ವಾಡಿಕೆ ಏನು ಗೊತ್ತಾ?
ಮೊದಲಿಗೆ (Harangi Reservoir) ಹಾರಂಗಿ ಡ್ಯಾಮ್ ನಲ್ಲಿ ಪೂಜೆ ಸಲ್ಲಿಸಿ, ಆನಂತರ (KRS) ಕೆ ಆರ್ ಎಸ್ ಡ್ಯಾಮ್ ನಲ್ಲಿ ಬಾಗಿನ ಕೊಡುವುದು ವಾಡಿಕೆ ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರ ಮಾಡಿದ್ದೇನು ನಿಮಗೆ ಗೊತ್ತಾ?
ಹಾರಂಗಿ ಬಿಟ್ಟು krs ನಲ್ಲಿ ಬಾಗಿನ!
ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನಾಡಿನ ಎಲ್ಲ ಜಲಾಶಯಗಳು ತುಂಬಿ ತುಳುಕುತ್ತಿವೇ ಅದೇ ರೀತಿ ಕಾವೇರಿ ನದಿಗೆ ಕಟ್ಟಿದಂತಹ ಡ್ಯಾಮ್ ಗಳು ಕೂಡ ತುಂಬಿವೆ. ಡ್ಯಾಮ್ ಗಳು ತುಂಬಿದ ನಂತರ ಕಾವೇರಿ ನದಿಗೆ ಬಾಗಿನ ಕೊಡುವುದು ವಾಡಿಕೆ ಆದರೆ ಬಾಗಿನ ಕೊಡುವ ಪದ್ಧತಿಯಲ್ಲೂ ಕೂಡ ಅನೇಕ ಸಂಪ್ರದಾಯಗಳು ಕೂಡಿವೆ, ಅದರಲ್ಲಿ ಮೊದಲನೆಯದಾಗಿ ಏನೆಂದರೆ ಕೆ ಆರ್ ಎಸ್ ಡ್ಯಾಮ್ ಗಿನ ಮೊದಲು ಕೊಡಗಿನ ಹಾರಂಗಿ ಜಲಾಶಯಕ್ಕೆ ಮೊದಲು ಬಾಗಿನ ಕೊಡುವುದು, ಪದ್ಧತಿ ಆದರೆ ಈ ಬಾರಿ ಕೊಡಗಿನ ಹಾರಂಗಿ ಜಲಾಶಯ ಬಿಟ್ಟು ಕಾವೇರಿಗೆ ಬಾಗಿನ ಕೆ ಆರ್ ಎಸ್ ಡ್ಯಾಮ್ ನಲ್ಲಿ ಕೊಡಲಾಗಿದೆ.
KRS ಜಲಾಶಯಕ್ಕೆ ಬಾಗಿನ ಅರ್ಪಿಸಲು ಇಂದು ಮೈಸೂರಿನಿಂದ ಮಾನ್ಯ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರೊಂದಿಗೆ ಬಸ್ ನಲ್ಲಿ ತೆರಳಿದೆ.#KRS #KrishnarajasagaraDam pic.twitter.com/aSGbkr8GKy
— DK Shivakumar (@DKShivakumar) July 29, 2024
ಜನರ ಮನಸಿನಲ್ಲಿ ಆಕ್ರೋಶ?
ಈ ಬಾಗಿನ ಕೊಡುವ ಕಾರ್ಯದಲ್ಲಿ ರಾಜ್ಯದ ಸಿಎಂ ಅಂದರೆ ಮುಖ್ಯಮಂತ್ರಿ, ಸಿದ್ದರಾಮಯ್ಯನವರು, ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಜೊತೆಗೆ ಮಂಡ್ಯ ಹಾಗೂ ಸ್ಥಳೀಯ ಶಾಸಕರು ಇವರಿಗೆ ಸಾತ್ ನೀಡಿದ್ದಾರೆ. ಹಾರಂಗಿಗೆ ಮೊದಲು ಬಾಗಿನ ಕೊಡದೆ ಕೆ ಆರ್ ಎಸ್ ಜಲಾಶಯಕ್ಕೆ ಬಾಗಿನ ಕೊಟ್ಟಿದ್ದು ಜನರ ಮನಸ್ಸಿನಲ್ಲಿ ಒಂದು ಅಸಮಾಧಾನವನ್ನು ಉಂಟುಮಾಡಿದೆ. ಜೊತೆಗೆ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಬೋಸ ರಾಜು ಅವರು ನಿರ್ಲಕ್ಷದಿಂದ ವರ್ತಿಸುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹಾರಂಗಿ ಡ್ಯಾಮ್ ನಲ್ಲಿ ಮೊದಲು ಪೂಜೆ ಸಲ್ಲಿಸಿ ಆನಂತರ ಕೆ ಆರ್ಎಸ್ ಡ್ಯಾಮ್ ನಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಕೆ ಆರ್ ಎಸ್ ಡ್ಯಾಮ್ ನಲ್ಲಿ ಬಾಗಿನ ಕೊಟ್ಟಿದ್ದು ಕೊಡಗು ಜನತೆ ಮನಸ್ಸಿನಲ್ಲಿ ನಿರಾಶೆ ಉಂಟಾಗಿದೆ.
ಕೊಡಗಿನ ಜನತೆ ಮೇಲೆ ಅನ್ಯಾಯ?
ಕೊಡಗಿನ ಜನತೆ ಕೊಡಗನ್ನು ನಿರ್ಲಕ್ಷ ಮಾಡಿದೆ ಕಾಂಗ್ರೆಸ್ ಸರ್ಕಾರ ಎಂದು ಹೇಳಿದೆ ನಿಜಕ್ಕೂ ಕೊಡಗನ್ನು ನಿರ್ಲಕ್ಷ ಮಾಡಿದೆಯ ಕಾಂಗ್ರೆಸ್ ಸರ್ಕಾರ? ಎಂಬ ಪ್ರಶ್ನೆಗೆ ಉತ್ತರ ಕಾಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಹಾಕಿ ವಿಕ್ಷಕರು.
ಕಾಂಗ್ರೆಸ್ ಸರ್ಕಾರ ಹಾರಂಗಿ ಡ್ಯಾಮ್ ಗೆ ಬಾಗಿನ ಕೊಡುವುದು ಮಿಸ್ ಮಾಡಿದ್ದು ಏಕೆ?
ಇದಕ್ಕೆ ಸಿಂಪಲ್ ಒಂದೇ ಉತ್ರ ಅದು ಏನಪ್ಪಾ ಅಂತಂದ್ರೆ ಕೊಡಗಿನಲ್ಲಿ ನಿಲ್ಲದ ಮಳೆ. ಜೊತೆಗೆ ಭೂಕುಸಿತ ಕೂಡ ಜೋರಾಗಿದೆ, ಕಾರಣ ಕೊಡಗಿಗೆ ಹೋಗಿ ಹಾರಂಗಿ ಡ್ಯಾಮ್ ಗೆ ಬಾಗಿನ ಕೊಡುವುದು ಅಸಾಧ್ಯ ಅಥವಾ ಅಪಾಯಕಾರಿ ಎಂದು ಕಾಂಗ್ರೆಸ್ ನವರು ವಾದ ಮಾಡುತ್ತಿದ್ದಾರೆ ಜೊತೆಗೆ ಕೊಡಗಿನ ಜನತೆ ಮೇಲೆ ಯಾವುದೇ ದುರ್ಲಕ್ಷ ನಮ್ಮ ಸರಕಾರಕ್ಕಿಲ್ಲ ಎಂದು ಕೂಡ ಸ್ಪಷ್ಟನೆಯನ್ನು ನೀಡಿದ್ದಾರೆ.
ಇನ್ನಷ್ಟು ಓದಿರಿ:
ಇದನ್ನು ಓದಿರಿ: