ಬೆಂಗಳೂರು: ಮಧ್ಯಪ್ರಿಯರಿಗೆ ಭಾರಿ ಸಂಕಷ್ಟದ ಸುದ್ದಿ, ಕಚ್ಚಾ ವಸ್ತುಗಳ ಬೆಲೆಯೆರಿಕು ನೆಪ ನೀಡಿ ರಾಜ್ಯ ಸರ್ಕಾರ ದರ ಹೆಚ್ಚಿಗೆ ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಗದ್ದುಗೆ ಏರಿದ ಮೇಲೆ ಬಿಯರ್ ದರ 50ರಿಂದ 60 ರೂ.ವರೆಗೆ ಏರಿಕೆಯಾಗಿದೆ.
ಕಳೆದ ಒಂದು ವರೆ ವರ್ಷದಲ್ಲಿ ಬಿಯರ್ ಬೆಲೆಯನ್ನು 5ನೇ ಬಾರಿಗೆ ಹೆಚ್ಚಿಗೆ ಮಾಡಲಾಗಿದೆ. ಬಿಯರ್ ಬೆಲೆ 10 ರಿಂದ 20 ರೂಪಾಯಿ ಏರಿಕೆ ಮಾಡಲಾಗಿದೆ. ಕಂಪನಿಗಳು ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ದರ ಹೆಚ್ಚಿಸಿದ್ದವು, ಇದೀಗ ಮತ್ತೆ ಬೆಲೆ ಏರಿಕೆ ಮಾಡುವ ಮೂಲಕ ಬಿಯರ್ ಪ್ರಿಯರಿಗೆ ಶಾಕ್ ನೀಡಿದೆ.
ಸರ್ಕಾರ ಈ ಹಿಂದೆ ಬಿಯರ್ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಆ ನಂತರ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಿಯರ್ ಕಂಪನಿಗಳು ಫೆಬ್ರವರಿ ತಿಂಗಳಲ್ಲಿ ಬಿಯರ್ ಬೆಲೆ 10 ರೂ.ವರೆಗೆ ಏರಿಕೆ ಮಾಡಿತ್ತು. ಈಗ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಬಿಯರ್ ದರ ಏರಿಕೆ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 50 ರಿಂದ 60 ರೂ. ವರೆಗೆ ಹೆಚ್ಚಳವಾದಂತಾಗಿದೆ.
ಕೆಲವು ಕಂಪನಿಗಳ ಬಿಯರ್ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರದಿಂದ ಜಾರಿಯಾಗಲಿದೆ. ಎಲ್ಲ ಬ್ರ್ಯಾಂಡ್ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ 10 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಿದೆ.
ಇದರಿಂದ ಮದ್ಯಪ್ರೀಯರು ಸಂಕಷ್ಟಪಡುವಂತಾಗಿದೆ, ಹೆಂಡತಿಗೆ ಗೃಹಲಕ್ಷ್ಮೀ ಹಣ ನೀಡಿ ಅದೇ ಹಣ ಗಂಡನ ಜೇಬಿನಿಂದ ಸರ್ಕಾರ ಕಸೆದುಕೊಳ್ಳುತ್ತಿದೆ ಎಂದು ಸಾರ್ವಜನಿಕರು ಗುಸುಗುಸು ಮಾತನಾಡುತ್ತಿದ್ದಾರೆ.