Mysore News :
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ mysore ನಗರದಲ್ಲಿ ಬಿಗಿ ಭದ್ರತೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು mysore ನಗರ ಪೊಲೀಸ್ ಕಮಿಷನರ್ seema latker ತಿಳಿಸಿದ್ದಾರೆ. ನಗರ ಪೊಲೀಸರ ವತಿಯಿಂದ ಇಂದು ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ನಾವು ಡಿ.1ರಿಂದ ಡಿ.31ರವರೆಗೆ ನಗರದ ವಿವಿಧ ಭಾಗಗಳಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಗರದ ಶಾಲಾ-ಕಾಲೇಜು, ಪಾರ್ಕ್ಗಳಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ. ಮಾದಕ ವಸ್ತುಗಳ ಸೇವನೆ, ಸೈಬರ್ ಕ್ರೈಂ, ಸರಗಳ್ಳತನ, ಮನೆಗಳ್ಳತನ ಕುರಿತು ಜಾಗೃತಿ ಮೂಡಿಸುವ ಕೆಲಸ ಪ್ರತಿ ಠಾಣಾ ವ್ಯಾಪ್ತಿಯಲ್ಲೂ ನಡೆಸಲಾಗುತ್ತಿದೆ” ಎಂದರು.
Crime Prevention Month Rally :
ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪೊಲೀಸರು ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ rally ಪ್ರಾರಂಭಿಸಿ ಗಾಂಧಿ ವೃತ್ತ, ಸಯ್ಯಾಜಿ ರಾವ್ ವೃತ್ತ, k. r. circle, ದೇವರಾಜ ಅರಸು ರಸ್ತೆ ಮೂಲಕ ಸಾಗಿ ಜನರಲ್ಲಿ ಅಪರಾಧಗಳ ಬಗ್ಗೆ ಅರಿವು ಮೂಡಿಸಿದರು.