spot_img
spot_img

ಮಧ್ಯಪ್ರದೇಶದ 8ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮಧ್ಯಪ್ರದೇಶ: ಕನ್ಹಾ, ಸತ್ಪುರ್​, ಬಂಢಾವಗಢ್​​, ಪೆಂಚ್​, ಸಂಜಯ್​ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಎಂಟು ಹುಲಿ ಸಂರಕ್ಷಿತ ತಾಣವನ್ನು ಮಧ್ಯಪ್ರದೇಶ ಹೊಂದಿದೆ.
ಈಗಾಗಲೇ ಏಳು ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನ ಹೊಂದಿರುವ ಮಧ್ಯಪ್ರದೇಶದಲ್ಲಿ ಎಂಟನೇ ಪಾರ್ಕ್ ಪ್ರಸ್ತಾಪಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್​ಟಿಸಿಎ) ತಾಂತ್ರಿಕ ಸಮಿತಿ ಸಮ್ಮತಿ ಸೂಚಿಸಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮಾಧವ್​ ರಾಷ್ಟ್ರೀಯ ಪಾರ್ಕ್​ ಹುಲಿ ಸಂರಕ್ಷಣೆ ಉದ್ಯಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ಹಾ, ಸಾತ್ಪುರ್​, ಬಂಢಾವಗಢ್​​, ಪೆಂಚ್​, ಸಂಜಯ್​ ದುಬ್ರಿ, ಪನ್ನಾ ಮತ್ತು ವೀರಂಗನ ದುರ್ಗಾವತಿ ಎಂಬ ಎಂಟು ಹುಲಿ ಸಂರಕ್ಷಿತ ತಾಣವನ್ನು ಮಧ್ಯಪ್ರದೇಶ ಹೊಂದಿದೆ. ಈ ಕುರಿತು ಮಾತನಾಡಿರುವ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಹೆಚ್ಚುವರಿ ಪ್ರಧಾನ ಮುಖ್ಯಸ್ಥರಾದ ಎಲ್​ ಕೃಷ್ಣಮೂರ್ತಿ ಮಾತನಾಡಿ, ಎನ್​ಟಿಸಿಎ ತಾಂತ್ರಿಕ ಸಮಿತಿಯು ಮಾಧವ್​ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತಧಾಮವಾಗುವ ಪ್ರಸ್ತಾವಕ್ಕೆ ಸಮ್ಮತಿಸಿದೆ. ಈ ಉದ್ಯಾನ 1,751 ಚ. ಕಿ.ಮೀ ಇದ್ದು, ಪ್ರಮುಖ ಪ್ರದೇಶ 375 ಚ.ಕಿ.ಮೀ ವ್ಯಾಪಿಸಿದೆ. ಬಫರ್​ ಪ್ರದೇಶ 1,276 ಚ. ಕಿ.ಮೀ ಇದೆ. ಈ ಪಾರ್ಕ್​ನಲ್ಲಿ ಹುಲಿಗಳನ್ನು ಬಿಡಲು ಸಮಿತಿ ಸಮ್ಮತಿಸಿದೆ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮುಖ್ಯಮಂತ್ರಿ ಮೋಹನ್​ ಯಾದವ್​ ಅವರ ಸೂಚನೆ ಮೇರೆಗೆ ಈ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಮಾಧವ್​ ಮತ್ತು ಕುನೋ ರಾಷ್ಟ್ರೀಯ ಉದ್ಯಾನದಲ್ಲಿನ ವನ್ಯಜೀವಿಗಳ ನಿರ್ವಹಣೆ ಬಲಪಡಿಸುವ ಉದ್ದೇಶದಿಂದ ಮಧ್ಯಪ್ರದೇಶದ ಸರ್ಕಾರ ಈ ಸಂರಕ್ಷಣಾ ಉಪಕ್ರಮಕ್ಕೆ ಮುಂದಾಗಿದೆ. ಇದು ಸ್ಥಳೀಯ ಸಮುದಾಯಕ್ಕೆ ಪರಿಸರ ಪ್ರವಾಸೋದ್ಯಮ ಪ್ರಯೋಜನ ತಂದುಕೊಡುವ ಜೊತೆಗೆ ಪ್ರದೇಶದಲ್ಲಿ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು.
ಭಾರತದಲ್ಲಿ ಸಹ – ಪರಭಕ್ಷಕ ಮತ್ತು ಬೇಟೆ 2022ರ ವರದಿ ಅನುಸಾರ, ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಇದು ದೇಶದಲ್ಲಿಯೇ ಅತಿಹೆಚ್ಚು ಹುಲಿ ಹೊಂದಿರುವ ರಾಜ್ಯವಾಗಿದೆ. ಇದರ ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ಇಲ್ಲಿ 653, ಉತ್ತರಾಖಂಡ್​ನಲ್ಲಿ 560 ಹುಲಿಗಳಿವೆ.
ಕುನೋ ರಾಷ್ಟ್ರೀಯ ಉದ್ಯಾನ ದೇಶದಲ್ಲಿರುವ ಏಕ ಮಾತ್ರ ಚಿರತೆ ಸಂರಕ್ಷಣಾ ಕೇಂದ್ರವಾಗಿದೆ. ಇದು ಶೋಪುರ್​​ ಜಿಲ್ಲೆಯಲ್ಲಿದ್ದು, ಮಾಧವ್ ರಾಷ್ಟ್ರೀಯ ಉದ್ಯಾನದ ಪಕ್ಕದಲ್ಲಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Big shock for Samantha fans:ಗುರುತು ಸಿಗದ ಹಾಗೆ ದಿಢೀರ್ ಬದಲಾಗಿ ಬಿಟ್ಟ ಸ್ಯಾಮ್!

Samantha News: ಟಾಲಿವುಡ್​ ಸ್ಟಾರ್​ ನಟಿ Samantha ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರ ಉಳಿದುಕೊಂಡಿದ್ದ Samantha ಇತ್ತೀಚೆಗೆ...

A bold decision in Tirupati after the Laddu dispute: ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ

Transfer or Retirement Fix! News ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. Laddu ವಿವಾದದ ಬಳಿಕ ತಿರುಮಲ ತಿರುಪತಿ...

SPIDER MAN SUITS:ರಿಸರ್ಚ್ ಟೀಂನಿಂದ ರೆಡಿಯಾಗ್ತಿದೆ ಸೂಪರ್ ಮ್ಯಾನ್ ಶೈಲಿಯ ಸೂಟ್!

Spider-Man Suits News: ಇವರು ಧರಿಸಿಕೊಂಡಿರುವ SUITS ಫುಲ್​ ಸ್ಟ್ರಾಂಗ್​ ಆಗಿರುತ್ತದೆ. ಬುಲೆಟ್​ ಸೇರಿದಂತೆ ಅನೇಕ ಆಯುಧಗಳಿಂದ ದಾಳಿ ಮಾಡಿದ್ರೂ ಸಹ ಆ SUITS​ನಿಂದ ಅವರು...

HUSBAND KILLS WIFE:ಅಮ್ಮನ ಮೃತದೇಹದ ಬಳಿ ಕಂದಮ್ಮನ ಆಕ್ರಂದನ

Belgaum News: ಮೀರಾಬಾಯಿ (25) ಎಂಬವರೇ KILLSಯಾದ ಮಹಿಳೆ. ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು...