ಹುಬ್ಬಳ್ಳಿ: ಕೇರಳದ ಕೊಲ್ಲಂವರೆಗೆ ಕರ್ನಾಟಕದ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಎರಡು ಪ್ರತ್ಯೇಕ ರೈಲುಗಳ ಸೇವೆಗಳನ್ನು ಜಾರಿಗೊಳಿಸಲಾಗಿದೆ. ಹುಬ್ಬಳ್ಳಿ-ಕೊಲ್ಲಂ ಮತ್ತು ಬೆಳಗಾವಿ-ಕೊಲ್ಲಂ ನಿಲ್ದಾಣಗಳ ನಡುವೆ ಒಟ್ಟು ಆರು ಟ್ರಿಪ್ ಗಳ ವಿಶೇಷ ರೈಲು ಸೇವೆ ನೀಡಲಾಗುತ್ತದೆ.
ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯು ಹುಬ್ಬಳ್ಳಿ-ಕೊಲ್ಲಂ ಮತ್ತು ಬೆಳಗಾವಿ-ಕೊಲ್ಲಂ ನಿಲ್ದಾಣಗಳ ನಡುವೆ ಒಟ್ಟು ಆರು ಟ್ರಿಪ್ ವಿಶೇಷ ರೈಲುಗಳ ಸೇವೆಗೆ ಅವಕಾಶ ಕಲ್ಪಿಸಿದೆ.ಹುಬ್ಬಳ್ಳಿ-ಕೊಲ್ಲಂ-ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್(6 ಟ್ರಿಪ್) ವ್ಯವಸ್ಥೆ ಮಾಡಲಾಗಿದೆ.
ಡಿಸೆಂಬರ್ 5 ರಿಂದ 2025 ಜನವರಿ 9 ರವರೆಗೆ ಹುಬ್ಬಳ್ಳಿಯಿಂದ ಪ್ರತಿ ಗುರುವಾರ ಸಂಜೆ 5.30ಕ್ಕೆ ಹೊರಡಲಿದ್ದು, ಮರುದಿನ (ಶುಕ್ರವಾರ) ಸಂಜೆ 4.30ಕ್ಕೆ ಕೊಲ್ಲಂ ತಲುಪಲಿದೆ. ಅದರಂತೆ ಡಿಸೆಂಬರ್ 6 ರಿಂದ 2025 ಜನವರಿ 10ರವರೆಗೆ ಕೊಲ್ಲಂನಿಂದ ಪ್ರತಿ ಶುಕ್ರವಾರ ಸಂಜೆ 6.30ಕ್ಕೆ ರೈಲು ಹೊರಡಲಿದ್ದು, ಮರುದಿನ (ಶನಿವಾರ) ಸಂಜೆ 7.35ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ, ಮಾವೇಲಿಕರ ಮತ್ತು ಕಾಯಂಕುಲಂ ನಿಲ್ದಾಣಗಳಲ್ಲಿನಿಲುಗಡೆಯಾಗಲಿದೆ.
ಬೆಳಗಾವಿ-ಕೊಲ್ಲಂ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್(6 ಟ್ರಿಪ್) ರೈಲು ವ್ಯವಸ್ಥೆ ಮಾಡಲಾಗಿದೆ. ಇದು ಡಿಸೆಂಬರ್ 9 ರಿಂದ 2025 ಜನವರಿ 13ರವರಗೆ ಪ್ರತಿ ಸೋಮವಾರ ಮಧ್ಯಾಹ್ನ 2.30ಕ್ಕೆ ಹೊರಡಲಿದ್ದು, ಮರುದಿನ (ಮಂಗಳವಾರ) ಸಂಜೆ 4.30ಕ್ಕೆ ಕೊಲ್ಲಂ ತಲುಪಲಿದೆ. ಅದರಂತೆ ಡಿಸೆಂಬರ್ 10 ರಿಂದ 2025 ಜನವರಿ 14ರವರೆಗೆ ಪ್ರತಿ ಮಂಗಳವಾರ ಈ ರೈಲು ಕೊಲ್ಲಂನಿಂದ ಪ್ರತಿ ಮಂಗಳವಾರ ಸಂಜೆ 6.30ಕ್ಕೆ ಹೊರಡಲಿದ್ದು, ಮರುದಿನ (ಬುಧವಾರ) ರಾತ್ರಿ 10ಕ್ಕೆ ಬೆಳಗಾವಿ ತಲುಪಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿಖಾನಾಪುರ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ ಮತ್ತು ಕಾಯಂಕುಲಂ ನಿಲ್ದಾಣಗಳಲ್ಲಿನಿಲುಗಡೆಯಾಗಲಿದೆ.
ಹುಬ್ಬಳ್ಳಿ-ಬೆಳಗಾವಿಯಿಂದ ಕೊಲ್ಲಂಗೆ ಹೊರಡುವ ಈ ವಿಶೇಷ ರೈಲುಗಳು 1 ಎಸಿ ಟು-ಟೈರ್, 4 ಎಸಿ ತ್ರಿ-ಟೈರ್, 11 ಸ್ಲೀಪರ್ ಕ್ಲಾಸ್ ಮತ್ತು 1 ಎಸ್‌ಎಲ…ಆರ್‌ಡಿ ಮತ್ತು 1 ಲಗೇಜ್, ಬ್ರೇಕ್ ಮತ್ತು ಜನರೇಟರ್ ವ್ಯಾನ್ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.