ಪ್ಯಾರಿಸ್ ಒಲಂಪಿಕ್ ನಲ್ಲಿ ಭಾರತದ ಒಟ್ಟು ಆಟಗಾರರಷ್ಟು?
ಭಾರತಕ್ಕೆ ದೊಡ್ಡ ಸಂಕಷ್ಟ!
ಈ ಬಾರಿಯ ಟಿ ಟ್ವೆಂಟಿ ವಿಶ್ವ ಕಪ್ ಮುಕ್ತಾಯವಾದ ನಂತರ ಹಿಟ್ಮ್ಯಾನ್ ರೋಹಿತ್ ಶರ್ಮಾ(Rohit Sharma) ಹಾಗೂ ಕಿಂಗ್ ಕೊಹ್ಲಿ (Virat Kohli) ರಿಟೈರ್ಮೆಂಟ್ ಪಡೆದುಕೊಂಡಿದ್ದಾರೆ ಕಾರಣ ಅವರ ಒಂದು ಸ್ಥಾನ ತುಂಬಲು ಹೆಡ್ ಕೋಚ್ ಗೌತಮ್ ಗಂಭೀರ್(Gautam Gambhir) ಅವರಿಗೆ ಸಾಧ್ಯನಾ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದೆ HSR NEWS.
ಇದನ್ನು ಓದಿರಿ: India VS Sri Lanka: ಟೀಮ್ ಇಂಡಿಯಾಗೆ ದೊಡ್ಡ ಸಂಕಷ್ಟ
ಭಾರತದ ಪ್ಲೇಯರ್ಸ್ ಆತ ಹೇಗಿದೆ?
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಇಂಪ್ರೆಶನ್ ಹೇಗಿರುತ್ತೆ ಎಂಬುದೇ ಒಂದು ದೊಡ್ಡ ಪ್ರಶ್ನೆ ಹಾಗೂ ಭಾರತದ ಯಾವ ಆಟಗಾರರು ಪ್ಯಾರಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ನಿಮ್ಮ ಮುಂದೆ ಪೂರ್ಣ ಮಾಹಿತಿ ನೀಡುತ್ತಿದ್ದೇವೆ.
Paris 2024 olympics:
(paris 2024 olympics) ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತದ 117 ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ ಅದರಲ್ಲೂ ಕೂಡ 47 ಜನ ಮಹಿಳಾ ಕ್ರೀಡಾಪಟುಗಳು ಇರುವುದು ದೊಡ್ಡ ವಿಶೇಷವಾಗಿದೆ, ಮತ್ತು ಈ ಬಾರಿಯ ಪ್ಯಾರಶ್ ಒಲಂಪಿಕ್ ನಲ್ಲಿ ಭಾರತಕ್ಕೆ ಎಷ್ಟು ಚಿನ್ನ ಬರಬಹುದು ಎಂದು ಕಾಯ್ದು ನೋಡಬೇಕಾಗಿದೆ.
33ನೇ ಆವೃತ್ತಿಯ ಬೇಸಿಗೆ olympics
33ನೇ ಆವೃತ್ತಿಯ ಬೇಸಿಗೆ ಒಲಂಪಿಕ್ಸ್ ಗಳಿಗೆ ಅಧಿಕೃತವಾಗಿ ಚಾಲನೆ ಸಿಕ್ಕಾಗಿದೆ. ಫ್ರಾನ್ಸ್ (France) ರಾಜಧಾನಿ ಪ್ಯಾರಿಸ್ ನಲ್ಲಿ ಈ ಒಂದು ದೊಡ್ಡ ಆಟದ ಕೂಟ ಜಮಾಯಿಸಿದೆ. ಅದರಲ್ಲೂ ಕೂಡ ಭಾರತದ 117 ಸ್ಪರ್ಧಿಗಳು ಭಾಗಿಯಾಗಲಿದ್ದಾರೆ. ಮತ್ತು ಮೊದಲಿಗೆ ಶನಿವಾರ ಮಧ್ಯಾಹ್ನದಂದು ಏರ್ ರೈಫಲ್ (Air Rifal) ದಿಂದ ಭಾರತ ಅಧಿಕೃತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಇದಾದ ಬಳಿಕ ಹಲವು ಕ್ರೀಡೆಗಳಲ್ಲಿ ಭಾರತ ಭಾಗವಹಿಸುತ್ತೆ ಎಂಬ ಖಚಿತ ಮಾಹಿತಿಗಳು ಹೊರಬಂದಿದೆ.
ಯಾವ ಆಟಗಳು ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ ಎಂಬ ಮಾಹಿತಿ HSR NEWS ನಿಮ್ಮ ಮುಂದೆ ಇಡಲಿದೆ.
- 12:30 PM – ಶೂಟಿಂಗ್: 10 ಮೀ ಏರ್ ರೈಫಲ್ ಮಿಶ್ರ ತಂಡ – ರಮಿತಾ ಜಿಂದಾಲ್, ಅರ್ಜುನ್ ಬಾಬುತಾ | ಎಲವೆನಿಲ್ ವಲರಿವನ್, ಸಂದೀಪ್ ಸಿಂಗ್.
- 12:30 PM – ರೋಯಿಂಗ್: ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್ – ಬಲರಾಜ್ ಪನ್ವಾರ್
- 2:00 PM – ಶೂಟಿಂಗ್: ಪುರುಷರ 10 ಮೀ ಏರ್ ಪಿಸ್ತೂಲ್ – ಅರ್ಜುನ್ ಸಿಂಗ್ ಚೀಮಾ, ಸರಬ್ಜೋತ್ ಸಿಂಗ್
- 2:00 PM – ಶೂಟಿಂಗ್: 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ – ಚಿನ್ನ, ಕಂಚಿನ ಪದಕ ಪಂದ್ಯಗಳು (ಅರ್ಹತೆಯ ಬಳಿಕ)
- 3:30 PM- ಟೆನಿಸ್: ಪುರುಷರ ಡಬಲ್ಸ್ ಮೊದಲ ಸುತ್ತು – ಶ್ರೀರಾಮ್ ಬಾಲಾಜಿ/ರೋಹನ್ ಬೋಪಣ್ಣ vs ಫ್ಯಾಬಿಯನ್ ರೆಬೌಲ್/ಎಡ್ವರ್ಡ್ . ರೋಜರ್-ವ್ಯಾಸೆಲಿನ್ (ಫ್ರಾನ್ಸ್)
- 4:00 PM – ಶೂಟಿಂಗ್: ಮಹಿಳೆಯರ 10 ಮೀ ಏರ್ ಪಿಸ್ತೂಲ್- ಮನು ಭಾಕರ್, ರಿದಮ್ ಸಾಂಗ್ವಾನ್
- 7:10 PM- ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್- ಲಕ್ಷ್ಯ ಸೇನ್ vs ಕೆವಿನ್ ಕಾರ್ಡನ್ (ಗ್ವಾಟೆಮಾಲಾ)
- 7:15 PM- ಟೇಬಲ್ ಟೆನಿಸ್: ಪುರುಷರ ಸಿಂಗಲ್ಸ್, ಹರ್ಮೀತ್ ದೇಸಾಯಿ ವಿರುದ್ಧ ಜೈದ್ ಅಬೋ ಯಮನ್
- 8:00 PM- ಬ್ಯಾಡ್ಮಿಂಟನ್: ಪುರುಷರ ಡಬಲ್ಸ್- ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ/ಚಿರಾಗ್ ಶೆಟ್ಟಿ vs ಲ್ಯೂಕಾಸ್ ಕಾರ್ವಿ/ರೋನನ್ ಲಾಬರ್ (ಫ್ರಾನ್ಸ್)
- 9:00 PM- ಹಾಕಿ: ಪುರುಷರ ಪೂಲ್ ಬಿ – ಭಾರತ vs ನ್ಯೂಝಿಲೆಂಡ್
- 11:50 PM- ಬ್ಯಾಡ್ಮಿಂಟನ್: ಮಹಿಳೆಯರ ಡಬಲ್ಸ್- ಅಶ್ವಿನಿ ಪೊನ್ನಪ್ಪ / ತನಿಶಾ ಕ್ರಾಸ್ಟೊ vs ಕಿಮ್ ಸೋ ಯೆಂಗ್ / ಕಾಂಗ್ ಹೀ ಯೋಂಗ್ (ರಿಪಬ್ಲಿಕ್ ಆಫ್ ಕೊರಿಯಾ)
- 12:02 AM – ಬಾಕ್ಸಿಂಗ್: ಮಹಿಳೆಯರ 54 ಕೆಜಿ – ಪ್ರೀತಿ ಪವಾರ್ vs ಕಿಮ್ ಅನ್ಹ್