spot_img
spot_img

TIGER HUNT VEERAGALLU : ದೊಡ್ಡಬಳ್ಳಾಪುರದಲ್ಲಿ ನಾಲ್ಕನೇ ಹುಲಿಬೇಟೆ ವೀರಗಲ್ಲು ಪತ್ತೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Doddaballapur News:

ಹುಲಿಜೊತೆ ಕಾದಾಡುವಾಗ ಮೃತಪಟ್ಟ ವೀರನ ಸ್ಮರಣಾರ್ಥ ನೆಟ್ಟಕಲ್ಲುಗಳೇ ಹುಲಿಬೇಟೆ ವೀರಗಲ್ಲುಗಳಾಗಿವೆ. ಶಿಲ್ಪಲಕ್ಷಣದ ಆಧಾರದ ಮೇಲೆ ಗಮನಿಸಿದರೆ, ಇದು 10 ನೇ ಶತಮಾನಕ್ಕೆ ಸೇರಿಸಬಹುದು. ವೀರನು ಆಲೀಢಭಂಗಿಯಲ್ಲಿ ನಿಂತಿದ್ದು, ತನ್ನ ಬಲಗೈಯಲ್ಲಿ ಖಡ್ಗವನ್ನು ಹಿಡಿದು ಮೇಲೆತ್ತಿರುವನು. ಎದುರುಗಡೆ ವೀರನತ್ತ ಮುನ್ನುಗ್ಗುತ್ತಿರುವ ಹುಲಿಯ ಚಿತ್ರಣವಿದೆ.

ಈ ವೀರಗಲ್ಲಿನ ಮೇಲೆ ಯಾವುದೇ ರೀತಿಯ ಬರೆವಣಿಗೆ ಇಲ್ಲ ಎಂದರು. ತಾಲೂಕಿನಲ್ಲಿ ಹುಲಿಕುಂಟೆ ಗ್ರಾಮದಲ್ಲಿ ನಾಲ್ಕನೇ ವೀರಗಲ್ಲು ಪತ್ತೆಯಾಗಿದೆ. ಹುಲಿ ಬೇಟೆ ವೀರಗಲ್ಲುಗಳು ಗ್ರಾಮದ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಸಾಧ್ಯತೆಯೂ ಇದೆ ಎಂಬ ಕುತೂಹಲ ಕೂಡ ಮೂಡಿದೆ.

ಈ ಕುರಿತು ಮಾತನಾಡಿರುವ ಇತಿಹಾಸಕಾರ ಡಾ.ಎಸ್ ವೆಂಕಟೇಶ್, ಹುಲಿಬೇಟೆಯ ವೀರಗಲ್ಲುಗಳು ದೊರೆತಿರುವುದು ತೀರಾ ಕಡಿಮೆ. ತೂಬಗೆರೆ ಹೋಬಳಿಯ ತಿಮ್ಮೋಜನಹಳ್ಳಿಯಲ್ಲಿ ಎರಡು ಮತ್ತು ಗೆದ್ದಲಪಾಳ್ಯದ ರಸ್ತೆಯಲ್ಲಿ ಒಂದು ಹುಲಿಬೇಟೆ ವೀರಗಲ್ಲುಗಳು ಲಭ್ಯವಾಗಿವೆ.

ಈಗ ಹುಲಿಕುಂಟೆ ಗ್ರಾಮದಲ್ಲಿ ಹುಲಿಬೇಟೆಯ ವೀರಗಲ್ಲೊಂದು ಲಭ್ಯವಾಗಿದೆ.  ಇತಿಹಾಸ ಪೂರ್ವ ಕಾಲದಿಂದಲೂ ಮಾನವ ನಿರಂತರವಾಗಿ ಹುಲಿಗಳ ಜೊತೆಗೆ ಸಂಘರ್ಷ ಮಾಡಿಕೊಂಡು ಬಂದಿದ್ದಾನೆ. ಹೀಗೆ ಹುಲಿಜೊತೆ ಕಾದಾಡುವಾಗ ಮೃತಪಟ್ಟ ವೀರನ ಸ್ಮರಣಾರ್ಥ ನೆಟ್ಟಕಲ್ಲುಗಳೇ ಹುಲಿಬೇಟೆ ವೀರಗಲ್ಲುಗಳಾಗಿವೆ.

ಇಂತಹ ಸ್ಮಾರಕ ಶಿಲ್ಪಗಳಿಂದ ಹುಲಿಗಳ ವಾಸಸ್ಥಾನದ ಕುರಿತಂತೆ ಅಧ್ಯಯನ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಬ್ರಿಟಿಷ್ ಆಡಳಿತದ ಅವಧಿಯವರೆಗೆ ಈ ಭಾಗದಲ್ಲಿ ಹುಲಿಗಳಿದ್ದ ಮಾಹಿತಿಯಿದೆ. ಆದರೆ, ರಾಜ್ಯ ಅರಣ್ಯ ಇಲಾಖೆ ದಾಖಲೆಗಳ ಪ್ರಕಾರ 1950ರ ನಂತರ ಈ ಪ್ರದೇಶದಲ್ಲಿ ಹುಲಿಗಳಿರುವ ಕುರಿತು ಯಾವುದೇ ಮಾಹಿತಿಯಿಲ್ಲ.

ವಿಶೇಷ ಎಂದರೆ, ಇದೇ ಡಿಸೆಂಬರ್ 26 ಕ್ಕೆ ಹುಲಿಕುಂಟೆಯ ಬೇಟೆ ರಂಗನಾಥಸ್ವಾಮಿಯ ಜಾತ್ರೆಯಿದೆ. ಕಾಕತಾಳೀಯವೆಂಬಂತೆ ಇದೇ ಸಂದರ್ಭದಲ್ಲಿ ಹುಲಿಬೇಟೆ ವೀರಗಲ್ಲು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

PRABHAS : ಕಣ್ಣಪ್ಪ ಚಿತ್ರದಲ್ಲಿ ‘ರುದ್ರ’ನಾಗಿ ಸೂಪರ್ ಸ್ಟಾರ್ ಪ್ರಭಾಸ್

Prabhas News : ಬಹುನಿರೀಕ್ಷಿತ ಕಣ್ಣಪ್ಪ ಚಿತ್ರದಿಂದ ರೆಬೆಲ್​ ಸ್ಟಾರ್​ PRABHAS ​ ಅವರ ಮೊದಲ ನೋಟ ಅನಾವರಣಗೊಂಡಿದೆ.'ಕಣ್ಣಪ್ಪ', ಭಾರತೀಯ ಚಿತ್ರರಂಗದ ಒಂದು ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು,...

UNION BUDGET SESSION : ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ, ಸಂಜೆ ಪ್ರಧಾನಿ ಮೋದಿ ಉತ್ತರ

New Delhi News: UNION BUDGET SESSION ನಾಲ್ಕನೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರ ನೀಡಲಿದ್ದಾರೆ....

PRAYAGRAJ MAHA KUMBH LIGHTING : ಗಮನ ಸೆಳೆಯುತ್ತಿದೆ ಮಹಾಕುಂಭದ ಲೈಟಿಂಗ್ ವ್ಯವಸ್ಥೆ

Lucknow, Uttar Pradesh News: PRAYAGRAJ MAHA KUMBH LIGHTING ವಿದ್ಯುತ್ ಇಲಾಖೆ ಕನಸಿನ ಲೋಕವನ್ನೇ ಸೃಷ್ಟಿಸಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದು ಭಕ್ತರ...

TRANSGENDERS IN AKKA CAFE : ಮಂಗಳಮುಖಿಯರಿಂದ ‘ಅಕ್ಕ’ ಕೆಫೆ ನಿರ್ವಹಣೆ

Haveri News: ಹಾವೇರಿ ಜಿಲ್ಲಾ ಪಂಚಾಯತ್​ ದಿಟ್ಟ ನಿರ್ಧಾರಕ್ಕೆ ಮಂಗಳಮುಖಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸುಮಾರು 10 ಜನ ಮಂಗಳಮುಖಿಯರು ನಿರ್ವಹಣೆ ಮಾಡಲಿರುವ TRANSGENDERS IN AKKA CAFEಗೆ...