Bangalore News:
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನ್ನನ್ನು ನಾನು NEW PRESIDENT FOR KPCC ಎಂದು ಮಾಡಿ ಎಂದು ಹೇಳಿಲ್ಲ. ನಾವುಗಳೆಲ್ಲ ಸಚಿವರಾದ ಮೇಲೆ ಪಕ್ಷಕ್ಕೆ ಸಮಯ ಕೊಡುವುದು ಕಡಿಮೆಯಾಗಿದೆ. 2023ರಲ್ಲಿ ಇದ್ದ ವೇಗ ಈಗ ಇಲ್ಲ, ಹಾಗಾಗಿ ಹೊಸ NEW PRESIDENT FOR KPCC ನೇಮಕ ಆಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಮುಂದುವರೆಯಬೇಕಾ, ಬೇರೆಯವರು ಅಧ್ಯಕ್ಷರಾಗಬೇಕಾ? ಎಂಬುದು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಬೇಕು.
ಹೈಕಮಾಂಡ್ ಸಹ ಈ ಬಗ್ಗೆ ತೀರ್ಮಾನ ಬೇಗ ಮಾಡಬೇಕು ಎಂದು ಒತ್ತಾಯಿಸಿದರು. ಶಾಸಕಾಂಗ ಸಭೆ ಬಳಿಕವೂ ಕಾಂಗ್ರೆಸ್ ನಾಯಕರ ಅಸಮಾಧಾನಗಳು ಕಡಿಮೆಯಾಗಿಲ್ಲ ಎಂಬುದಕ್ಕೆ ಇದೀಗ ಸತೀಶ್ ಜಾರಕಿಹೊಳಿ ಹೇಳಿಕೆ ಸಾಕ್ಷಿಯಾಗಿದೆ.
ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿರುವ ಅವರು, NEW PRESIDENT FOR KPCC ಜನಪ್ರಿಯ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರಿಗೆ ತಿಳಿಸಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
Discuss with High Command:
ಲೋಕಸಭಾ ಚುನಾವಣೆಯ ನಂತರ ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೇ ಬರೆದ ನೋಟ್ ಇದೆ. ಲೋಕಸಭಾ ಚುನಾವಣೆ ಮುಗಿದು ಆರು ತಿಂಗಳಾಯಿತು.
ಅದನ್ನು ಜಾರಿಗೆ ತರಬೇಕಲ್ಲವೇ ಎಂದು ಕೇಳಿದರು. ಕರ್ನಾಟಕ ಭವನ ಹೊಸ ಕಟ್ಟಡ ಉದ್ಘಾಟನೆಗಾಗಿ ಜನವರಿ ಕೊನೆಯಲ್ಲಿ ದೆಹಲಿಗೆ ಹೋಗುತ್ತೇನೆ. ಆಗ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು. ಕೆಪಿಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು, ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಿ ಎಂದು ಸುರ್ಜೇವಾಲಾ ಅವರಲ್ಲಿ ಮನವಿ ಮಾಡಲಾಗಿದೆ.
ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಸಂಬಂಧ ಹೈಕಮಾಂಡ್ ಶಾಸಕರ ಅಭಿಪ್ರಾಯವನ್ನೂ ಪಡೆಯಲಿ, ಶಾಸಕರ ಬೆಂಬಲ ಇರುವವರು ಅಧ್ಯಕ್ಷರಾಗಲಿ. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕಿದೆ. ಎಲ್ಲ ಹಿರಿಯ ನಾಯಕರ ಅಭಿಪ್ರಾಯವೂ ಇದೇ ಆಗಿದೆ. ಜಾತಿ ಗಣತಿ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ, ನಾಳೆ ನೋಡಬೇಕು. ಸಂಪುಟ ನಿರ್ಧಾರ ಏನು ಅಂತ ನೋಡಬೇಕಾಗುತ್ತದೆ. ಇದರ ಅಳವಡಿಕೆಗೆ ಸಮಯಬೇಕು. ಇಂತಹ ಅನೇಕ ವರದಿ ಇವೆ.
ಇವುಗಳನ್ನು ನಾವು ಒಪ್ಪಿಲ್ಲ ಅಥವಾ ತಿರಸ್ಕಾರ ಮಾಡಿದ್ದೇವೆ ಅಂತಿಲ್ಲ, ಎಲ್ಲಾ ಸಮುದಾಯ ಒತ್ತಾಯ ಇದೆ. ಸಮುದಾಯ ಅಂತ ಬಂದಾಗ ನೋಡಬೇಕು. ಸಮುದಾಯ ಬಿಟ್ಟು ನಾವಿಲ್ಲ ಎಂದು ಹೇಳಿದರು. ಎಲ್ಲ ಶಾಸಕರ ಅಭಿಪ್ರಾಯವನ್ನು ಆಲಿಸಿ ಹೈಕಮಾಂಡ್ ಶಾಸಕರ ಒತ್ತಾಸೆಯಂತೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವುದು ಒಳ್ಳೆಯದು ಎಂದು ಹೇಳಿದರು. ಈ ವಿಚಾರದಲ್ಲಿ ಡಿಕೆಶಿ ಪಟ್ಟಿನ ಕುರಿತು ಉತ್ತರಿಸಿದ ಅವರು, ನಮಗೆ ಫುಲ್ ಟೈಮ್ ಕೆಲಸ ಮಾಡಬೇಕು ಅಷ್ಟೆ.
ಅವರ ನಾಯಕತ್ವ ಬೇಕು ಅಥವಾ ಬೇಡ ಅಂತ ಹೈಕಮಾಂಡ್ ತೀರ್ಮಾನ ಮಾಡಬೇಕು. ಒಬ್ಬರಿಂದಲೇ ಪಕ್ಷ ಆಗಲ್ಲ. ಎಲ್ಲರೂ ಇದ್ದರೆ ಪಕ್ಷ ಇರುವುದು ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ಕೊಟ್ಟರು.
ಇದನ್ನು ಓದಿರಿ : PM MODI MAHARASHTRA VISIT : ವಿಶ್ವದ ಪ್ರಮುಖ ಕಡಲ ಶಕ್ತಿಯಾಗುವತ್ತ ಭಾರತ ದಾಪುಗಾಲು