spot_img
spot_img

ಪ್ರೀ ಪೇಯ್ಡ್ ವಿದ್ಯುತ್ ಮೀಟರ್ ಎಲ್ಲೆಡೆ ಜಾರಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Pre Paid Electricity Meter by BESCOM – ಬೆಸ್ಕಾಂ ವತಿಯಿಂದ ಪ್ರೀ ಪೇಯ್ಡ್ ವಿದ್ಯುತ್ ಮೀಟರ್ ಗಳನ್ನು ಪ್ರತಿಮನೆಗೂ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಮೊದಲು ಹೊಸದಾಗಿ ನಿರ್ಮಾಣವಾಗುವ ಕಟ್ಟಡಗಳಿಗೆ ಇವು ಕಡ್ಡಾಯವಾಗಲಿದೆ.

ಆನಂತರದಲ್ಲಿ ಹಳೆಯ ಮನೆಗಳಿಗೆ ಅಥವಾ ವಾಣಿಜ್ಯ ಮಳಿಗೆ – ಸಂಕೀರ್ಣಗಳಿಗೆ ಪ್ರೀ ಪೇಯ್ಡ್ ಮೀಟರ್ ಗಳನ್ನು ಕಡ್ಡಾಯಗೊಳಿಸಲು ನಿರ್ಧರಿಲಾಗಿದೆ. ಪ್ರೀ ಪೇಯ್ಡ್ ಮೀಟರ್ ಜಾರಿಯಾದರೂ ಗೃಹ ಜ್ಯೋತಿ ಇತ್ಯಾದಿ ಯೋಜನೆಗಳು ಮುಂದುವರಿಯುತ್ತವೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಕೆಲವು ವರ್ಷಗಳ ಹಿಂದೆಯೇವತಿಯಿಂದ ಪ್ರಸ್ತಾಪಿಸಲ್ಪಟ್ಟಿದ್ದ ಪ್ರೀ-ಪೇಯ್ಡ್ ವಿದ್ಯುತ್ ಮೀಟರ್ ಯೋಜನೆಯನ್ನು ಜಾರಿಗೊಳಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಚಿಂತನೆ ನಡೆಸಿದೆ. ಪ್ರೀ ಪೇಯ್ಡ್ ಮೊಬೈಲ್ ಮಾದರಿಯಲ್ಲೇ ಮೊದಲೇ ಹಣವನ್ನು ಕಟ್ಟಿ ವಿದ್ಯುತ್ತನ್ನು ಪಡೆಯುವ ಈ ಹೊಸ ವಿಧಾನಕ್ಕೆ ಜನರನ್ನು ನಿಧಾನವಾಗಿ ಹೊಂದಿಸಲು ನಿರ್ಧರಿಸಿದ್ದಾರೆ.

ಇಂಧನ ಇಲಾಖೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲೇ ಈ ಬಗ್ಗೆ ನಿರ್ಧಾರವಾಗಿದ್ದು, ಮೊದಲು ಬೆಸ್ಕಾಂ ಅಡಿಯಲ್ಲಿ ಈ ಮೀಟರ್ ಗಳನ್ನು ಜಾರಿಗೊಳಿಸಲಾಗುತ್ತದೆ. ಆನಂತರ ಚೆಸ್ಕಾಂ, ಮೆಸ್ಕಾಂ ಮುಂತಾದ ವಿದ್ಯುತ್ ಪ್ರಸರಣ ನಿಗಮ ನಿಯಮಿತಗಳಿಗೂ ಇದನ್ನು ಅನ್ವಯಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸದ್ಯಕ್ಯೆ ಲಭ್ಯವಿರುವ ಮಾಹಿತಿಯ ಪ್ರಕಾರ, ಮೊದಲು ಹೊಸ ಕಟ್ಟಡಗಳಿಗೆ ಮಾತ್ರ ಪ್ರೀ ಪೇಯ್ಡ್ ಮೀಟರ್ ಕಡ್ಡಾಯಗೊಳ್ಳಲಿದೆ. ಅಂದರೆ, ಹೊಸದಾಗಿ ಮನೆ ಕಟ್ಟುವವರು ಅಥವಾ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವವರು ಆ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಬೆಸ್ಕಾಂಗೆ ಅರ್ಜಿ ಸಲ್ಲಿಸಿದಾಗ ಅವರಿಗೆ ವಿದ್ಯುತ್ ಸಂಪರ್ಕದ ಜೊತೆಗೆ ನಿಗದಿತ ಠೇವಣಿಯನ್ನು ಇರಿಸಿಕೊಂಡು ಪ್ರೀ ಪೇಯ್ಡ್ ಮೀಟರನ್ನೇ ಕೊಡಲಾಗುತ್ತದೆ.

ನಂತರದ ದಿನಗಳಲ್ಲಿ ಹಂತಹಂತವಾಗಿ, ಹಳೆಯ ಮನೆಗಳಿಗೆ ಅಥವಾ ಕಟ್ಟಡಗಳಿಗೆ ಪ್ರೀ ಮೀಟರನ್ನು ಹಾಕಲಾಗುತ್ತದೆ. ಹಳೆಯ ಮನೆಗಳು ಅಥವಾ ಕಟ್ಟಡಗಳಲ್ಲಿ ಈಗಿರುವ ಪೋಸ್ಟ್ ಪೇಯ್ಡ್ ಮೀಟರನ್ನು ತೆಗೆದು ಪ್ರೀ ಪೇಯ್ಡ್ ಮೀಟರ್ ಗಳನ್ನು ಅಳವಡಿಸಲಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಈ ಮಾದರಿ ಜಾರಿಯಾಗಿದ್ದು, ಕರ್ನಾಟಕದಲ್ಲಿ ಸದ್ಯದಲ್ಲೇ ಇದನ್ನು ಅನುಸರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅನೇಕ ವರ್ಷಗಳಿಂದ ಪೋಸ್ಟ್ ಪೇಯ್ಡ್ ಮೀಟರ್ ಗಳ ಆಧಾರದಲ್ಲೇ ವಿದ್ಯುತ್ ಬಿಲ್ ಗಳನ್ನು ನೀಡಲಾಗುತ್ತಿದೆ. ಆದರೆ, ವರ್ಷಕ್ಕೆ ಅದೆಷ್ಟೋ ಬಿಲ್ ಗಳ ಬಾಕಿ ಪಾವತಿಯಾಗುತ್ತಲೇ ಇಲ್ಲ. ಅದರಿಂದ ಬೆಸ್ಕಾಂಗೆ ವಾರ್ಷಿಕ ನೂರಾರು ಕೋಟಿ ರೂ.ಗಳ ನಷ್ಟ ಉಂಟಾಗುತ್ತಿದೆ. ದಂಡ ಪ್ರಯೋಗ, ವಿದ್ಯುತ್ ಸಂಪರ್ಕ ತೆಗೆದುಹಾಕುವುದು ಇತ್ಯಾದಿ ಯಾವುದೇ ಕಠಿಣ ಕ್ರಮಗಳನ್ನು ಕೈಗೊಂಡರೂ ಕೆಲವು ವಿದ್ಯುತ್ ಬಿಲ್ ಗಳು ಪಾವತಿಯಾಗುತ್ತಿಲ್ಲ. ಹಾಗಾಗಿ, ಪ್ರೀ ಪೇಯ್ಡ್ ಮೀಟರ್ ಗಳನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೀ ಪೇಯ್ಡ್ ಸಿಮ್ ಕಾರ್ಡ್ ಗಳ ರೀತಿಯಲ್ಲೇ ಪ್ರೀ ಪೇಯ್ಡ್ ವಿದ್ಯುತ್ ಮೀಟರ್ ಗಳೂ ಕಾರ್ಯ ನಿರ್ವಹಿಸುತ್ತವೆ. ಪ್ರೀ ಪೇಯ್ಡ್ ಸಿಮ್ ಕಾರ್ಡ್ ಗಳನ್ನು ರೀಚಾರ್ಜ್ ಮಾಡಿಸಿ ತಮಗೆ ಬೇಕಾದಷ್ಟು ಟಾಕ್ ಟೈಮ್ ಹಾಗೂ ತಮಗೆ ಅಗತ್ಯವಿರುವಷ್ಟು ಇಂಟರ್ ನೆಟ್ ಡೇಟಾವನ್ನು ಪಡೆಯಬಹುದು. ಹಾಗೆಯೇ, ಪ್ರೀ ಪೇಯ್ಡ್ ವಿದ್ಯುತ್ ಮೀಟರ್ ಗಳನ್ನು ರೀಚಾರ್ಡ್ ಮಾಡಿಸುವ ಮೂಲಕ ತಮಗೆ ಬೇಕಾದಷ್ಟು ಯೂನಿಟ್ ಗಳನ್ನು ಗ್ರಾಹಕರು ಪಡೆಯಬಹುದು. ತಿಂಗಳಿಗೆ ಇಷ್ಟು ವಿದ್ಯುತ್ ಬೇಕಾಗಬಹುದು ಎಂಬುದನ್ನು ಲೆಕ್ಕ ಹಾಕಿ ಅಷ್ಟು ವಿದ್ಯುತ್ತಿಗೆ ಬೇಕಾದ ಹಣವನ್ನು ರೀಚಾರ್ಜ್ ಮಾಡಿಸಿಕೊಳ್ಳಬಹುದು. ಒಂದು ವೇಳೆ, ತಿಂಗಳಿಗೆ ಬೇಕಾದಷ್ಟು ವಿದ್ಯುತ್ ಬೇಗನೇ ಮುಗಿದರೆ ಪುನಃ ರೀಚಾರ್ಜ್ ಮಾಡಿಸಿಕೊಳ್ಳಲು ಅವಕಾಶವಿರಲಿದೆ.

ಪ್ರೀ ಪೇಯ್ಡ್ ಮೀಟರ್ ಗಳು ಜಾರಿಯಾದರೂ ಗೃಹಜ್ಯೋತಿ ಯೋಜನೆ ಇದ್ದೇ ಇರುತ್ತೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಗೃಹ ಜ್ಯೋತಿ ಯೋಜನೆಯಡಿ ನೀಡಲಾಗುವ ಸರಾಸರಿ ಉಚಿತ ವಿದ್ಯುತ್ ಯೂನಿಟ್ ಗಳು ಮಆಗಲೂ ಮುಂದುವರಿಯುತ್ತವೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ಸ್ಪಷ್ಟ ರೂಪುರೇಷೆಗಳನ್ನು ನಿರ್ಧರಿಸಲಾಗುತ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KEN BETWA RIVER LINKING PROJECT – ಕೆನ್-ಬೆಟ್ವಾ ನದಿ ಜೋಡಣೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

Khajuraho (Central Region): ಮಧ್ಯ ಪ್ರದೇಶದಲ್ಲಿ ಹುಟ್ಟುವ ಎರಡು ನದಿಗಳಾದ ಕೆನ್​ ಮತ್ತು ಬೆಟ್ವಾ ನದಿಗಳನ್ನು ಜೋಡಿಸಿ, ಅದರ ನೀರನ್ನು ಮಧ್ಯ ಪ್ರದೇಶ ಮತ್ತು ಉತ್ತರ...

KERALA NEWS – ಬುಧವಾರ ಸಂಜೆ ಶಬರಿಮಲೆ ಅಯ್ಯಪ್ಪನಿಗೆ ‘ತಂಗ ಅಂಗಿ’ ಆಭರಣ ತೊಡಿಸಿ ದೀಪಾರಾಧನೆ, ಡಿ.26 ರಂದು ಮಂಡಲಪೂಜೆ

 kerala (shabarimale) : ಶಬರಿಮಲೆ ಸನ್ನಿಧಾನದಲ್ಲಿ ಡಿ.25ರಂದು ವಿಶೇಷ ದೀಪಾರಾಧನೆ, ಡಿ.26 ಸಂಜೆ ಮಂಡಲಪೂಜೆ ನಡೆಯಲಿದೆ.ಅಯ್ಯಪ್ಪನಿಗೆ 'ತಂಗ ಅಂಗಿ' ಆಭರಣ ತೊಡಿಸಲಾಗುತ್ತದೆ. ರಾತ್ರಿ 11ಕ್ಕೆ ಹರಿವರಾಸನಂ...

BELAGAVI NEWS – ಬೆಳಗಾವಿ ತಾಲೂಕು ಶಾಲೆಗಳಿಗೆ ಡಿ.26, 27 ರಂದು ರಜೆ

Belagavi News : ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆ- ಗಾಂಧಿ‌ ಭಾರತ ಕಾರ್ಯಕ್ರಮ ನಿಮಿತ್ತ ಬೆಳಗಾವಿ ತಾಲೂಕಿನ ಶೈಕ್ಷಣಿಕ ವಲಯದ (ನಗರ ಮತ್ತು ಗ್ರಾಮೀಣ) ಸರಕಾರಿ,...

BJP MLA MUNIRATHNA – BJP ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ

Bangalore News: ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮ ಮುಗಿಸಿ ಹೋಗುವಾಗ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ...