ಇನ್ಫೋಸಿಸ್ ಸಹ ಸಂಸ್ಥಾಪಕ ಇನ್ಫೋಸಿಸ್ ನಾರಾಯಣಮೂರ್ತಿಯವರು ಹೊಸದಾಗಿ ಒಂದು ಬಂಗಲೆಯನ್ನು ಖರೀದಿ ಮಾಡಿದ್ದಾರೆ ಅದರ ಮೊತ್ತ ಬರೋಬ್ಬರಿ 50 ಕೋಟಿ ರೂಪಾಯಿ. ಕಿಂಗ್ ಫಿಶರ್ ಟವರ್ನಲ್ಲಿ 4 ಬೆಡ್ರೂಮ್ಗಳ ಬಂಗಲೆಯನ್ನು ಖರೀದಿ ಮಾಡಿದ್ದಾರೆ ಇನ್ಫೋಸಿಸ್ ನಾರಾಯಣ ಮೂರ್ತಿ.
ಕಿಂಗ್ ಫಿಶರ್ ಟವರ್ನಲ್ಲಿ 16ನೇ ಅಂತಸ್ತಿನಲ್ಲಿ ಮನೆ ಖರೀದಿಸಿದ್ದಾರೆ ನಾರಾಯಣ ಮೂರ್ತಿ. ಈ ಒಂದು ಬಂಗಲೆ ಸುಮಾರು 8,400 ಸ್ಕ್ವೇರ್ಫೀಟ್ ಅಳತೆಯಲ್ಲಿ ಹರಡಿಕೊಂಡಿದೆ. 4 ಬೆಡ್ರೂಮ್ಗಳು ಹಾಗೂ 5 ಪಾರ್ಕಿಂಗ್ ಮೀಸಲುಗಳು ಸೌಕರ್ಯವನ್ನು ಹೊಂದಿದೆ.
ಈ ಒಂದು ಬಂಗಲೆ ಖರೀದಿ ವೇಳೆ ಪ್ರತಿ ಸ್ಕ್ವೇರ್ ಫೀಟ್ಗೆ 59,500 ರೂಪಾಯಿ ದರ ನಿಗದಿಯಾಗಿತ್ತಂತೆ. ಈ ಒಂದು ಕಿಂಗ್ ಫಿಶರ್ ಟವರ್ನ್ನು ಮದ್ಯದ ದೊರೆ ವಿಜಯ ಮಲ್ಯ ಅವರು ನಿರ್ಮಿಸಿದ್ದು 34 ಮಹಡಿಗಳ ಈ ಅಪಾರ್ಟ್ಮೆಂಟ್ನಲ್ಲಿ ಒಟ್ಟು 81 ಬಂಗಲೆಗಳು ಇವೆ ಎನ್ನಲಾಗಿದೆ.
ಇದೇ ಮೊದಲ ಬಾರಿಗೆ ನಾರಾಯಣ ಮೂರ್ತಿ ಫ್ಯಾಮಿಲಿ ಕಿಂಗ್ಫಿಶರ್ ಟವರ್ಗೆ ಹೋಗುತ್ತಿಲ್ಲ. ನಾಲ್ಕು ವರ್ಷಗಳ ಹಿಂದೆ ಸುಧಾ ಮೂರ್ತಿಯವರು 23ನೇ ಮಹಡಿಯಲ್ಲಿ 29 ಕೋಟಿ ರೂಪಾಯಿ ನೀಡಿ ಒಂದು ಫ್ಲ್ಯಾಟ್ನ್ನು ಖರೀದಿಸಿದ್ದರು.
ಸಚಿವ ಕೆ.ಜೆ.ಜಾರ್ಜ್ ಅವರ ಪುತ್ರ ರಾನಾ ಜಾರ್ಜ್ ಕೂಡ 35 ಕೋಟಿ ರೂಪಾಯಿ ಕೊಟ್ಟು ಇದೇ ಕಿಂಗ್ಫಿಶರ್ ಟವರ್ನಲ್ಲಿ ಫ್ಯಾಟ್ ಖರೀದಿ ಮಾಡಿದ್ದರು. ಈ ಕಿಂಗ್ ಫಿಶರ್ ಟವರ್ 2010ರಲ್ಲಿ ಲಾಂಚ್ ಆಗಿತ್ತು. ಪ್ರತಿ ಸ್ಕ್ವೇರ್ ಫೀಟ್ಗೆ 22 ಸಾವಿರ ರೂಪಾಯಿಗೆ ಈ ಅಪಾರ್ಟ್ಮೆಂಟ್ನ್ನು ಖರೀದಿಸಲಾಗಿತ್ತು. ಸದ್ಯ ಅದರ ದರ ಡಬಲ್ ಆಗಿದ್ದು. ಐಷಾರಾಮಿ ಬಂಗಲೆ ಕೊಂಡುಕೊಳ್ಳಬೇಕು ಎಂದು ಕನಸು ಕಂಡವರು ಕಿಂಗ್ ಫಿಶರ್ ಟವರ್ನತ್ತ ದೃಷ್ಟಿ ಬೀರುತ್ತಾರೆ.