spot_img
spot_img

ಸಿರಿಯಾ ಸಂಘರ್ಷ ಮತ್ತಷ್ಟು ಭೀಕರ : ಅಸಾದ್ ಬೆಂಬಲಕ್ಕೆ ನಿಂತ ರಷ್ಯಾ

spot_img
spot_img

Share post:

ಡಮಾಸ್ಕಸ್: ಸಿರಿಯಾದಲ್ಲಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಉತ್ತರದ ಅಲೆಪ್ಪೊ ಮತ್ತು ಇದ್ಲಿಬ್ ಪ್ರಾಂತ್ಯಗಳಲ್ಲಿ ಬಂಡುಕೋರ ಪಡೆಗಳ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದಾಗಿ ಸಿರಿಯನ್ ಸೇನೆ ಸೋಮವಾರ ಪ್ರಕಟಿಸಿದ್ದು, ರಷ್ಯಾದ ಪಡೆಗಳ ಬೆಂಬಲದೊಂದಿಗೆ ಕಳೆದ 24 ಗಂಟೆಗಳಲ್ಲಿ 400ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಹೇಳಿಕೊಂಡಿದೆ.

ಸೇನೆ ಮತ್ತು ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕೇಂದ್ರೀಕೃತ ವಾಯು, ಕ್ಷಿಪಣಿ ಮತ್ತು ಫಿರಂಗಿ ದಾಳಿಗಳ ಮೂಲಕ ‘ಭಯೋತ್ಪಾದಕರಿಗೆ’ ಸೇರಿದ ಐದು ಕಮಾಂಡ್ ಕೇಂದ್ರಗಳು ಮತ್ತು ಏಳು ಮದ್ದುಗುಂಡು ಡಿಪೋಗಳನ್ನು ನಾಶಪಡಿಸಲಾಗಿದೆ ಎಂದು ಮಿಲಿಟರಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತೀಚಿನ ಗಂಟೆಗಳಲ್ಲಿ ನಿಖರವಾದ ದಾಳಿಯಲ್ಲಿ ವಿವಿಧ ದೇಶಗಳಿಗೆ ಸೇರಿದ 400ಕ್ಕೂ ಹೆಚ್ಚು ಉಗ್ರರನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.

ಇರಾಕ್​ನಿಂದ ನೂರಾರು ಇರಾನ್-ಅಲಿಪ್ತ ಇರಾಕಿ ಹಶ್ದ್ ಅಲ್ ಶಾಬಿ ಹೋರಾಟಗಾರರು ಅಲ್ ಬುಕಮಲ್ ಕ್ರಾಸಿಂಗ್ ಬಳಿಯ ಮಿಲಿಟರಿ ಮಾರ್ಗದ ಮೂಲಕ ಸಿರಿಯಾಕ್ಕೆ ಪ್ರವೇಶಿಸಿದ್ದಾರೆ ಎಂದು ಸಿರಿಯಾದ ಹಿರಿಯ ಸೇನಾ ಮೂಲವನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಇರಾನ್ ಬೆಂಬಲಿತ ಮಿಲಿಶಿಯಾ ಹೋರಾಟಗಾರರು ರಾತ್ರೋರಾತ್ರಿ ಇರಾಕ್​ನಿಂದ ಸಿರಿಯಾಗೆ ಪ್ರವೇಶಿಸಿದ್ದು, ದಂಗೆಕೋರರ ವಿರುದ್ಧ ಹೋರಾಡುತ್ತಿರುವ ಸಿರಿಯನ್ ಸೇನಾ ಪಡೆಗಳೊಂದಿಗೆ ಕೈಜೋಡಿಸಲು ಉತ್ತರ ಸಿರಿಯಾಕ್ಕೆ ತೆರಳುತ್ತಿವೆ ಎಂದು ಸಿರಿಯನ್ ಸೇನಾ ಮೂಲಗಳು ರಾಯಿಟರ್ಸ್​ಗೆ ತಿಳಿಸಿವೆ.

“ಕಳೆದ 24 ಗಂಟೆಗಳಲ್ಲಿ ಸಿರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಪರ ರಷ್ಯಾದ ಪಡೆಗಳ ಸಹಕಾರದೊಂದಿಗೆ ನಮ್ಮ ಸಶಸ್ತ್ರ ಪಡೆಗಳು ಅಲೆಪ್ಪೊ ಮತ್ತು ಇದ್ಲಿಬ್​ನ ಗ್ರಾಮೀಣ ಪ್ರದೇಶಗಳಲ್ಲಿ ಭಯೋತ್ಪಾದಕ ನೆಲೆಗಳು, ಅವರ ಗೋದಾಮುಗಳು, ಸರಬರಾಜು ಮಾರ್ಗಗಳು ಮತ್ತು ಸಂಚಾರ ಮಾರ್ಗಗಳ ಮೇಲೆ ವೈಮಾನಿಕ, ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ಮುಂದುವರಿಸಿವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಿರಿಯಾದ ಎರಡನೇ ಅತಿದೊಡ್ಡ ನಗರವಾದ ಅಲೆಪ್ಪೊವನ್ನು ಸದ್ಯ ಬಂಡುಕೋರರು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಅಲೆಪ್ಪೊದಿಂದ ಬಂಡುಕೋರರನ್ನು ಹೊರಹಾಕಲು ಅಸ್ಸಾದ್ ಸರ್ಕಾರಕ್ಕೆ ರಷ್ಯಾ ಮತ್ತು ಇರಾನ್ ಬೆಂಬಲ ನೀಡುತ್ತಿವೆ.

2011ರಲ್ಲಿ ಪ್ರಜಾಪ್ರಭುತ್ವ ಸರ್ಕಾರಕ್ಕೆ ಆಗ್ರಹಿಸಿ ಸಿರಿಯಾದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಆದರೆ ಅಸಾದ್ ಈ ಪ್ರತಿಭಟನೆಗಳನ್ನು ದಬ್ಬಾಳಿಕೆಯ ಮೂಲಕ ಮಟ್ಟ ಹಾಕಿದ್ದರು. ಭೀಕರ ಸಂಘರ್ಷದಲ್ಲಿ ಈವರೆಗೆ ಸುಮಾರು 5 ಲಕ್ಷ ಜನ ಸಾವಿಗೀಡಾಗಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...