ಹಾಲು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಹಾಲು ಕುಡಿಯುವುದರಿಂದ ದೇಹಕ್ಕೆ ಪೋಷಕಾಂಶ ಸಿಗುತ್ತವೆ ಅಂತಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹಾಲು ಕುಡಿದರೆ ಮೂಳೆ, ಮೆದುಳಿಗೆ ಬಲ ಅಂತ ಅಂತಾರೆ. ಆದರೆ ಇಲ್ಲಿ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಮಾತು ಮತ್ತೆ ಸಾಬೀತಾಗಿದೆ.
ಉತ್ತರಪ್ರದೇಶದ ಬುಲಂದ್ಶಹರ್ನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಈ ವೇಳೆ ನಕಲಿ ಹಾಲು ತಯಾರಿಕಾ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಬುಲಂದ್ಶಹರ್ನ ಉದ್ಯಮಿ ಅಜಯ್ ಅಗರ್ವಾಲ್ ಎಂಬುವನನ್ನು ಬಂಧಿಸಿದ್ದಾರೆ. 1 ಲೀಟರ್ ರಾಸಾಯನಿಕ ಬಳಸಿ 500 ಲೀಟರ್ ಹಾಲು ತಯಾರಿಸುತ್ತಿದ್ದ ಎಂಬ ಮಾಹಿತಿ ಬಯಲಿಗೆ ಬಂದಿದೆ.
ಹಾಲಿನಲ್ಲಿ ನೀರು ಕಲಿಸಿ ಮಾರಾಟ ಮಾಡುವುದು ಹಳೆಯ ವಿಚಾರ. ಈಗ ನಾವು ಕುಡಿಯುವ ಹಾಲೇ ವಿಷ ಎಂಬ ಆಘಾತಕಾರಿ ಸಂಗತಿ ಉತ್ತರ ಪ್ರದೇಶದ ಬುಲಂದಶಹರ್ನಿಂದ ಬೆಳಕಿಗೆ ಬಂದಿದೆ.
ಅಗರ್ವಾಲ್ಗೆ ಸೇರಿದ ಅಂಗಡಿ ಮತ್ತು 4 ಗೋಡೌನ್ಗಳ ಮೇಲೆ ದಾಳಿ ನಡೆಸಿ ನಕಲಿ ಹಾಲು ತಯಾರಿಸಲು ಬಳಸುತ್ತಿದ್ದ ರಾಸಾಯನಿಕ ವಶಪಡಿಸಿಕೊಂಡಿದ್ದಾರೆ. ಈ ಕೃತಕ ಹಾಲು ನಿಜವಾದ ಹಾಲಿಗಿಂತಲೂ ಏನೂ ಕಡಿಮೆ ಇಲ್ಲ ಅಂತಾರೆ ಅಧಿಕಾರಿಗಳು. ಹಾಲಿನ ಬಣ್ಣ, ರುಚಿ, ಸುವಾಸನೆ ನಿಜವಾದ ಹಾಲನ್ನೂ ಮೀರಿಸುವಂತಿದೆ ಅಂತೆ.
FSSAI ಅಧಿಕಾರಿಗಳ ಪ್ರಕಾರ ಹಾಲು, ಹಾಲಿನ ಉತ್ಪನ್ನ ಮಾರಾಟ ಮಾಡುತ್ತಿದ್ದ ಉದ್ಯಮಿ ಅಗರ್ವಾಲ್, ನಿಜವಾದ ಹಾಲಿನಂತೆ ಕಾಣುವಂತೆ ರಾಸಾಯನಿಕ ಬಳಸಿ ಕೃತಕ, ಸಿಹಿ ಕಾರಕ ಸುವಾಸನೆ ಬೆರೆಸುತ್ತಿದ್ದನಂತೆ. ಈ ನಕಲಿ ಹಾಲು 20 ವರ್ಷಗಳಿಂದ ತಯಾರಿಸಿ ಮಾರಾಟ ಮಾಡುತ್ತಿದ್ದನಂತೆ. ನಿಜವಾದ ಹಾಲಿನ ರುಚಿ ಬರುವಂತೆ ರಾಸಾಯನಿಕ ಬಳಸಲಾಗುತ್ತಿದ್ದನಂತೆ.
ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಈ ನಕಲಿ ಹಾಲು ತಯಾರಿಸುವುದನ್ನು ಅಗರ್ವಾಲ್ ಕಲಿತಿದ್ದು ಎಲ್ಲಿ ಅಂತ ಪ್ರಶ್ನಿಸುತ್ತಿದ್ದಾರೆ. ಅಗರ್ವಾಲ್ ಮಾರಾಟ ಮಾಡಿದ ಹಾಲು, ಹಾಲಿನ ಉತ್ಪನ್ನ ಖರೀದಿದಾರರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಅಂತ FSSAIನ ಅಧಿಕಾರಿ ವಿನಿತ್ ಸಕ್ಸೇನಾ ತಿಳಿಸಿದ್ದಾರೆ.
ದಾಳಿ ವೇಳೆ ಪತ್ತೆಯಾದ ರಾಸಾಯನಿಕಗಳ ಬಗ್ಗೆ ಮಾಹಿತಿ ತಿಳಿದು ಅಧಿಕಾರಿಗಳೇ ಹೌಹಾರಿದ್ದಾರೆ. ಕೇವಲ 5 ಮಿ.ಗ್ರಾಂ ರಾಸಾಯನಿಕ ಬಳಸಿ 2 ಲೀಟರ್ ಸಿಂಥೆಟಿಕ್ ಹಾಲು ರೆಡಿ ಮಾಡ್ತಿದ್ದರಂತೆ. ಕಲಬೆರಕೆಯ ಗೊತ್ತಾಗದಂತೆ ಸಿಹಿಕಾರಕ, ಕಾಸ್ಟಿಕ್ ಪೊಟ್ಯಾಶ್, ಹಾಲಿನ ಪರ್ಮಿಯೇಟ್ ಪೌಡರ್, ಸೊರ್ಬಿಟೋಲ್ ಮತ್ತು ಸಂಸ್ಕೃತಿಕ ಸೋಯಾ ಕೊಬ್ಬು ಸೇರಿ ರಾಸಾಯನಿಕ ಬಳಸಲಾಗುತ್ತಿತ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ.