ಹೇಳಿದೆ.

ಪ್ಯೋಂಗ್ಯಾಂಗ್ ತನ್ನ ದಾಳಿ ಡ್ರೋನ್​ಗಳನ್ನು ಇದೇ ಆಗಸ್ಟ್​ನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿತ್ತು. ರಷ್ಯಾದೊಂದಿಗಿನ ಅದರ ಉತ್ತಮ ಸಂಬಂಧಗಳ ಬೆಂಬಲದಿಂದ ಉತ್ತರ ಕೊರಿಯಾ ಈ ಡ್ರೋನ್ ಗಳನ್ನು ತಯಾರಿಸಲು ಸಾಧ್ಯವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಆಗಸ್ಟ್​ನಲ್ಲಿ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿದ ಚಿತ್ರಗಳನ್ನು ನೋಡಿದರೆ ಈ ಡ್ರೋನ್​ಗಳು ಇಸ್ರೇಲ್ ನಿರ್ಮಿತ ಹರೋಪ್ ಡ್ರೋನ್, ರಷ್ಯಾ ನಿರ್ಮಿತ ಲ್ಯಾನ್ಸೆಟ್ -3 ಮತ್ತು ಇಸ್ರೇಲ್​ನ ಹೀರೋ 30 ರೀತಿಯಲ್ಲಿಯೇ ಇವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಹೊನ್ನಾವರ ಪಾವಿನಕುರ್ವೆಯಲ್ಲಿ ಸರ್ವ ಋತು ಬಂದರು

ಉತ್ತರ ಕನ್ನಡ: ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವೆಯಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ 14 MTPA ಸಾಮರ್ಥ್ಯದ ಸರ್ವಋತು...

ಸ್ಟೀಲ್ ನಟ್​ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ : ಉಡುಪಿ ಕಲಾವಿದನ ಕೈಚಳಕ

ಉಡುಪಿ: ಉಡುಪಿಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರರೊಬ್ಬರು ಮೈಲ್ಡ್ ಸ್ಟೀಲ್ ನಟ್ಸ್​ಗಳಿಂದ 58 ಕೆ.ಜಿ. ತೂಕದ ಆದಿಯೋಗಿಯ ವಿಗ್ರಹ ತಯಾರಿಸಿ ಇಂಡಿಯನ್ ಬುಕ್ ಆಫ್...

ಭರತನಾಟ್ಯದ 52 ಮುದ್ರೆ 3 ವರ್ಷದ ಮಗು ಪ್ರದರ್ಶನ : ಗಿನ್ನಿಸ್ ದಾಖಲೆ ನಿರ್ಮಾಣ

ಕೇರಳ: ಭರತನಾಟ್ಯದ ಎಲ್ಲ 52 ಮುದ್ರೆಗಳನ್ನು ಪ್ರದರ್ಶಿಸುವ ಮೂಲಕ ಕೇರಳದ 3 ವರ್ಷದ ಪುಟ್ಟ ಮಗುವೊಂದು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದೆ. "ನನ್ನ...

ಅಂಚೆ ಚೀಟಿ ಸಂಗ್ರಹ : ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್ ನಿಮಿಸಿದ ನಿವೃತ್ತ ನೌಕರ

ಉಡುಪಿ: ಕೆಲವೊಮ್ಮೆ ವ್ಯಕ್ತಿಗಳ ಹವ್ಯಾಸವೇ ಅವರನ್ನು ದೊಡ್ಡ ಸಾಧನೆಯತ್ತ ಕೊಂಡೊಯ್ಯುತ್ತದೆ. ಅದರಂತೆ ಕಾಲೇಜೊಂದರ ನಿವೃತ್ತ ಕಚೇರಿ ಸಹಾಯಕ ಡೇನಿಯಲ್​ ಮೊಂತೇರೊ ಅವರು ಅಂಚೆ ಚೀಟಿ...