New Parliament Building
ದೇಶದ ಪರಿಸ್ಥಿತಿ ಹೇಗಿದೆಯೋ ಅದೇ ರೀತಿ ದೇಶದ Parliament ಭವನದ್ದು ಕೂಡ ಹಾಗೆಯೆ ಇದೆ! ದೇಶವೆಲ್ಲಾ ಮುಳುಗಿರುವಾಗ ಪ್ರಧಾನಿ ಮೋದಿಯವರ ದೂರದೃಷ್ಟಿ ಹೇಗಿದೆಯಂದರೆ ನಾವು ಕೂಡ ಮುಳುಗಡೆಯಾಗುವ ಜಾಗದಲ್ಲಿ ಕುಳಿತು ಹರಟೆ ಹೊಡೆಯುತ್ತೇವೆ ಎಂದು ಹೊಸ ಕಳಪೆ ಸಂಸದ್ ನಿರ್ಮಾಣ ಮಾಡಿಸಿದ್ದರಾ? ಎಂಬ ಪ್ರಶ್ನೆ ಜನರ ಮನಸಿನಲ್ಲಿ ಮೂಡಿದೆ?
New Parliament Building ಫ್ಲೋರ್ ಸಮಸ್ಯೆ ಏನು?
ದೇಶದಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದಾದ ಪ್ರಾಣ ಹಾನಿಯನ್ನು ಕಣ್ಣಿಂದ ಮರೆ ಮಾಚಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದಲ್ಲಿ(New Parliament Building ) ಮಳೆ ನೀರು ನಿಂತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲ ಸೃಷ್ಟಿ ಮಾಡಿದೆ. ಜೊತೆಗೆ ಇದರ ಮೇಲೆ ಖರ್ಚು ಮಾಡ್ದಿದ ಹಣ ಎಲ್ಲಿ ಹೋಯಿತು ಪ್ರಧಾನಿ ಮೋದಿ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ.
ಯಾರು ಈ ಪೋಸ್ಟ್ ಮಾಡಿದ್ದಾರೆ?
ಸಂಸತ್ ಭವನ ಹಳೆಯದಲ್ಲ, ನಿರ್ಮಾಣ ಮಾಡಿ ಸುಮಾರು ವರ್ಷಗಳು ಕಳೆದಿಲ್ಲ. ಹೀಗಿದ್ದರೂ ಇತ್ತೀಚೆಗಷ್ಟೇ ನಿರ್ಮಾಣಗೊಂಡ ಭವನದಲ್ಲಿ ಮಳೆ ನೀರು ತುಂಬಿರುವುದು ಕಂಡು ಬಂದಿದೆ. ಈ ದೃಶ್ಯವನ್ನು ತಮಿಳುನಾಡಿನ ವಿರುದುನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಬಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಎಷ್ಟು ಕೋಟಿ ಖರ್ಚು ಮಾಡಲಾಗಿದೆ New Parliament Buildingಗಾಗಿ?
1,200 ಕೋಟಿ ಖರ್ಚು ಮಾಡಿ ನಿರ್ಮಿಸಿರುವ ನೂತನ ಸಂಸತ್ ಭವನದಲ್ಲಿ ನೀರು ಜಿನುಗುತ್ತಿದ್ದು, ಅದನ್ನು ಸಂಗ್ರಹಿಸಲು ಬಕೆಟ್ ಅನ್ನು ಇಡಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಮೋದಿ ಸರ್ಕಾರದಲ್ಲಿ ಹೊರಗೆ ಪೇಪರ್ ಸೋರುತ್ತಿದೆ, ಒಳಗೆ ಮಳೆ ನೀರು ಸೋರುತ್ತಿದೆ ಎಂದು ಅವರು ಬಿಜೆಪಿ ವಿರುದ್ಧ ಆಕ್ರೋಶಗೊಂಡು ಬರೆದಿದ್ದಾರೆ. ಜೊತೆಗೆ ಹೊಸ ಸಂಸದ್ ಭವನ ಹೀಗೆಯಾಗಲು ಕಾರಣ ಪ್ರಧಾನಿ ಮೋದಿ ಎಂದು ಹೇಳಿದ್ದಾರೆ.
New Parliament Building ಛಾವಣಿಯಿಂದ ಸಂಸದ್ ಜಲಪಾತ?
ಹೊಸ ಸಂಸತ್ತಿನ ಮೇಲ್ಪಾವಣಿಯಿಂದ ಜಿನುಗುವ ಮಳೆ ನೀರು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಧಿಕಾರಿಗಳ ಹಣದಾಸೆಗೆ ಕಳಪೆ ಕಾಮಗಾರಿಯಿಂದ ನೂತನ ಸಂಸತ್ ಭವನ ಸೋರಿಕೆಯಾಗುತ್ತಿದೆ. ಇದು ನಿಜಕ್ಕೂ ವಿಪರ್ಯಾಸ.
ಜನ ಏನು ಹೇಳುತ್ತಿದ್ದಾರೆ?
ಸಂಸತ್ ಭವನದ (New Parliament Building) ಕತೆ ಹೀಗಾದರೆ ಜನಸಾಮಾನ್ಯರ ಗತಿ ಏನು ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.ಈ ನೀರಿನ ಸೋರಿಕೆಯು ಹೊಸ ಕಟ್ಟಡದಲ್ಲಿನ ಮುಂದಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದೆ.
ಸಂಸದ್ ಲೋಕಸಭಾ ಕಲಾಪ ಮುಂದೂಡಿಕೆ?
ನಿರ್ಮಾಣ ಪೂರ್ಣಗೊಂಡ ಕೇವಲ ಒಂದು ವರ್ಷದ ನಂತರ ಸಂಸತ್ ಭವನ ಮಳೆ ನೀರಿನಿಂದ ತುಂಬಿ ಹೋಗಿದೆ. ಇದರಿಂದಾಗಿ ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಮಂಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮೋದಿ ಸರ್ಕಾರ ಯಾರಿಗಾಗಿ ಹಣ ಮೀಸಲಿಟ್ಟಿದೆ?
ಮೋದಿ ಸರ್ಕಾರ 1200 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹೊಸ ಸಂಸತ್ ಕಟ್ಟಡದಲ್ಲಿ ಭಾರಿ ನೀರು ತುಂಬಿಕೊಂಡಿದೆ. ಕಾರಿನಲ್ಲಿ ಬಂದ ಜನಪ್ರತಿನಿಧಿಗಳು ಛತ್ರಿ ಹಿಡಿದು ಒಳಗಡೆ ಪ್ರವೇಶ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಅಲ್ಲದೆ ಮಳೆ ನೀರಿನಲ್ಲಿ ನಡೆದುಕೊಂಡು ಹೋಗುವ ಸ್ಥಿತಿ ನೂತನ ಸಂಸತ್ ಭವನದ ಮುಂದೆ ಕಂಡು ಬಂದಿದೆ. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.
BIG BREAKING 🚨⚡
Massive waterlogging in the new Parliament building made by Modi Govt for over ₹1,250 CRORES
What an absolute fraud on taxpayers’ money 👏👏 pic.twitter.com/y6qX4kqBTd
— Ankit Mayank (@mr_mayank) July 31, 2024
ಇನ್ನಷ್ಟು ಓದಿರಿ:
ಕೇರಳ ಗುಡ್ಡ ಕುಸಿತ: ಸಂತ್ರಸ್ತರ ನೆರವಿಗೆ ಕೈಜೋಡಿಸಲುವಯನಾಡಿಗೆ ಪ್ರಯಾಣ ಬೆಳೆಸಿದ ಸಚಿವ ಸಂತೋಷ್ ಲಾಡ್
ರಾಜ್ಯದಲ್ಲಿ ಇನ್ನು ಧಾರಾಕಾರ ಮಳೆ! FULL Rain Alert! ಆಗಸ್ಟ್ 2ರಂದು ಯಾವ ಜಿಲ್ಲೆಗಳಲ್ಲಿ ಮಳೆ?