ಚೆನ್ನೈ: ತಮಿಳುನಾಡಿನ ಮೈಲಾಡುತುರೈ, ನಾಗಪಟ್ಟಣಂ ಮತ್ತು ಪುದುಚೇರಿಯ ಕಾರೈಕಲ್ನ ಜಿಲ್ಲಾಧಿಕಾರಿಗಳು ಶಾಲಾ-ಕಾಲೇಜುಗಳಿಗೆ ದಿನದ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಇಂದು ಶಾಲಾ-ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರಿನಲ್ಲೂ ಮಂಗಳವಾರದಿಂದ ಮೋಡ ಕವಿದ ವಾತಾವರಣವಿದೆ.
ತಮಿಳುನಾಡಿನ ಮೈಲಾಡುತುರೈ, ನಾಗಪಟ್ಟಣಂ, ತಿರುವಾರುರ್ ಮತ್ತು ಕರೈಕಲ್ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಹವಾಮಾನ ಕೇಂದ್ರ ರೆಡ್ ಅಲರ್ಟ್ ನೀಡಿದೆ. ಜೊತೆಗೆ ಕಡಲೂರು, ಮಯಿಲದುತ್ತುರೈ ಮತ್ತು ಕರೈಕಲ್ ಜಿಲ್ಲೆಗಳಲ್ಲಿ ಬುಧವಾರದವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ.
ವಿಲ್ಲುಪುರಂ, ಕಡಲೂರು, ಅರಿಯಲೂರ್, ತಂಜಾವೂರ್, ಪುಡುಕೊಟ್ಟೈ, ಶಿವಗಂಗಾ ಜಿಲ್ಲೆಗಳೂ ಸೇರಿದಂತೆ ಪುದುಚೇರಿಯಲ್ಲಿ 11.56 ಸೆಂ.ಮೀನಿಂದ 20.44 ಸೆಂ.ಮೀವರೆಗೆ ಸಾಧಾರಣದಿಂದ ಅತಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ದಿಕ್ಕಿಗೆ ಗಾಳಿ ಬಲಗೊಳ್ಳುವ ಸಾಧ್ಯತೆ ಇದೆ. ಚಂಡಮಾರುತ ಶ್ರೀಲಂಕಾ ಮತ್ತು ತಮಿಳುನಾಡು ಕರಾವಳಿಯ ಉತ್ತರ ಮತ್ತು ವಾಯುವ್ಯ ದಿಕ್ಕಿನೆಡೆಗೆ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಮನಾಥಪುರಂ, ತತಿರುಚಿರಪಳ್ಳಿ, ಪೆರಂಬಲೂರ್, ಕಲಕುರಿಚಿ, ಚೆಂಗಲ್ಪಟ್ಟು ಜಿಲ್ಲೆಗಳಲ್ಲೂ ಕೂಡ ಮಂಗಳವಾರ ಜೋರು ಮಳೆಯಾಗುವ ಸಾಧ್ಯತೆ ಇದೆ.
ಅರಿಯಲೂರ್, ತಿರುವರೂರ್, ನಗಪತ್ತಿನಂ, ತಾಂಜಾವೂರ್, ಪುದುಕೊಟ್ಟೈ, ವಿಲ್ಲುಪುರಂ ಮತ್ತು ತಿರುಚ್ಚಿ, ಕಾಂಚೀಪುರಂ, ಚೆನ್ನೈ, ಚೆಂಗಲ್ಪೆಟ್ಟು ಜಿಲ್ಲೆ ಹಾಗೂ ಪುದುಚೇರಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನವೆಂಬರ್ 28ರವರೆಗೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ತಮಿಳುನಾಡಿನ ಸುಮಾರು 90 ಅಣೆಕಟ್ಟುಗಳು ಶೇ 60ರಷ್ಟು ಭರ್ತಿಯಾಗಿದೆ.