spot_img
spot_img

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಬಿಇ ಪದವೀಧರರ ನೇಮಕ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಉದ್ಯೋಗ ಪ್ರಕಟಣೆ ಬಿಡುಗಡೆ ಮಾಡಿದೆ. ಇದರ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಿಡಿಎಸಿ, ನೋಯ್ಡಾವು ವಿದ್ಯುನ್ಮಾನ ಗೊಂಬೆಗಳ ಕೈಗಾರಿಕೆಯಲ್ಲಿ ಹೊಸ ಸಮೀಕರಣದ ಅಭಿವೃದ್ಧಿಯ ನಿಟ್ಟಿನಲ್ಲಿ ಒಂದು ವರ್ಷದ ಆರ್‌ ಮತ್ತು ಡಿ ಚಟುವಟಿಕೆಗಳ ಭಾಗವಾಗಲು ಇಂಜಿನಿಯರಿಂಗ್ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಂದು ವರ್ಷದ ಅವಧಿಗೆ ತಿಂಗಳಿಗೆ ರೂ.25,000 ಶಿಷ್ಯವೇತನದೊಂದಿಗೆ ಬಿಇ ಪದವೀಧರರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಮತ್ತು ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಎಂದು ತಿಳಿಸಿದ್ದಾರೆ.
ಇಲೆಕ್ಟ್ರಾನಿಕ್ಸ್‌, ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್, ಅಪ್ಲೈಡ್ ಇಲೆಕ್ಟ್ರಾನಿಕ್ಸ್‌ ಮತ್ತು ಇನ್‌ಸ್ಟ್ರುಮೆಂಟೇಷನ್, ರೊಬಾಟಿಕ್ಸ್‌ ಮತ್ತು ಆಟೋಮೇಷನ್, ಸಿಎಸ್‌ಇ ಮತ್ತು ಸಿಎಸ್‌ಇಯ ಪೂರಕವಾದ ಬ್ರ್ಯಾಂಚ್‌ಗಳು (ಎಐ, ಎಂ.ಎಸ್, ಐಟಿ, ಐಒಟಿ ಇತ್ಯಾದಿ) ವಿಷಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬಿಇ ತೇರ್ಗಡೆ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯ ಮತ್ತು ಸಂದರ್ಶನದಲ್ಲಿನ ಸಾಧನೆಯನ್ನು ಆಧರಿಸಿ ಅರ್ಹತಾ ಮಾನದಂಡದನ್ವಯ ಪದವಿ ಹೊಂದಿರುವವರನ್ನು ಅಂತಿಮಗೊಳಿಸಲಾಗುವುದು.
14ನೇ ಡಿಸೆಂಬರ್ 2024 ಆನ್‌ಲೈನ್‌ ನೊಂದಣಿಗೆ ಕೊನೆ ದಿನಾಂಕವಾಗಿದೆ. 20ನೇ ಡಿಸೆಂಬರ್ 2024 ರಂದು ಸಮಸ್ಯೆಗಳನ್ನು ಪರಿಹರಿಸುವ ಪರೀಕ್ಷೆ ದಿನಾಂಕವಾಗಿದ್ದು, 6 ರಿಂದ 8, ಜನವರಿ 2025 ರಂದು ಸಂದರ್ಶನ ದಿನಾಂಕಗಳಾಗಿವೆ.
ಶುಕ್ರವಾರ, 10ನೇ ಜನವರಿ 2025 ರಂದು ಆಯ್ಕೆಯಾಗಿರುವ ಅಭ್ಯರ್ಥಿಗಳ ಘೋಷಿಸಿದ್ದಾರೆ. 27ನೇ ಜನವರಿ 2025 ರಂದು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುವ ದಿನಾಂಕವಾಗಿದೆ.
ನೋಂದಣಿಗಾಗಿ ಆಸಕ್ತರು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://forms.gle/E2hJWdT88fqknnG6A
ಮೇಲಿನ ವೆಬ್‌ ಲಿಂಕ್‌ನಲ್ಲಿ ಅರ್ಜಿ ಭರ್ತಿ ಮಾಡಬೇಕು. ಇತರೆ ಯಾವುದೇ ವಿಧಾನದಲ್ಲಿ ಈ ಶಿಶಿಕ್ಷು ತರಬೇತಿಗೆ ಅರ್ಜಿ ಹಾಕಲು ಅವಕಾಶ ಇಲ್ಲ.
ಅರ್ಜಿ ಸಲ್ಲಿಸಿ ಈ ಹುದ್ದೆಗಳಿಗೆ ಆಯ್ಕೆಯಾದ ಯುವಕರು ಹಾಗೂ ಯುವತಿಯರಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯದ ವ್ಯವಸ್ಥೆ ಇರುತ್ತದೆ. ಶಿಷ್ಯವೇತನದ ಜತೆಗೆ ಈ ವಸತಿ ಸೌಲಭ್ಯವನ್ನು ನೀಡಲಾಗುತ್ತದೆ. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಅಭ್ಯರ್ಥಿಗಳು toyproject@cdac.in ಇಮೇಲ್‌ ವಿಳಾಸಕ್ಕೆ ಇ-ಮೇಲ್ ಮಾಡಬಹುದು.
ಆನ್‌ಲೈನ್‌ ಅರ್ಜಿ ಭರ್ತಿ ಮಾಡಲು ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜನ್ಮ ದಿನಾಂಕ ದಾಖಲೆ / ಮಾಹಿತಿ, ಮೇಲೆ ತಿಳಿಸಿದ ಯಾವುದೇ ಬ್ರ್ಯಾಂಚ್ ಬಿಇ ಶಿಕ್ಷಣದ ಪ್ರಮಾಣಪತ್ರ ಅಗತ್ಯ. ಹುದ್ದೆಯ ಅವಧಿ ಒಂದು ವರ್ಷ ಮಾತ್ರ ಇರುತ್ತದೆ. ನಂತರದಲ್ಲಿ ಹುದ್ದೆಯ ಮೇಲೆ ಯಾವುದೇ ರೀತಿ ಹಕ್ಕು ಚಲಾಯಿಸಲು ಅವಕಾಶ ಇರುವುದಿಲ್ಲ. ಹುದ್ದೆ ನಿರ್ವಹಿಸಿದ ಕುರಿತು ಪ್ರಮಾಣಪತ್ರವನ್ನು ನೀಡಲಾಗುತ್ತದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಉಲ್ಟಾ ಪಲ್ಟಾ..

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ...

ತಿರುಪತಿ: ಲಡ್ಡು ಖರೀದಿಸಲು ಇದ್ದ ಮಿತಿ ತೆಗೆದು ಹಾಕಿದ ಟಿಟಿಡಿ

ಆಂಧ್ರ ಪ್ರದೇಶ: ಇನ್ನು ಮುಂದೆ ತಿರುಪತಿಗೆ ಭೇಟಿ ನೀಡುವ ಭಕ್ತರು ಕೇಳಿದಷ್ಟೂ ಲಡ್ಡು ನೀಡಲು ಹಾಗೂ ಲಡ್ಡು ತಯಾರಿಸಲು ಬೇಕಾಗಿರುವ ಸಿಬ್ಬಂದಿ ನೇಮಕಕ್ಕೂ ಟಿಟಿಡಿ...

ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್​ಗಳ ಸ್ಥಾಪನೆ

ಮಂಗಳೂರು: ಇಂದು ಅಂತಾರಾಷ್ಟ್ರೀಯ ಬ್ಯಾಂಕ್ ದಿನ. ಆರ್ಥಿಕ ಅಭಿವೃದ್ಧಿ, ಶ್ರೇಯಸ್ಸಿಗೆ ಆಧಾರವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗೌರವಿಸುವ ದಿನ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ...

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೋ

ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ...