spot_img
spot_img

ಗ್ರಾಹಕರಿಗಾಗಿ ಜಿಯೋ ಅದ್ಭುತ ಫೀಚರ್​ ಪರಿಚಯಿಸಿದೆ.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Block Spam Calls And SMS On Jio: ಸ್ಪ್ಯಾಮ್ ಕರೆಗಳು, ಮೆಸೇಜ್​ಗಳು ದಿನದಿನಕ್ಕೆ ಹೆಚ್ಚುತ್ತಿವೆ. ಈ ಕರೆಗಳು ಮತ್ತು ಸಂದೇಶಗಳನ್ನು ಎಐ ಮತ್ತು ಮಷಿನ್​ ಲರ್ನಿಂಗ್​ ನಿಯಂತ್ರಿಸುತ್ತೆದೆ ಎಂದು ಎಂದಿಗೂ ಭಾವಿಸಬೇಡಿ. ಏಕೆಂದರೆ, ಸೈಬರ್​ ಅಪರಾಧಿಗಳೂ ಸಹ ರೋಬೋಕಾಲ್‌ನಂತಹ ತಂತ್ರಜ್ಞಾನಗಳನ್ನು ಬಳಸಿ ವಂಚಿಸುತ್ತಿದ್ದಾರೆ. ಇದಕ್ಕಾಗಿಯೇ ಜಿಯೋ ತನ್ನ ಗ್ರಾಹಕರಿಗೆ ಅದ್ಭುತ ಫೀಚರ್​ವೊಂದನ್ನು ಪ್ರಸ್ತುತಪಡಿಸುತ್ತಿದೆ.

MyJio ಅಪ್ಲಿಕೇಶನ್ ಮೂಲಕ ಒಂದು ಕ್ಲಿಕ್‌ನಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್​ಗಳನ್ನು ಭಾಗಶಃ ನಿಲ್ಲಿಸಬಹುದಾಗಿದೆ.

ಜಿಯೋ ನೆಟ್‌ವರ್ಕ್‌ನಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್​ಗಳನ್ನು ನಿಲ್ಲಿಸಲು, ನೀವು ಡೂ ನಾಟ್​ ಡಿಸ್ಟರ್ಬ್​ (DND) ಸರ್ವಿಸ್​ ಅನ್ನು ಆ್ಯಕ್ಟಿವೇಟ್​ ಮಾಡಿಕೊಳ್ಳಬೇಕು. ಈ ಸಣ್ಣ ಸೆಟ್ಟಿಂಗ್‌ನೊಂದಿಗೆ, ನೀವು ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್​ಗಳು ಹಾಗೂ ಟೆಲಿಮಾರ್ಕೆಟಿಂಗ್ ಕರೆಗಳನ್ನು ನಿಯಂತ್ರಿಸಲು ಮತ್ತು ನಿರ್ಬಂಧಿಸಲು ಸಾಧ್ಯವಿದೆ.

ಬಳಕೆದಾರರು ಡಿಎನ್​ಡಿ ಸರ್ವಿಸ್​ ಅನ್ನು ಕಸ್ಟಮೈಸ್​ ಸಹ ಮಾಡಬಹುದಾಗಿದೆ. ನೀವು ನಿರ್ಬಂಧಿಸಬೇಕಾದ ಕರೆಗಳು ಮತ್ತು ಮೆಸೇಜ್​ಗಳ ವರ್ಗವನ್ನು ಆಯ್ಕೆ ಮಾಡುವ ಮೂಲಕ ಮತ್ತು ಅವುಗಳನ್ನು ಫಿಲ್ಟರ್ ಮಾಡುವ ಮೂಲಕ ಡಿಎನ್​ಡಿ ಸೇವೆಯನ್ನು ಕಸ್ಟಮೈಸ್ ಮಾಡಬಹುದಾಗಿದೆ. ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಇತ್ಯಾದಿ ಆಯ್ಕೆಗಳು ಇದರಲ್ಲಿವೆ.

ಕೆಲವು ಜಾಹೀರಾತು ಕರೆಗಳನ್ನು ಬರಲು ಅನುಮತಿಸಲು ಈ ಕರೆಗಳನ್ನು ಭಾಗಶಃ ನಿರ್ಬಂಧಿಸುವ ಆಯ್ಕೆಯೂ ಇದರಲ್ಲಿದೆ. ಇದಕ್ಕಾಗಿ ಕೆಲವು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಅದರ ನಂತರ ಸ್ಪ್ಯಾಮ್ ಕರೆಗಳಿಂದ ಮುಕ್ತಿ ಪಡೆಯುವಿರಿ.

ದೇಶದಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಎಸ್‌ಎಂಎಸ್‌ಗಳಿಂದ ಜನರು ಪ್ರತಿದಿನ ಮೋಸ ಹೋಗುತ್ತಿದ್ದಾರೆ. ಈ ದೃಷ್ಟಿಯಿಂದ ಟೆಲಿಕಾಂ ಕಂಪನಿಗಳು ಬಳಕೆದಾರರ ಸುರಕ್ಷತೆಗಾಗಿ ಹೊಸ ಫೀಚರ್​ಗಳನ್ನು ಒದಗಿಸುತ್ತಿವೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KEN BETWA RIVER LINKING PROJECT – ಕೆನ್-ಬೆಟ್ವಾ ನದಿ ಜೋಡಣೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

Khajuraho (Central Region): ಮಧ್ಯ ಪ್ರದೇಶದಲ್ಲಿ ಹುಟ್ಟುವ ಎರಡು ನದಿಗಳಾದ ಕೆನ್​ ಮತ್ತು ಬೆಟ್ವಾ ನದಿಗಳನ್ನು ಜೋಡಿಸಿ, ಅದರ ನೀರನ್ನು ಮಧ್ಯ ಪ್ರದೇಶ ಮತ್ತು ಉತ್ತರ...

KERALA NEWS – ಬುಧವಾರ ಸಂಜೆ ಶಬರಿಮಲೆ ಅಯ್ಯಪ್ಪನಿಗೆ ‘ತಂಗ ಅಂಗಿ’ ಆಭರಣ ತೊಡಿಸಿ ದೀಪಾರಾಧನೆ, ಡಿ.26 ರಂದು ಮಂಡಲಪೂಜೆ

 kerala (shabarimale) : ಶಬರಿಮಲೆ ಸನ್ನಿಧಾನದಲ್ಲಿ ಡಿ.25ರಂದು ವಿಶೇಷ ದೀಪಾರಾಧನೆ, ಡಿ.26 ಸಂಜೆ ಮಂಡಲಪೂಜೆ ನಡೆಯಲಿದೆ.ಅಯ್ಯಪ್ಪನಿಗೆ 'ತಂಗ ಅಂಗಿ' ಆಭರಣ ತೊಡಿಸಲಾಗುತ್ತದೆ. ರಾತ್ರಿ 11ಕ್ಕೆ ಹರಿವರಾಸನಂ...

BELAGAVI NEWS – ಬೆಳಗಾವಿ ತಾಲೂಕು ಶಾಲೆಗಳಿಗೆ ಡಿ.26, 27 ರಂದು ರಜೆ

Belagavi News : ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆ- ಗಾಂಧಿ‌ ಭಾರತ ಕಾರ್ಯಕ್ರಮ ನಿಮಿತ್ತ ಬೆಳಗಾವಿ ತಾಲೂಕಿನ ಶೈಕ್ಷಣಿಕ ವಲಯದ (ನಗರ ಮತ್ತು ಗ್ರಾಮೀಣ) ಸರಕಾರಿ,...

BJP MLA MUNIRATHNA – BJP ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ

Bangalore News: ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮ ಮುಗಿಸಿ ಹೋಗುವಾಗ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ...