spot_img
spot_img

C M ಗೆ ಶೋಕಾಸ್​ ನೋಟಿಸ್​: ಇದಕ್ಕೆಲ್ಲ ಅಂಜುವ ಜಾಯಮಾನ ನನ್ನದಲ್ಲ -C M ಸಿದ್ದರಾಮಯ್ಯ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವದಿಲ್ಲಾ, ತಪ್ಪು ಮಾಡಿದ್ರೆ ತಾನೇ ಹೆದರಬೇಕು . ನಾನು ತಪ್ಪೇ ಮಾಡಿಲ್ಲ ಮತ್ಯಾಕೆ ಹೆದರಬೇಕು ಎಂದು ರಾಜ್ಯಪಾಲರ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂರ ಆದರು.
ರಾಜ್ಯಪಾಲರಿಂದ C M ಗೆ ನೋಟೀಸ್ ;
ಮೈಸೂರು ; ರಾಜ್ಯಪಾಲರ ಶೋಕಾಸ್ ನೋಟೀಸ್​ ಕುರಿತು ಮೈಸೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು,ರಾಜ್ಯಪಾಲರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ . ಚುನಾಯಿತ ಸರ್ಕಾರದ ಮುಖ್ಯಮಂತ್ರಿಯಾದ ನನ್ನ ಮೇಲೆ ಏಕಾಏಕಿ ನೋಟೀಸ್​ ನೀಡಿದ್ದಾರೆ. 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರೋನು ನಾನು, ನನಗೆ ನೋಟೀಸ್​ ನೀಡುವ ಮುನ್ನ ಎಲ್ಲಾ ಕಾನೂನನ್ನು ಕೂಲಂಕುಶವಾಗಿ ನೋಡದೆ ನೋಟೀಸ್​ನೀಡಿ ಸರ್ಕಾರ ಅಸ್ಥಿರ ಗೊಳಿಸೋದಕ್ಕೆ ಯತ್ನಿಸಿದ್ದಾರೆ ಎಂದು ಕಿಡಿಕಾರಿದರು.

C M ಮೇಲೆ ರಾಜ್ಯಪಾಲರ ಆತುರವೇಕೆ ?
ದೂರು ಬಂದ ದಿನವೇ ಆತುರವಾಗಿ ಶೋಕಾಸ್​ ನೀಡಿದ್ದಾರೆ. ಅವರ ಪಕ್ಷದವರೇ ಆದ ಶಶಿಕಲಾ ಜೊಲ್ಲೆ, ಮುರುಗೇಶ್​ ನಿರಾಣಿ, ಜನಾರ್ಧನ್ ರೆಡ್ಡಿ ಮೇಲೆ ದೂರುಗಳಿವೆ. ವರ್ಷಗಟ್ಟಲೇ ಸುಮ್ಮನಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ . ಇದರರ್ಥ ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.ಜನರಿಂದ ಆಯ್ಕೆಯಾದ ​ ಸರ್ಕಾರವನ್ನು ದುರ್ಬಲ ಮಾಡಲು ಹೊರಟಿದೆ. ಇದು ಸಂವಿಧಾನವನ್ನು ಕೊಲೆ ಮಾಡುವ ಉದ್ದೇಶ, ಪ್ರಜಾಪ್ರಭುತ್ವವನ್ನು ನಾಶ ಮಾಡುವ ಕೆಲಸ ಎಂದು ನೇರವಾಗಿ ರಾಜ್ಯಪಾಲರ ಮತ್ತು ಕೇಂದ್ರ ಸರ್ಕಾರದ ಮೇಲೆ ಆಕ್ರೋಶ ಹೊರಹಾಕಿದರು.

ಇದರಲ್ಲಿ ನನ್ನ ಪಾತ್ರ ಏನು ಇಲ್ಲಾ ,ನಾನೇನೂ ಮಾಡಿಲ್ಲಾ ಆದರೂ ನನ್ನ ಮೇಲೆ ಶೋಕಾಸ್​ ನೋಟೀಸ್ ನೀಡಿದ್ದಾರೆ. ರಾಜ್ಯಪಾಲರು ಸಂಪೂರ್ಣವಾಗಿ ಕೆಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್​ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಜ್ಯಪಾಲರ ವಿರುದ್ಧ ಆರೋಪ ಮಾಡಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

INDIA FOREST INCREASED – ಭಾರತದಲ್ಲಿ 1,445 ಚದರ ಕಿ.ಮೀ ಅರಣ್ಯ ಹೆಚ್ಚಳ

INDIA FOREST NEWS : ಭಾರತದ ಅರಣ್ಯ ಸ್ಥಿತಿಗತಿ ವರದಿ ಪ್ರಕಾರ ದೇಶದಲ್ಲಿ ಅರಣ್ಯ ಸಂಪತ್ತು ವೃದ್ಧಿಸಿರುವುದು ಸಕಾರಾತ್ಮಕ ಬೆಳವಣಿಗೆಯಾದರೆ, ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ...

Coconut price News : ಕೊಬ್ಬರಿ ಬೆಂಬಲ ಬೆಲೆ 422 ರೂ. ಹೆಚ್ಚಳ

New Delhi News : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ...

BSY News :ಕಲಬುರಗಿ ಜಯದೇವ ಆಸ್ಪತ್ರೆ ಬಿಎಸ್ವೈ ಕನಸಿನ ಕೂಸು

Bangalore News: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು. ತಾವು(ಪ್ರಿಯಾಂಕ್ ಖರ್ಗೆ) 2016ರಲ್ಲಿ ಸಚಿವರಾದವರು. ಕಲಬುರಗಿಗೆ ತಮ್ಮಿಂದ ಯಾಕೆ ಇಂತಹ ಜನೋಪಯೋಗಿ...

ECO TOURISM : ಮೈಸೂರಿನಲ್ಲಿ ಇಕೋ ಟೂರಿಸಂ ಪ್ರಾರಂಭ

Mysore News: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪರಿಸರ (ECO) ಪ್ರವಾಸೋದ್ಯಮ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆ ತಯಾರಿಸಿದೆ. ಈ ಬಗ್ಗೆ...