ಗ್ರೂಪ್-ಸಿ ಭೂಮಾಪಕರ ಹುದ್ದೆಗಳ ನೇಮಕಾತಿಗಾಗಿ 2024ರ ಫೆಬ್ರುವರಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿಗಳನ್ನು ಆಹ್ವಾನ ಮಾಡಿತ್ತು. ಅರ್ಜಿ ಸಲ್ಲಿಕೆ ಕಾಲಾವಧಿಯು ಕೊನೆಗೊಂಡಿತ್ತು. ಆದರೆ ಇದೀಗ ಈ ಹುದ್ದೆಗಳ ಸಂಖ್ಯೆ ಹೆಚ್ಚಿಸಿ, ವಯೋಮಿತಿ ಸಡಿಲಿಕೆ ಮಾಡಿ ಮತ್ತೊಮ್ಮೆ ಅರ್ಜಿಗಳನ್ನ ಆಹ್ವಾನ ಮಾಡಲಾಗಿದೆ.
2023-24ನೇ ಸಾಲಿನ ಗ್ರೂಪ್-ಸಿ ವೃಂದದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆ ಇಲಾಖೆಯಲ್ಲಿನ ಭೂಮಾಪಕರು ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ಹೀಗಾಗಿ ಈ ಮೊದಲು ತಾಂತ್ರಿಕ ಕಾರಣಗಳಿಂದ ಗ್ರೂಪ್-ಸಿ ವೃಂದದ ಭೂಮಾಪಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸದೇ ಇರುವವರು, ಶುಲ್ಕ ಪಾವತಿ ಮಾಡದೇ ಇರುವವರು, ಕೊನೆ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡದಿರುವವರು ಈಗ ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು. ಈ ಒಂದು ಅವಕಾಶವನ್ನು ಅಭ್ಯರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು.
ಮೊದಲಿಗೆ ಉಳಿಕೆ ಮೂಲ ವೃಂದದ 264 ಹುದ್ದೆ ಮತ್ತು ಹೈದ್ರಾಬಾದ್- ಕರ್ನಾಟಕ ಸ್ಥಳೀಯ ವೃಂದದಕ್ಕೆ 100 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿತ್ತು. ಈಗ ಇವುಗಳಿಗೆ ಉಳಿಕೆ ಮೂಲ ವೃಂದಕ್ಕೆ 296 ಹುದ್ದೆಗಳು ಹಾಗೂ ಹೈದರಾಬಾದ್ ಕರ್ನಾಟಕ ವೃಂದಕ್ಕೆ 90 ಹುದ್ದೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಹೀಗಾಗಿ 560 ಹುದ್ದೆಗಳು ಉಳಿಕೆ ಮೂಲ ವೃಂದ, 190 ಹೈದರಾಬಾದ್ ಕರ್ನಾಟಕ ವೃಂದ ಹುದ್ದೆಗಳಿವೆ. ಒಟ್ಟು 750 ಭೂಮಾಪಕರು ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಗ್ರೂಪ್-ಸಿ ಭೂಮಾಪಕರ ಹುದ್ದೆಗಳಿಗೆ ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ಈ ವಯೋಮಿತಿ ಸಡಿಲಿಕೆ ಈ ಕೆಳಗಿನಂತೆ ಇದೆ.
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು- 35 ರಿಂದ 38 ವರ್ಷ
ಹಿಂದುಳಿದ ವರ್ಗದ ಅಭ್ಯರ್ಥಿಗಳು- 38 ರಿಂದ 41 ವರ್ಷ
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳು- 40 ರಿಂದ 43 ವರ್ಷ
ಪಿಯುಸಿಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಆಗಿರಬೇಕು. ಗಣಿತದಲ್ಲಿ ಶೇ.60 ಅಂಕ ಪಡೆದಿರಬೇಕು. ಇದರ ಜೊತೆ ಬಿಇ, ಬಿ.ಟೆಕ್ ಈ ಪದವಿಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು
ಸರ್ಕಾರದ ಉದ್ಯೋಗ ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೆ ಟ್ರೇಡ್ನಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು- 600 ರೂಪಾಯಿ
ಒಬಿಸಿ ಅಭ್ಯರ್ಥಿಗಳು- 300 ರೂಪಾಯಿ
ಮಾಜಿ ಸೈನಿಕರಿಗೆ 50 ರೂಪಾಯಿ
ಎಸ್‌ಸಿ, ಎಸ್‌ಟಿ, ಪ್ರ-1 ಅಭ್ಯರ್ಥಿಗಳು- ಶುಲ್ಕ ವಿನಾಯಿತಿ ಇದೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 09 ಡಿಸೆಂಬರ್ 2024
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now