spot_img
spot_img

ಬಿಗ್ ಬಾಸ್ ಮನೆಯಲ್ಲಿ ಗೌತಮಿ VS ಶೋಭಾ ಶೆಟ್ಟಿ ನಡುವೆ ಪಾಸಿಟಿವಿಟಿ ಗಲಾಟೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕನ್ನಡದ ಬಿಗ್​ಬಾಸ್​ ಸೀಸನ್​ 11 8ನೇ ವಾರಕ್ಕೆ ಕಾಲಿಟ್ಟಿದೆ. 50 ದಿನಗಳನ್ನು ಪೂರೈಸಿದ ಹೊತ್ತಲ್ಲಿ ಬಿಗ್​ಬಾಸ್​ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ.

ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲೆಂದೇ ಇಬ್ಬರು ಸಖತ್​ ಸ್ಟ್ರಾಂಗ್​ ಕಂಟೆಸ್ಟೆಂಟ್​ಗಳನ್ನು ದೊಡ್ಮನೆಗೆ ಕಳುಹಿಸಲಾಗಿದೆ.

2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಬುಜ್ಜಿ ಎಂಟ್ರಿ ಕೊಟ್ಟಿದ್ದಾರೆ. ಇವರ ಜೊತೆಗೆ ಶೋಭಾ ಶೆಟ್ಟಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ಬಿಗ್​ಬಾಸ್​ ಮನೆಗೆ ಈ ಇಬ್ಬರು ಎಂಟ್ರಿ ಕೊಡುತ್ತಿದ್ದಂತೆ ಮನೆ ಮಂದಿ ಫುಲ್​ ಶಾಕ್​ ಆದರು. ಇದಾದ ಬಳಿಕ ಶೋಭಾ ಶೆಟ್ಟಿ ಅವರು ತಮ್ಮ ಬಗ್ಗೆ ಕಿರು ಪರಿಚಯ ಮಾಡಿಕೊಂಡಿದ್ದರು.

50ನೇ ದಿನಕ್ಕೆ ದೊಡ್ಮನೆಗೆ ಕಾಲಿಟ್ಟ ಶೋಭಾ ಶೆಟ್ಟಿ ಹಾಗೂ ಸಖತ್​ ಪಾಜಿಟಿವ್ ಆಗಿದ್ದ ಗೌತಮಿ ಜಾಧವ್​ ನಡುವೆ ಬಿಗ್​ ವೈಟ್​ ನಡೆದಿದೆ. 2 ವೈಲ್ಡ್ ಕಾರ್ಡ್ ಎಂಟ್ರಿಯ ಜೊತೆಗೆ ಉಳಿದವರ ಆಟದ ವೈಖರಿಗೆ ಹೊಸ ತಿರುವು ಸಿಕ್ಕಿದೆ.

ಈ ವಾರದ ನಾಮಿನೇಷನ್ ಪ್ರಕ್ರಿಯೆಯ ಒಂದೊಂದು ಟಾಸ್ಕ್ ಕೂಡ ಒಂದೊಂದು ಜಗಳಕ್ಕೆ ವೇದಿಕೆ ಆಗುತ್ತಿದೆ.
ಶೋಭಾ ಶೆಟ್ಟಿ ಎಂಟ್ರಿ ಕೊಟ್ಟು ಮೊದಲು ಹೇಳಿದ್ದೆ ಗೌತಮಿ ಜಾದವ್ ಮುಖವಾಡ ಧರಿಸಿದ್ದಾರೆ. ಆ ಮುಖವಾಡ ಕಳೋಚೋದೆ ನನ್ನ ಉದ್ದೇಶ ಎಂದಿದ್ದರು.

ಆ ಡೈಲಾಗ್​ನಿಂದ ಇಡೀ ಮನೆಯ ವಾತಾವರಣದಲ್ಲಿ ಕೊಂಚ ಬದಲಾವಣೆ ಕಂಡಿತ್ತು. ಇದೀಗ ಮತ್ತೆ ಗೌತಮಿ ಮತ್ತು ಶೋಭಾ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದೆ.

ಹೇಳಿ ಕೇಳಿ ಶೋಭಾ ಶೆಟ್ಟಿ ಸಖತ್​ ಸ್ಟ್ರಾಂಗ್​ ಕಂಟೆಸ್ಟೆಂಟ್. ಈ ಹಿಂದೆಯೇ ತೆಲುಗು ಬಿಗ್​​ಬಾಸ್ ಸೀಸನ್ 7ಗೆ ಎಂಟ್ರಿ ಕೊಟ್ಟು ಸಖತ್ ಮಿಂಚಿದ್ದರು. ಅದರಲ್ಲೂ ತೆಲುಗು ಸೀಸನ್​ 7ಕ್ಕೆ ಹೋಗಿದ್ದ ಶೋಭಾ ಶೆಟ್ಟಿ ಕೊಟ್ಟು ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಅಲ್ಲದೇ ಸ್ಪರ್ಧಿಗಳಿಗೆ ನೇರ ನೇರ ಟಾಂಗ್​ ಕೊಟ್ಟಿದ್ದರು.

ಎಲ್ಲರಿಗಿಂತ ನಾನೆಷ್ಟು ಸ್ಟ್ರಾಂಗ್​ ಅಂತ ಫ್ರೂವ್​ ಮಾಡಿದ್ದರು. 98 ದಿನಗಳ ಕಾಲ ತೆಲುಗು ಬಿಗ್​ಬಾಸ್ ಮನೆಯಲ್ಲಿ ಉಳಿದುಕೊಂಡು ಪ್ರಬಲ ಪೈಪೋಟಿ ನೀಡಿದ್ದರು.

ಈಗ ಅಷ್ಟೇ ರೆಬೆಲ್ ಕನ್ನಡದ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟು ಮನೆಯಲ್ಲಿರೋ ಸ್ಪರ್ಧಿಗಳಿಗೆ ಟಾಂಗ್​ ಕೊಡುತ್ತಿದ್ದಾರೆ. ಸದ್ಯ ಶೋಭಾ ಶೆಟ್ಟಿ ಬಿಗ್​ಬಾಸ್​ ಮನೆಗೆ ಕಾಲಿಟ್ಟು ಜಸ್ಟ್ ಎರಡು ದಿನ ಮಾತ್ರ ಕಳೆದಿದೆ. ಆದರೆ ಈ ಎರಡು ದಿನದಲ್ಲೇ ಇಷ್ಟೊಂದು ನೇರ ನೇರವಾಗಿ ಮಾತಾಡಿ ಸ್ಪರ್ಧಿಗಳಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಶೋಭಾ ಬಿಗ್​ಬಾಸ್​ ಮನೆಯಲ್ಲಿ ಯಾವೆಲ್ಲಾ ಟಾಸ್ಕ್​ ಆಡಲಿದ್ದಾರೆ ಅಂತ ಕಾದು ನೋಡಬೇಕಿದೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

100, 200, 500 ಅಲ್ಲ ಬರೋಬ್ಬರಿ 20 ಲಕ್ಷ ರೂಪಾಯಿ ನೋಟಿನ ಸುರಿಮಳೆ

100, 200, 500 ರೂಪಾಯಿ ಗರಿ, ಗರಿ ನೋಟು. ಅಬ್ಬಾ.. ಏನಿದು ಮಳೆಯಂತೆ ಆಕಾಶದಿಂದ ತೇಲಿ ಬರುತ್ತಿದೆ ಅಂತ ಅಂದುಕೊಳ್ಳಬೇಡಿ. ಇದು ನಿಜವಾದ ನೋಟಿನ...

ಹೊನ್ನಾವರ ಪಾವಿನಕುರ್ವೆಯಲ್ಲಿ ಸರ್ವ ಋತು ಬಂದರು

ಉತ್ತರ ಕನ್ನಡ: ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವೆಯಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ 14 MTPA ಸಾಮರ್ಥ್ಯದ ಸರ್ವಋತು...

ಸ್ಟೀಲ್ ನಟ್​ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ : ಉಡುಪಿ ಕಲಾವಿದನ ಕೈಚಳಕ

ಉಡುಪಿ: ಉಡುಪಿಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರರೊಬ್ಬರು ಮೈಲ್ಡ್ ಸ್ಟೀಲ್ ನಟ್ಸ್​ಗಳಿಂದ 58 ಕೆ.ಜಿ. ತೂಕದ ಆದಿಯೋಗಿಯ ವಿಗ್ರಹ ತಯಾರಿಸಿ ಇಂಡಿಯನ್ ಬುಕ್ ಆಫ್...

ಭರತನಾಟ್ಯದ 52 ಮುದ್ರೆ 3 ವರ್ಷದ ಮಗು ಪ್ರದರ್ಶನ : ಗಿನ್ನಿಸ್ ದಾಖಲೆ ನಿರ್ಮಾಣ

ಕೇರಳ: ಭರತನಾಟ್ಯದ ಎಲ್ಲ 52 ಮುದ್ರೆಗಳನ್ನು ಪ್ರದರ್ಶಿಸುವ ಮೂಲಕ ಕೇರಳದ 3 ವರ್ಷದ ಪುಟ್ಟ ಮಗುವೊಂದು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದೆ. "ನನ್ನ...