Electricity Cut In Bengaluru : ಬೆಸ್ಕಾಂ ತುರ್ತು ಕಾಮಗಾರಿ ಹಿನ್ನೆಲೆ ಬೆಂಗಳೂರಿನಲ್ಲಿ ಗುರುವಾರ (ನ.21) ಮತ್ತು ಶುಕ್ರವಾರ (ನ.22) ವಿದ್ಯುತ್ ವ್ಯತ್ಯಯ ಆಗಲಿದೆ. ಈ ಬಗ್ಗೆ ಬೆಸ್ಕಾಂ ಬೆಂಗಳೂರು ಮಾಹಿತಿ ನೀಡಿದೆ. ಬೆಳಗ್ಗೆ 10:30 ಯಿಂದ ಮಧ್ಯಾಹ್ನ 3:30 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಸ್ಕಾಂ ವಿದ್ಯುತ್ ಕಾಮಗಾರಿ ಹಿನ್ನೆಲೆ 2 ದಿನ ವಿದ್ಯುತ್ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಸ್ಕಾಂ ಬೆಂಗಳೂರು ಮಾಹಿತಿ ನೀಡಿದ್ದು, ನವೆಂಬರ್ 21 ಹಾಗೂ 22 ರಂದು ವಿದ್ಯುತ್ ಕಡಿತವಾಗುವ ಪ್ರದೇಶಗಳ ಪಟ್ಟಿಯನ್ನು ನೀಡಿದೆ.
ಕೆಪಿಟಿಸಿಎಲ್ ವತಿಯಿಂದ ಕೆ ಎಚ್ ಬಿ ಸಬ್‌ಸ್ಟೇಷನ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ನವೆಂಬರ್ 22 ರಂದು ಬೆಳಗ್ಗೆ 10:30 ಯಿಂದ ಮಧ್ಯಾಹ್ನ 3:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಶಿವನಹಳ್ಳಿ, ಶ್ರೀನಿಧಿ ಲೇಔಟ್, ಬಿ.ಡಬ್ಲ್ಯೂ.ಎಸ್.ಎಸ್.ಬಿ, ಪುಟ್ಟೇನಹಳ್ಳಿ, ಪಾವನಿ, ಸಿಆರ್‌ಪಿಎಫ್, ರಾಮಗೊಂಡನಹಳ್ಳಿ, ಐ.ವಿ.ಆರ್.ಐ., ಶಿರ್ಕ್ ಅಪಾರ್ಟ್ಮೆಂಟ್, ಬಿ.ಎಂ.ಎಸ್ ಹಾಸ್ಟೆಲ್, 5 ನೇ ಹಂತ ಯಲಹಂಕ ಹೊಸ ಪಟ್ಟಣ ಅನಂತಪುರ, ಪುಟ್ಟೇನಹಳ್ಳಿ, ಪಾವನಿ, ಹೆರ್ಟಿಗೆ, ಸಿಆರ್‌ಪಿಎಫ್, ಸುರದೇನಪುರ, ಸದ್ನಹಳ್ಳಿ, ಇಸ್ರೋ ಲೇಔಟ್, ಆಕಾಶಿನಾರ್ಬೆಸ್ಕಾಂ, ಎಲ್‌ಬಿಎಸ್ ನಗರ, ವೈಎನ್ಕೆ, ಎ, ಬಿ, ಸೆಕ್ಟರ್ ಆವಲಹಳ್ಳಿ, ಎಸ್.ಎನ್. ಹಳ್ಳಿ, ರಾಜನಕುಂಟೆ, ಹೊನ್ನೇನಹಳ್ಳಿ, ನಾಗೇನಹಳ್ಳಿ, ಎ.ವಿ. ಪುರ, ಮಾರಸಂದ್ರ, ಸಿಲ್ವರ್ ಓಕ್, ನೆಲಕುಂಟೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್ 21 ರ ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬಿಟಿಎಮ್ ಮೊದಲನೇ ಹಂತ, ಮೆಜಸ್ಟಿಕ್ ಅಪಾರ್ಟ್‌ಮೆಂಟ್, ಗುರಪ್ಪನಪಾಳ್ಯ, ಜೈ ಭೀಮಾ ನಗರ, ಹಳೆ ಮಡಿವಾಳ, ಬಿಟಿಎಮ್ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಕುದೂರು ಹೋಬಳಿ ನಾರಸಂದ್ರ ಗ್ರಾಮದ ಸಿದ್ದಲಿಂಗ (ಪುಟ್ಟರಾಜು) (35) ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಸೂರಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕುದೂರು ಹೋಬಳಿ ವ್ಯಾಪ್ತಿಯ ಸೂರಪ್ಪನಳ್ಳಿ ಗ್ರಾಮದ ಬಳಿ ವಿದ್ಯುತ್ ತಂತಿ ತುಂಡಾಗಿದ್ದ ವೇಳೆ ಬೆಸ್ಕಾಂ ತಂಡದೊಂದಿಗೆ ತೆರಳಿ ವಿದ್ಯುತ್ ಕಂಬವೇರಿ ದುರಸ್ತಿಗೊಳಿಸುತ್ತಿದ್ದಾಗ ವಿದ್ಯುತ್ ಸ್ಪರ್ಶವಾಗಿ ಕಂಬದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೂಡಲೆ ಗ್ರಾಮಸ್ಥರು ಮತ್ತು ಬೆಸ್ಕಾಂ ಹೊರಗುತ್ತಿಗೆ ನೌಕರರು ಕುಣಿಗಲ್ ಆಸ್ಪತ್ರೆಗೆ ಕರೆದೋಯ್ದರು ಅಷ್ಟರಲ್ಲಿಸಿದ್ದಲಿಂಗ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದರು.
ಗ್ರಾಮಸ್ಥರು ಬೆಸ್ಕಾಂ ಎಡವಟ್ಟಿನಿಂದ ಹೊರಗುತ್ತಿಗೆ ನೌಕರ ಮೃತಪಟ್ಟಿದ್ದು, ಸೂಕ್ತ ಪರಿಹಾರ ನೀಡ ಬೇಕೆಂದು ಕುದೂರು ಬೆಸ್ಕಾಂ ಎದುರು ಆಂಬ್ಯುಲೆನ್ಸ್‌ನಲ್ಲಿ ಶವವಿಟ್ಟು ಪ್ರತಿಭಟಿಸಿದರು.