ಸಾಗರ್ (ಮಧ್ಯ ಪ್ರದೇಶ): ಅಪರೂಪದ ಕಾಯಿಲೆಗಳು ಕೆಲವರಲ್ಲಿ ಜನ್ಮಜಾತವಾಗಿ ಬಂದಿದ್ದು, ಅನೇಕ ಬಾರಿ ಅವುಗಳನ್ನು ಪತ್ತೆ ಮಾಡುವಲ್ಲಿ ವೈದ್ಯರು ಕೂಡ ಎಡವುತ್ತಾರೆ. ಅದೇ ರೀತಿಯ ಪ್ರಕರಣವೊಂದು ಭಾಗ್ಯೋದಯ ತೀರ್ಥ ಆಸ್ಪತ್ರೆಯಲ್ಲಿ ದಾಖಲಾಗಿದೆ.
ಶೀತ ಮತ್ತು ಕಡಿಮೆ ವಾಸನೆ ಗ್ರಹಣ ಶಕ್ತಿ ಸಮಸ್ಯೆ ಹೊಂದಿರುವ ಉತ್ತರ ಪ್ರದೇಶದ ಮೂಲದ 20ರ ಯುವತಿಗೆ ಉಸಿರಾಡುವುದು ಬಲು ತ್ರಾಸದಾಯಕ ಸಮಸ್ಯೆಗಳಾಗುತ್ತವೆ.
ಈ ಸಮಸ್ಯೆ ಹೊಂದಿರುವ ಮಕ್ಕಳ ತಾಯಿಯ ಎದೆ ಹಾಲು ಸೇವಿಸುವಾಗಲೇ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ. ಜಗತ್ತಿನಲ್ಲಿ 8 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣುತ್ತದೆ.
ಇವರನ್ನು ಪರೀಕ್ಷಿಸಿ ಇಎನ್ಟಿ ಸರ್ಜನ್ ಡಾ ದಿನೇಶ್ ಪಟೇಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾರಣ ಯುವತಿಗೆ ಇದ್ದಿದ್ದು, ಸಾಮಾನ್ಯ ಸಮಸ್ಯೆಯಲ್ಲ. ಜೀವನ್ಮರಣದಂತಹ ಸಮಸ್ಯೆಯಲ್ಲಿಯೇ 20 ವರ್ಷಗಳ ಕಾಲದಿಂದ ಜೀವಿಸುತ್ತಿದ್ದು, ಈ ಬಗ್ಗೆ ಅವಳು ಯಾವುದೇ ಅರಿವು ಹೊಂದಿರಲಿಲ್ಲ.
ಈ ಯುವತಿ ಹುಟ್ಟಿನಿಂದಲೇ ಕೊನಾಲ್ ಅಟ್ರೆಸಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಳು, ಈ ಸಮಸ್ಯೆಯಲ್ಲಿ ಮೂಗು ಮತ್ತು ಬಾಯಿ ನಡುವೆ ಸಂಪರ್ಕವಿರುವುದಿಲ್ಲ. ಹುಟ್ಟಿನಿಂದ ಬರುವ ಈ ಸಮಸ್ಯೆಯಲ್ಲಿ ಮಗು ತಾಯಿಯ ಎದೆ ಹಾಲು ಸೇವಿಸುವಾಗಲೇ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ.
ಜಗತ್ತಿನಲ್ಲಿ 8 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣುತ್ತದೆ. ಇದೊಂದು ಅಪರೂಪದ ಸಮಸ್ಯೆಯಾಗಿದೆ ಅಂತಾರೆ ವೈದ್ಯರು. ಈ ಕುರಿತು ಮಾತನಾಡಿರುವ ವೈದ್ಯರಾದ ಡಾ ದಿನೇಶ್ ಪಟೇಲ್, ಕೊನಾಲ್ ಅಟ್ರಿಸಿಯಾ ಜನ್ಮಜಾತ ಸಮಸ್ಯೆಯಾಗಿದ್ದು, ಹುಟ್ಟಿನಿಂದಲೇ ಈ ಸಮಸ್ಯೆ ಕಂಡು ಬರುತ್ತದೆ.
ಈ ಸಮಸ್ಯೆ ಇದ್ದಾಗ ಏಕಕಾಲದಲ್ಲಿ ಕಣ್ಣು, ಮೂಗು ಮತ್ತು ಹೃದಯ ಸಮಸ್ಯೆ ಕಾಣುತ್ತದೆ. ಈ ಕೇಸ್ನಲ್ಲಿ ಯುವತಿಯ ಎರಡೂ ಮೂಗಿನಲ್ಲಿ ಪೊರೆ ರೂಪುಗೊಂಡಿಲ್ಲ. ಬದಲಾಗಿ ಮೂಗಿನ ಹಿಂಭಾಗದ ಭಾಗವು ಬಾಯಿಗೆ ಸಂಪರ್ಕ ಹೊಂದಿಲ್ಲ. ಇದರಿಂದಾಗಿ ಆಕೆ ಮೂಗಿನ ಮೂಲಕ ಉಸಿರಾಡಲು ಸಾಧ್ಯವಾಗದೇ, ಬಾಯಿಯ ಮೂಲಕ ಉಸಿರಾಡುತ್ತಿದ್ದಾಳೆ.
ಈ ಸಮಸ್ಯೆ ಇದ್ದಾಗ ಮಗು ತಾಯಿಯ ಹಾಲು ಕುಡಿಯುತ್ತಿದ್ದಂತೆ ಸಾವು ಸಂಭವಿಸುತ್ತದೆ. ಕಾರಣ ಮಗು ಹಾಲು ಕುಡಿಯುವಾಗ ಬಾಯು ಮುಚ್ಚಿ, ಮೂಗಿನಿಂದ ಉಸಿರಾಡಬೇಕು. ಈ ವೇಳೆ, ಮಗು ಉಸಿರುಗಟ್ಟಿ ದೇಹ ನೀಲಿಯಾಗುವ ಲಕ್ಷಣಗಳು ಕಾಣುತ್ತದೆ. ಅನೇಕ ಬಾರಿ ಆಸ್ಪತ್ರೆಗೆ ತರುವ ಮುನ್ನವೇ ಮಕ್ಕಳು ಸಾವನ್ನಪ್ಪುತ್ತದೆ.
ಆದರೆ, ರೋಗಿಯು ಕಳೆದ 20 ವರ್ಷದಿಂದ ಈ ಸಮಸ್ಯೆ ಇದ್ದರೂ ಆರೋಗ್ಯವಾಗಿದ್ದಾರೆ. ಕಾರಣ ಈ ಸಿಂಡ್ರೋಮ್ನಲ್ಲಿ ಎರಡರಿಂದ ಮೂರು ವಿಧವಿದೆ. ಇದರಲ್ಲಿ ಒಂದು ಮೂಗಿನ ಪೊರೆಯು ರಚನೆಯಾಗುವುದಿಲ್ಲ ಅಥವಾ ಎರಡೂ ಮೂಗಿನ ಪೊರೆಗಳು ಇರುವುದಿಲ್ಲ. ಅಥವಾ ಮೂಳೆ ಅಥವಾ ಪೊರೆಯಲ್ಲಿ ಸಮಸ್ಯೆ ಇರುತ್ತದೆ.
ರೋಗಿ ಯುವತಿ ಕಳೆದ 20 ವರ್ಷದಿಂದ ಈ ಸಮಸ್ಯೆ ಅನುಭವಿಸುತ್ತಿದ್ದು, 7 ವರ್ಷವಿದ್ದಾಗ ಒಮ್ಮೆ ಲಲಿತ್ಪುರ್ನಲ್ಲಿ ಮೂಗಿನ ಬಾಗಿದ ಮೂಳೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಆದರೆ, ಈ ಆಪರೇಷನ್ನಿಂದ ಯಾವುದೇ ಸುಧಾರಣೆ ಕಂಡಿಲ್ಲ. ಕಾರಣ ಈಕೆಯ ಮೂಗಿನ ಭಾಗ ಬಾಯಿಗೆ ಸಂಪರ್ಕ ಹೊಂದಿಲ್ಲದಿರುವುದು ಇವರ ಅರಿವಿಗೆ ಬಂದಿಲ್ಲ.
ಇದೀಗ ಯುವತಿ ಸಮಸ್ಯೆ ಹೇಳಿಕೊಂಡು ಬಂದಾಗ ಎಂಡೋಸ್ಕೋಪಿ ಮತ್ತು ಸಿಟಿ ಸ್ಕ್ಯಾನ್ ಮಾಡಲಾಗಿದೆ. ಈ ವೇಳೆ ಈಕೆಗೆ ಕೊನಾಲ್ ಅಟ್ರಿಸಿಯಾ ಸಮಸ್ಯೆ ಇರುವುದು ಕಂಡು ಬಂದಿದೆ. ಇದೀಗ ಶಸ್ತ್ರ ಚಿಕಿತ್ಸೆ ನಡೆಸಿ, ಮೂಗು ಮತ್ತು ಬಾಯಿ ನಡುವೆ ಸಂಪರ್ಕ ಕಲ್ಪಿಸಲಾಗಿದೆ. ಯುವತಿ ಆರೋಗ್ಯ ಕೂಡ ಸುಧಾರಣೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.