ಬೆಂಗಳೂರು: ತಮಿಳುನಾಡು ಸರ್ಕಾರ ನೀಡುವ 2024ನೇ ಸಾಲಿನ ವೈಕಂ ಪ್ರಶಸ್ತಿಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ನೀಡಿ ಗೌರವಿಸಲಾಗಿದೆ.
ಕೇರಳದ ವೈಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಎಂ.ಕೆ ಸ್ಟಾಲಿನ್ ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೇವನೂರ ಮಹಾದೇವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ದೇವನೂರ ಮಹಾದೇವ ಅವರು ಕನ್ನಡ ಮತ್ತು ತಮಿಳು ಪುಸ್ತಕಗಳನ್ನು ಸಿಎಂ ಎಂ.ಕೆ ಸ್ಟಾಲಿನ್ ಅವರಿಗೆ ನೀಡಿದರು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಲಯಾಳಂ, ಕನ್ನಡ ಪುಸ್ತಕಗಳನ್ನು ನೀಡಿದರು. ದ್ರಾವಿಡ ಕಳಗಂ ಅಧ್ಯಕ್ಷರಾದ ಕೆ ವೀರಸ್ವಾಮಿಯವರಿಗೆ ʻಆರ್ಎಸ್ಎಸ್ ಆಳ ಅಗಲʼ ಪುಸ್ತಕಗಳನ್ನು ನೀಡಿದರು.
ಪೆರಿಯಾರ್ ರಾಮಸ್ವಾಮಿ ನೇತೃತ್ವದಲ್ಲಿ ವೈಕಂ ಹೋರಾಟದ ಶತಮಾನೋತ್ಸವ ಸಮಾರಂಭ ಹಾಗೂ ಪೆರಿಯಾರ್ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪೆರಿಯಾರ್ ರಾಮಸ್ವಾಮಿ ನೇತೃತ್ವದಲ್ಲಿ ಕೇರಳದ ವೈಕಂನಲ್ಲಿ ನಡೆದಿದ್ದ ವೈಕಂ ಹೋರಾಟಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಮಾತನಾಡಿದರು. ವೈಕಂ ಸ್ಥಳ ಹಾಗೂ ಅಲ್ಲಿ ನಡೆದಿದ್ದ ಸತ್ಯಾಗ್ರಹದ ಮಹತ್ವದ ಕುರಿತು ತಿಳಿಸಿದರು.
ತಳ ಸಮುದಾಯದ ಧ್ವನಿಯಾಗಿ ನಿಂತ ದೇವನೂರ ಮಹಾದೇವ ಅವರಿಗೆ ವೈಕಂ ಸತ್ಯಾಗ್ರಹದ ಶತಮಾನೋತ್ಸವದ ಸ್ಮರಣಾರ್ಥ ಮೊದಲ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.