Siddalinga Swamiji VS Priyank kharge:
ಸ್ವಾಮೀಜಿ ಕಟ್ಟಿಸುತ್ತಿರುವ ಶಾಖಾ ಮಠಕ್ಕೆ Kalaburagi ಪಾಲಿಕೆ ನೋಟಿಸ್ ನೀಡಿದೆ. ಇದಕ್ಕೆ ಸಿಡಿದೆದ್ದ ಸ್ವಾಮೀಜಿ, ತಾಕತ್ತಿದ್ದರೆ ಜಿಲ್ಲೆಯ ನಿಮ್ಮದೇ ಶಾಸಕರ ನಿಯಮ ಬಾಹಿರ ಮನೆಯನ್ನು ನೆಲಸಮಗೊಳಿಸಿ ಎಂದು ಸಾವಾಲ್ ಹಾಕಿದ್ದಾರೆ.
ವಾಗ್ದಾಳಿ ಮುಂದುವರಿಸಿದ ಸ್ವಾಮೀಜಿ!
ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸ್ವಾಮೀಜಿ, ‘ನಿಮ್ಮ ಒಡೆತನದ ಪೀಪಲ್ ಏಕಜುಕೇಷನ್ ಸೊಸೈಟಿಯ ದಾಖಲೆಗಳೇ ಪಾಲಿಕೆ ಬಳಿ ಇಲ್ಲ. ಇದಕ್ಕೆಲ್ಲ ಉತ್ತರ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಮೊದಲು ನಿಮ್ಮ ನಿಯಮ ಬಾಹಿರ ಕಟ್ಟಡ ನೆಲಸಮ ಮಾಡಿ ಎಂದು ಸವಾಲು ಹಾಕಿದ್ದಾರೆ.
ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ ಮಾಡಿದ್ದೇನು?
ಕಲಬುರಗಿಯಲ್ಲಿ ಸ್ವಾಮೀಜಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ ನಡುವೆ ಆಗಾಗ ವಾಕ್ಸಮರ ನಡೆಯುತ್ತಲೇ ಇರುತ್ತದೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ನಡುವೆ ಮತ್ತೊಂದು ಸುತ್ತಿನ ಮಾತಿನ ಯುದ್ಧ ಶುರುವಾಗಿದೆ. ಈ ಮಠದ ಕಟ್ಟಡ ಪರವಾನಗಿ ಪಡೆಯುವಾಗ ಸ್ವಾಮೀಜಿ ಎರಡು ಅಂತಸ್ತಿನ ಕಟ್ಟಡ ಎಂದು ಉಲ್ಲೇಖಿಸಿದ್ದರು.
ಮೂರು ಅಂತಸ್ತಿನ ಕಟ್ಟಡ ವಿಷಯ!
ಸ್ವಾಮೀಜಿ ಮೂರು ಅಂತಸ್ತಿನ ಕಟ್ಟಡ ಕಟ್ಟಿಸಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಾರಿ ತಾರಕ್ಕೇರುವ ಲಕ್ಷಣ ಕಾಣಿಸಿದೆ. ಸಿದ್ದಲಿಂಗ ಶ್ರೀಗಳ ಶಾಖಾ ಮಠದ ವಿಚಾರವಾಗಿ ಈ ವಾಕ್ಸಮರ ಆರಂಭವಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಅದರಲ್ಲಿ ತಪ್ಪೇನಿದೆ? ನಾವೇ ನೋಟಿಸ್ ನೀಡಿದ್ದೇವೆ ಎಂದಿದ್ದಾರೆ.ಹೀಗಾಗಿ, ನೀವು ನಿಯಮ ಮೀರಿ ಕಟ್ಟಡ ನಿರ್ಮಾಣ ಮಾಡಿದ್ದೀರಿ ಎಂದಿರುವ ಕಲಬುರಗಿ ಮಹಾನಗರ ಪಾಲಿಕೆ, ಪರವಾನಗಿ ಯಾಕೆ ರದ್ದು ಮಾಡಬಾರದು ಎಂದು ನೋಟಿಸ್ ನೀಡಿದೆ. ಅವೆಲ್ಲಾ ನಿಯಮ ಪಾಲಿಸಿವೆಯಾ ಎಂದು ಪ್ರಶ್ನಿಸಿದ್ದಾರೆ.
ಸಿದ್ದಲಿಂಗ ಶ್ರೀಗಳ ಆರೋಪ!
ಅಲ್ಲದೇ ನಿಮ್ಮದೇ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆ ಕೂಡಾ ಪಾಲಿಕೆ ನಿಯಮ ಪಾಲಿಸಿಲ್ಲ. ಮೊದಲು ಅದನ್ನ ನೆಲಸಮ ಮಾಡಿ ಎಂದು ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.ಅವೆಲ್ಲಾ ನಿಯಮ ಪಾಲಿಸಿವೆಯಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಿಮ್ಮದೇ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆ ಕೂಡಾ ಪಾಲಿಕೆ ನಿಯಮ ಪಾಲಿಸಿಲ್ಲ. ಮೊದಲು ಅದನ್ನ ನೆಲಸಮ ಮಾಡಿ ಎಂದು ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.
ಇನ್ನಷ್ಟು ಓದಿರಿ:
Sri Ram Sena ವತಿಯಿಂದ ದೊಡ್ಡ ಹೇಳಿಕೆ! ಹಿಂದೂಗಳ ಮೇಲೆ ದೌರ್ಜನ್ಯ ಮಾಡುವವರೇ ಹುಷಾರ್!
Vinesh Phogat: ಹೊರ ಬರಲು ಕಾರಣ ಕೇವಲ 100 ಗ್ರಾಮ್!