ಹೈದರಾಬಾದ್: ಹೋಂಡಾ ಇಂಡಿಯಾ ಹೊಸ ಸ್ಟೈಲಿಂಗ್, ಟನ್ ಲೋಡ್ ವೈಶಿಷ್ಟ್ಯ ಮತ್ತು ಮೊದಲ ADAS ಸೂಟ್‌ನೊಂದಿಗೆ ಬಹು ನಿರೀಕ್ಷಿತ ಅಮೇಜ್‌ನ ಫೇಸ್‌ಲಿಫ್ಟ್ ಬಿಡುಗಡೆ ಮಾಡಿದೆ.
ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ – ಎಚ್‌ಸಿಐಎಲ್ ಬುಧವಾರ ಅಮೇಜ್‌ನ ಬಹು ನಿರೀಕ್ಷಿತ ಫೇಸ್‌ಲಿಫ್ಟ್ ಲಾಂಚ್ ಮಾಡಿದೆ. 7,99,990 ರೂ(ಎಕ್ಸ್ ಶೋ ರೂಂ, ದೆಹಲಿ)ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಹೊಸ ಸ್ಟೈಲಿಂಗ್ ಜೊತೆಗೆ ಸೆಗ್ಮೆಂಟ್ – ಮೊದಲ ADAS ಸೂಟ್ ಸೇರಿದಂತೆ ಇನ್ನೂ ಅನೇಕ ವೈಶಿಷ್ಟ್ಯಗಳೊಂದಿಗೆ ಮೂರನೇ ತಲೆಮಾರಿನ ಅಮೇಜ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಡಿಜೈರ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ಅಮೇಜ್ ಬಿಡುಗಡೆಗೊಂಡಿದೆ.
ಈ ಸೆಡಾನ್‌ನ ಕಾರ್ನ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ನವೀಕರಿಸಿದ ನೂತನ ವಿನ್ಯಾಸವಾಗಿದೆ. ಮುಂಭಾಗದ ಗ್ರಿಲ್ ಜೇನುಗೂಡು ವಿನ್ಯಾಸ ಹೊಂದಿದ್ದರೆ, ಹೋಂಡಾ ಎಲಿವೇಟ್‌ನಂತೆಯೇ ಕೆಳಭಾಗದಲ್ಲಿ ಬೈ ಪ್ರೊಜೆಕ್ಟರ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾ 15-ಇಂಚಿನ ಮಿಶ್ರಲೋಹದ ಚಕ್ರಗಳು ಈ ಬಾರಿ ಗಮನ ಸೆಳೆಯುವಂತಿದೆ.
ಗಮನಾರ್ಹ ವಿಚಾರ ಎಂದರೆ LED ಟೈಲ್‌ಲೈಟ್‌ಗಳು ಇತ್ತೀಚಿನ ಪೀಳಿಗೆಯ ಹೋಂಡಾ ಸಿಟಿಯಿಂದ ಇವು ಸ್ಫೂರ್ತಿ ಪಡೆದಿವೆ. ಇದರ ಹೊರತಾಗಿ ಕಾಂಪ್ಯಾಕ್ಟ್ ಸೆಡಾನ್ ನಾಲ್ಕು ಸಂವೇದಕಗಳೊಂದಿಗೆ ಹಿಂಬದಿಯ ಬಂಪರ್ ಮತ್ತು ಬೂಟ್ ಲಿಡ್ ಅಡಿ ರಿಯರ್ ವ್ಯೂ ಕ್ಯಾಮೆರಾ ಅಳವಡಿಸಲಾಗಿದೆ. ಸುಮಾರು 416 ಲೀಟರ್ ಬೂಟ್ ಸ್ಪೇಸ್ ಅನ್ನು ಕೂಡಾ ಹೊಂದಿದೆ.