ಮಂಡ್ಯ: 2028ರ ವಿಧಾನಸಭೆ ಚುನಾವಣೆ ಮೇಲೆ ದಳಪತಿಗಳು ಗುರಿ ಇಟ್ಟಿದ್ದು, ನಿಖಿಲ್ ಪಟ್ಟಾಭಿಷೇಕಕ್ಕೆ ಚಿಂತನೆ ನಡೆಸ್ತಿದ್ದಾರೆ ಎನ್ನಲಾಗುತ್ತಿದೆ.
ಬೈ-ಎಲೆಕ್ಷನ್ ಫಲಿತಾಂಶದ ನಂತರ ದಳಪತಿ ಪಕ್ಷ ಸಂಘಟನೆಗೆ ಚಿಂತಿಸ್ತಿದ್ದಾರೆ. ಜೆಡಿಎಸ್ ನೂತನ ಸಾರಥಿಯಾಗಿ ನಿಖಿಲ್ ನೇಮಕಕ್ಕೆ ಪ್ಲಾನ್ ನಡೆಸ್ತಿದ್ದಾರೆ. ಪಕ್ಷದ ಪದಾಧಿಕಾರಿಗಳ ಆಯ್ಕೆ ಬಳಿಕ ಡಿಸೆಂಬರ್ ಅಥವಾ ಜನವರಿಯಲ್ಲಿ ನಿಖಿಲ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಲು ದಳಪತಿ ಪ್ಲಾನ್ ಮಾಡಿದ್ದಾರೆ.
2028ರ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 90 ಸೀಟ್ ಗೆಲ್ಲುವ ಜವಾಬ್ದಾರಿಯನ್ನ ದಳಪತಿ ನಿಖಿಲ್ಗೆ ನೀಡಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
NDA ಅಭ್ಯರ್ಥಿ ನಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರುವಾಗಿದೆ ಅಂತಾ ತುಮಕೂರಿನ ಡಾ.ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ.
ತುಮಕೂರಿನ ಚಿನಗ ಗ್ರಾಮದಲ್ಲಿರುವ ಮೂಕಾಬಿಂಕಾ ದೇವಿ ಸನ್ನಿಧಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭೇಟಿ ನೀಡಿ ಚಂಡಿಕಾ ಯಾಗ ಮಾಡಿಸಿದ್ದು ಇದೀಗ ಫಲ ಕೊಟ್ಟಿದೆ.
ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲ್ತಾರೆ ಎಮದು ಡಾ.ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಚನ್ನಪಟ್ಟಣ ವಿಧಾನಸಭೆಗೆ ಉಪಚುನಾವಣೆ ನಡೆದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಖಾಡದಲ್ಲಿದ್ದಾರೆ. ಕಾಂಗ್ರೆಸ್ನಿಂದ ಸಿಪಿ ಯೋಗೇಶ್ವರ್ ಸ್ಪರ್ಧೆ ಮಾಡಿದ್ದಾರೆ.
ಇದೇ 23 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.