spot_img
spot_img

ಡಿಸೆಂಬರ್​ 21ಕ್ಕೆ ಜಿಎಸ್​ಟಿ ಮಂಡಳಿ ಸಭೆ : ನಿರ್ಮಲಾ ಸೀತಾರಾಮನ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ರಾಜ್ಯ ಸಚಿವರ ಸಮಿತಿ ಶಿಫಾರಸ್ಸಿನ ಅನ್ವಯ ತೆರಿಗೆ ದರ ಕಡಿತ ಮತ್ತು ಸಾಮಾನ್ಯ ವಸ್ತುಗಳ ಮೇಲೆ ಶೇ 12ರಿಂದ 5ರಷ್ಟು ಸ್ಲಾಬ್​ ಇಳಿಕೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅಧ್ಯಕ್ಷತೆಯಲ್ಲಿ ರಾಜ್ಯದ ಇತರೆ ಅಧಿಕಾರಿಗಳು ಮಂಡಳಿಯಲ್ಲಿರಲಿದ್ದಾರೆ. ರಾಜ್ಯ ಸಚಿವರ ಸಮಿತಿ ಶಿಫಾರಸ್ಸಿನ ಅನ್ವಯ ತೆರಿಗೆ ದರ ಕಡಿತ ಮತ್ತು ಸಾಮಾನ್ಯ ವಸ್ತುಗಳ ಮೇಲೆ ಶೇ 12ರಿಂದ 5ರಷ್ಟು ಸ್ಲಾಬ್​ ಇಳಿಕೆ ಕುರಿತು ನಿರ್ಧಾರ ನಡೆಸುವ ಸಾಧ್ಯತೆ ಇದೆ.

ಈ ಸಂಬಂಧ ಪೋಸ್ಟ್​ ಮಾಡಿರುವ ಜಿಎಸ್​ಟಿ ಮಂಡಳಿ 2024ರ ಡಿಸೆಂಬರ್​ 21ರಂದು ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಜಿಎಸ್​ಟಿ ಸಭೆ ನಡೆಯಲಿದೆ ಎಂದು ತಿಳಿಸಿದೆ.

ಪ್ರತ್ಯೇಕವಾಗಿ ಜಿಎಸ್​ಟಿ ದರ ತರ್ಕಬದ್ಧಗೊಳಿಸುವಿಕೆ ಕುರಿತಾದ ಮಂಡಳಿಯು, ಪ್ಯಾಕ್ ಮಾಡಲಾದ ಕುಡಿಯುವ ನೀರು, ಬೈಸಿಕಲ್‌ಗಳು, ವ್ಯಾಯಾಮ ನೋಟ್‌ಬುಕ್‌ಗಳು, ಐಷಾರಾಮಿ ಕೈಗಡಿಯಾರಗಳು ಮತ್ತು ಬೂಟುಗಳು ಸೇರಿದಂತೆ ಹಲವಾರು ಸರಕುಗಳ ಮೇಲಿನ ತೆರಿಗೆ ದರಗಳನ್ನು ಕೌನ್ಸಿಲ್ ಮರುಹೊಂದಿಸಲು ಸಲಹೆ ನೀಡಿದೆ.

ಈ ದರ ಮರು ಹೊಂದಾಣಿಕೆ ಸುಮಾರು 22,000 ಕೋಟಿ ರೂ. ಆದಾಯ ನಿರೀಕ್ಷೆ ಹೊಂದಿದೆ.20 ಲೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಪ್ಯಾಕೇಜ್ಡ್ ಕುಡಿಯುವ ನೀರಿನ ಮೇಲಿನ ಜಿಎಸ್​ಟಿಯನ್ನು ಶೇ 18ರಿಂದ ಶೇ 5 ಕಡಿಮೆ ಮಾಡಲು ಪ್ರಸ್ತಾಪ ಬಂದಿದೆ.

ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸನ್ನು ಅಂಗೀಕರಿಸಿದರೆ, 10,000 ರೂ.ಗಿಂತ ಕಡಿಮೆ ಬೆಲೆಯ ಬೈಸಿಕಲ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ 12 ರಿಂದ ಶೇ 5 ಕ್ಕೆ ಇಳಿಸಲಾಗುವುದು.

ಹಿರಿಯ ನಾಗರಿಕರ ಹೊರತಾಗಿ ವೈಯಕ್ತಿಕವಾಗಿ ಪಾವತಿಯಾದ ಐದು ಲಕ್ಷದವರೆಗಿನ ಆರೋಗ್ಯ ವಿಮೆಗೆ ವಿನಾಯಿತಿ ಪ್ರಸ್ತಾಪ ಮಾಡಲಾಗಿದೆ.

ಆದಾಗ್ಯೂ, 5 ಲಕ್ಷಕ್ಕಿಂತ ಹೆಚ್ಚಿನ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ಮುಂದುವರಿಯಲಿದೆ.

ಹಾಗೇ ನೋಟ್‌ಬುಕ್‌ಗಳ ಮೇಲಿನ ಜಿಎಸ್‌ಟಿಯನ್ನು 12 ರಿಂದ 5ಕ್ಕೆ ಇಳಿಸಲಾಗುತ್ತದೆ. 15 ಸಾವಿರ ರೂ. ಮೇಲಿನ ಶೂಗಳ ಮೇಲೆ ಜಿಎಸ್​ಟಿಯನ್ನು 18 ರಿಂದ 28ಕ್ಕೆ ಹಾಗೂ 25 ಸಾವಿರ ರೂ. ಮೇಲಿನ ಕೈ ಗಡಿಯಾರವನ್ನು ಶೇ 18ರಿಂದ 28ಕ್ಕೆ ಏರಿಕೆ ಮಾಡುವ ಪ್ರಸ್ತಾಪ ಇದೆ.
ಸದ್ಯ ಜಿಎಸ್​ಟಿಯನ್ನು 5, 12, 18 ಮತ್ತು 28ರಷ್ಟರ ಸ್ಲಾಬ್​ ಜೊತೆಗೆ ನಾಲ್ಕು ಹಂತದ ಜಿಎಸ್​ಟಿ ಹೊಂದಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಅನಕ್ಷರಸ್ಥರಿಗೆ ಅಕ್ಷರ : ನಾರಾಯಣ ಸ್ವಾಮಿ

ಚಿಂತಾಮಣಿಯ ಶಿಕ್ಷಕ ಡಾ. ಆರ್‌. ನಾರಾಯಣಸ್ವಾಮಿ ತಮ್ಮ ಶಿಕ್ಷಕ ವೃತ್ತಿಯ ಜತೆಗೆ ಸಮಾಜದಲ್ಲಿನ ಅಸಂಖ್ಯಾತ ಅನಕ್ಷರಸ್ಥರರನ್ನು ಸಾಕ್ಷರನ್ನಾಗಿ ಮಾಡುವ ಹಾಗೂ ಶಾಲೆ ಸಮುದಾಯದಕ್ಕೆ ನೈರ್ಮಲ್ಯದ...

ಮೊಟ್ಟೆ-ಬಾಳೆಹಣ್ಣು ವಿತರಣೆ : ಶಿಕ್ಷಕರ ಅಮಾನತು

ಕಲಬುರಗಿ: ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ, ಬಾಳೆಹಣ್ಣು ಹಾಗೂ ಸೇಂಗಾ ಚೆಕ್ಕಿ ವಿತರಿಸುವ ಜವಾಬ್ದಾರಿ ಮುಖ್ಯ ಶಿಕ್ಷಕರ ಮತ್ತು...

ಬಿಜೆಪಿಯ ಭರತ್ ಬೊಮ್ಮಾಯಿ ಮುನ್ನಡೆ ಸಾಧನೆ

ಶಿಗ್ಗಾಂವ : ವಿಧಾನಸಭಾ ಉಪಚುನಾವಣೆ ಫಲಿತಾಂಶ 2024 ಶನಿವಾರದಂದು ಬಿಗುವಿನ ಪರಾಕಾಷ್ಠೆಯನ್ನು ತಲುಪಿದ್ದು, 7ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ...

By-election : 2024 ರ ಕರ್ನಾಟಕ ಉಪ-ಚುನಾವಣೆ ಫಲಿತಾಂಶ

ಚೆನ್ನಪಟ್ಟಣ: ಸಂಡೂರು, ಶಿಗ್ಗಾಂವ ಮತ್ತು ಚನ್ನಪಟ್ಟಣ ಕ್ಷೇತ್ರಗಳು ಲಭ್ಯವಾಗಿ ಹಿಂದಿನ ಪ್ರತಿನಿಧಿಗಳು ಮೇ ತಿಂಗಳಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಈ ಚುನಾವಣಾ ಕದನವು ಪ್ರಾರಂಭವಾಯಿತು. ಕಾಂಗ್ರೆಸ್‌ನಿಂದ...