spot_img
spot_img

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಉಲ್ಟಾ ಪಲ್ಟಾ..

spot_img
spot_img

Share post:

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ ಬಾರಿಯ ಕನ್ನಡದ ಬಿಗ್​ಬಾಸ್​ನಲ್ಲಿ ದಿನಕೊಂದು ತಿರುವು, ಊಹಿಸಲಾರದ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಸೈಲೆಂಟ್​ ಆಗಿದ್ದ ಬಿಗ್​ಬಾಸ್​ ಮನೆ ಈಗ ಸಖತ್ ವೈಲೆಂಟ್​ ಆಗಿದೆ. ಈ ಬಾರಿಯ ಬಿಗ್​ಬಾಸ್​ ಮನೆಗೆ ಬಂದ ಸ್ಪರ್ಧಿಗಳು ಟಾಸ್ಕ್​ಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಹೌದು, ಈ ಬಾರಿ ಬಿಗ್​​ಬಾಸ್​ ಗೇಮ್​​ನಲ್ಲಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿ, ಎರಡು ಟಿವಿ ಚಾನೆಲ್​​ಗಳನ್ನ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಅಂತೆಯೇ ಮೊನ್ನೆಯಿಂದ ಬಿಗ್​ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡಿದೆ. ಅಂತೆಯೇ ಟಿವಿ ವಾಹಿನಿಯ ಎದುರಾಳಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತಿದೆ. ನಿನ್ನೆಯ ಸಂಚಿಕೆಯಲ್ಲಿ ಶಿಶಿರ್ ಗೆಳತಿ ಐಶ್ವರ್ಯಾಗೆ ಮೂರು ಹಾಗಲಕಾಯಿ ತಿನ್ನುವಂತೆ ಕೇಳಿಕೊಂಡಿದ್ದಾರೆ.

ಅದೇ ರೀತಿ ಗೌತಮಿಗೆ ರಜತ್​​ ಎರಡು ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್​ ನೀಡಲಾಗಿದೆ. ಅಲ್ಲದೇ ರಜತ್​ಗೆ ಉಗ್ರಂ ಮಂಜು ತನ್ನ ತಲೆ ಕೂದಲು ಬೋಳಿಸಿಕೊಳ್ಳುವಂತೆ ಹೇಳಿದ್ದಾರೆ. ಅದಕ್ಕೆ ರಜತ್ ‘ಓಕೆ’ ಎಂದು ತಮ್ಮ ಕೂದಲನ್ನೂ ಟ್ರಿಮ್​ ಮಾಡಿಸಿಕೊಂಡಿದ್ದಾರೆ. ಇಂದು ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ರಜತ್​ ಟೀಮ್​ ತ್ರಿವಿಕ್ರಮ್​ಗೆ ನೇರವಾದ ಸವಾಲ್ ಹಾಕಿದ್ದಾರೆ.

ಅದುವೆ ಕೂದಲು, ಮೀಸೆ ಹಾಗೂ ಗಡ್ಡವನ್ನು ಬೋಳಿಸಿಕೊಳ್ಳಬೇಕು ಅಂತ. ಆದರೆ ಅದಕ್ಕೆ ತ್ರಿವಿಕ್ರಮ್​ ತಲೆ ಕೂದಲನ್ನು ಮಾತ್ರ ಬೋಳಿಸೋದಾಗಿ ಹೇಳಿದ್ದಾರೆ.
ಆದರೆ ಇಲ್ಲಿ ತ್ರಿವಿಕ್ರಮ್ ಟೀಮ್​ ಅವರು ಅವರಿಗೆ ಇಷ್ಟ ಬಂದ ಹಾಗೇ ಟಾಸ್ಕ್​ ಆಡುತ್ತಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎದುರಾಳಿ ತಂಡದವರು ಕೊಟ್ಟ ಟಾಸ್ಕ್​ ಅನ್ನು ಪದೇ ಪದೇ ಬದಲಾಯಿಸಿದ್ದಾರೆ. ಇದೇ ವಿಚಾರಕ್ಕೆ ರಜತ್​ ತಂಡ ಜೋರಾಗಿ ಗಲಾಟೆ ಮಾಡಿಕೊಂಡಿದ್ದಾರೆ.

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...