ಅತೀ ಶೀಘ್ರದಲ್ಲೇ Realme 14x ಸ್ಮಾರ್ಟ್‌ಫೋನ್ ದೇಶಿಯ ಮಾರುಕಟ್ಟೆಗೆ ಕಾಲಿಡಲಿದೆ.
ರಿಯಲ್ಮಿಯ ಮುಂಬರುವ ಬಜೆಟ್ ಫೋನ್ Realme 14x ಬಿಡುಗಡೆಗೂ ಮುನ್ನ ಸಂಚಲನ ಮೂಡಿಸುತ್ತಿದೆ. ಈ ಫೋನ್ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಲೇ ಇತ್ತು. ಕಂಪನಿಯು ಈ ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಡಿಸೆಂಬರ್ 18 ರಂದು ಪರಿಚಯಿಸಲಿದೆ. ಫೋನ್ ಈ ವರ್ಷ ಬಿಡುಗಡೆಯಾದ Realme 12x ನ ಮುಂದುವರಿದ ಭಾಗವಾಗಿರಲಿದೆ.
Realme 14x 5G ನಲ್ಲಿ ವಾಲ್ಯೂಮ್ ಬಟನ್ ಮತ್ತು ಪವರ್ ಬಟನ್ ಅನ್ನು ಫೋನ್‌ನ ಬಲ ಭಾಗಕ್ಕಿದೆ. ಫೋನ್ ಮೂರು ಕಲರ್ ಆಪ್ಷನ್ ಹೊಂದಿದೆ. ಕ್ರಿಸ್ಟಲ್ ಬ್ಲ್ಯಾಕ್, ಗೋಲ್ಡನ್ ಗ್ಲೋ ಮತ್ತು ಜುಲ್ ರೆಡ್. ಫೋನ್‌ನ ಕೆಲವು ವಿಶೇಷತೆಗಳು ವದಂತಿಗಳಲ್ಲಿವೆ. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಫೋನ್‌ನಲ್ಲಿ 6.67 ಇಂಚಿನ HD + IPS LCD ಡಿಸ್ಪ್ಲೇ ಹೊಂದಿದೆ. ಜೊತೆಗೆ 6GB+128GB, 8GB+128GB, ಮತ್ತು 8GB+256GB ಎಂದ ಮೂರು ರೀತಿಯ ಸ್ಟೋರೇಜ್ ರೂಪಾಂತರಗಳಲ್ಲಿ ಬರಬಹುದು.
Realme 14x ಬಿಡುಗಡೆ ದಿನಾಂಕವನ್ನು ಡಿಸೆಂಬರ್ 18 ಕ್ಕೆ ನಿಗದಿಪಡಿಸಲಾಗಿದೆ. ಕಂಪನಿಯು ಫೋನ್ ಅನ್ನು ಕೈಗೆಟುಕುವ ದರದಲ್ಲಿ ಪ್ರಸ್ತುತಪಡಿಸಬಹುದು. ಇದರ ರೆಂಡರ್‌ಗಳು ಲಾಂಚ್‌ಗೂ ಮುನ್ನ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. 91 ಮೊಬೈಲ್ಸ್ ಇದರ ರೆಂಡರ್ ಚಿತ್ರಗಳನ್ನು ಹಂಚಿಕೊಂಡಿದೆ.
ವರ್ಟಿಕಲ್ ಸ್ಥಾನದಲ್ಲಿ ಲೆನ್ಸ್ ಹೊಂದಿರುವ ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಗೋಚರಿಸುತ್ತದೆ. ಹಳೆಯ ಮಾದರಿಯಲ್ಲಿ ಇದು ವೃತ್ತಾಕಾರ ಮತ್ತು ಡ್ಯುಯಲ್ ಕ್ಯಾಮೆರಾದೊಂದಿಗೆ ಇತ್ತು.
ಬ್ಯಾಟರಿ ಸಾಮರ್ಥ್ಯದಲ್ಲಿ ಅಪ್ಡೇಟ್ ಮಾಡಲಾಗಿದೆ. Realme 14x 5G ಫೋನ್‌ನಲ್ಲಿ 6,000mAh ಬ್ಯಾಟರಿ ಕಾಣಬಹುದು. ಇದಲ್ಲದೆ, ಫೋನ್‌ನಲ್ಲಿ IP69 ರೇಟಿಂಗ್ ಹೊಂದಿದೆ. ಹಳೆಯ ಮಾದರಿಗೆ ಹೋಲಿಸಿದರೆ ವಿಶೇಷತೆಗಳಲ್ಲಿ ಗಣನೀಯವಾದ ಅಪ್ಡೇಟ್ಗಳನ್ನು ಕಾಣಬಹುದು. ಆದರೂ, ಈ ವಿಶೇಷತೆಗಳನ್ನು ಕಂಪನಿಯು ಅಧಿಕೃತವಾಗಿ ದೃಢೀಕರಿಸಬೇಕಾಗಿದೆ.
ಮಾಹಿತಿಯ ಪ್ರಕಾರ, ಡಿಸೆಂಬರ್ 18 ರಿಂದ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ತನ್ನದೇ ಆದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟ ಪ್ರಾರಂಭವಾಗಲಿದೆ. ಕಂಪನಿಯು ಈ ಫೋನ್ ಅನ್ನು 14,999 ರೂ. ಆರಂಭಿಕ ಬೆಲೆಗೆ ಬಿಡುಗಡೆ ಮಾಡಬಹುದು. ಆದರೂ ನಿಖರವಾದ ಬೆಲೆ ಮತ್ತು ಮಾರಾಟದ ವಿವರಗಳನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.