Pune (Maharashtra) News:
SAIF ALI KHAN ಮೇಲೆ ನಿಜವಾಗಿಯೂ ಚಾಕು ಇರಿತವಾಯ್ತೇ ಅಥವಾ ನಟಿಸಿದ್ರೆ ಎಂದು ಸಚಿವ ನಿತೇಶ್ ರಾಣೆ ಅನುಮಾನ ವ್ಯಕ್ತಪಡಿಸಿದ್ದಾರೆ.ಮಹಾರಾಷ್ಟ್ರದ ಪುಣೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಸೈಫ್ ಮೇಲಿನ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. “ಅವರಿಗೆ ಇರಿತವಾಗಿದೆಯೇ ಅಥವಾ ಅವರು ನಟಿಸುತ್ತಿದ್ದಾರೆಯೇ ಎಂದು ನನಗೆ ಅನುಮಾನವಿತ್ತು” ಎಂದು ತಿಳಿಸಿದ್ದಾರೆ.ಬಾಲಿವುಡ್ ನಟ SAIF ALI KHAN ಮೇಲಿನ ಚಾಕು ಇರಿತ ಕುರಿತು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೇಳಿಕೆಗಳನ್ನು ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಬಿಜೆಪಿ ನಾಯಕ ಈ ದಾಳಿ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನಟನ ಮೇಲಿನ ದಾಳಿ ನಿಜವೇ ಅಥವಾ ಖಾನ್ ನಟಿಸಿದ್ರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಒಳ್ಳೆಯದೇ, ಕಸವನ್ನು ತೆಗೆದುಕೊಂಡು ಹೋಗಬೇಕು. ನಟ ಆಸ್ಪತ್ರೆಯಿಂದ ಹೊರಬಂದಾಗ ನಾನು ಅವರನ್ನು ನೋಡಿದೆ. ಆಗ ಅವರಿಗೆ ನಿಜವಾಗಿಯೂ ಚಾಕುವಿನಿಂದ ಇರಿತವಾಗಿದೆಯೇ ಅಥವಾ ಅವರು ನಟಿಸುತ್ತಿದ್ದಾರೆಯೇ ಎಂದು ಅನುಮಾನವಾಯಿತು. ಅವರು ನಡೆಯುತ್ತಿದ್ದಾಗ ಡ್ಯಾನ್ಸ್ ಮಾಡುತ್ತಿದ್ದರು” ಎಂದು ರಾಣೆ ಹೇಳಿಕೆ ನೀಡಿದ್ದಾರೆ.
“ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿ. ಅವರು SAIF ALI KHAN ಮನೆಗೆ ನುಗ್ಗಿದ್ರು. ಮೊದಲು ಅವರು ರಸ್ತೆಗಳ ಕ್ರಾಸ್ ಬಳಿ ನಿಲ್ಲುತ್ತಿದ್ದರು, ಈಗ ಮನೆಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ. ಬಹುಶಃ ಅವನು ಸೈಫ್ ಅವರನ್ನು ಕರೆದೊಯ್ಯಲು ಬಂದಿದ್ದರೇನೂ.ಅಷ್ಟೇ ಅಲ್ಲದೇ, ನಿತೇಷ್ ರಾಣೆ ಎನ್‌ಸಿಪಿ (ಎಸ್‌ಪಿ) ನಾಯಕರಾದ ಸುಪ್ರಿಯಾ ಸುಳೆ ಮತ್ತು ಜಿತೇಂದ್ರ ಅವ್ಹಾದ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದರು. ಈ ನಾಯಕರು SAIF ALI KHAN, ಶಾರುಖ್ ಖಾನ್ ಅವರ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ. ಹಿಂದೂ ನಟನಿಗೆ ಹಿಂಸೆಯಾದಾಗ ಮುಂದೆ ಬರೋದಿಲ್ಲ ಎಂದು ತಿಳಿಸಿದರು.
ಮುಂಬ್ರಾದ ಜೀತುದ್ದೀನ್ (ಜಿತೇಂದ್ರ ಅವ್ಹಾದ್) ಮತ್ತು ಬರಾಮತಿಯ ತಾಯ್ (ಸುಪ್ರಿಯಾ ಸುಳೆ) ಮಾತನಾಡೋದಿಲ್ಲ. ಅವರು SAIF ALI KHAN, ಶಾರುಖ್ ಖಾನ್ ಅವರ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತಿತರಾಗುತ್ತಾರೆ. ಎಂದಾದರೂ ಯಾವುದೇ ಹಿಂದೂ ಕಲಾವಿದನ ಬಗ್ಗೆ ಅವರು ಚಿಂತಿಸಿರುವುದನ್ನು ನೀವು ನೋಡಿದ್ದೀರಾ?. ಈ ಎಲ್ಲಾ ವಿಷಯಗಳ ಬಗ್ಗೆ ನೀವು ಗಮನ ಹರಿಸಬೇಕು” ಎಂದು ನಿತೇಶ್ ರಾಣೆ ತಿಳಿಸಿದರು.”ಶಾರುಖ್ ಖಾನ್ ಅಥವಾ SAIF ALI KHAN ಅವರಂತಹ ಖಾನ್ಗಳು ಗಾಯಗೊಂಡಾಗ, ಎಲ್ಲರೂ ಆ ಬಗ್ಗೆ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ನಂತಹ ಹಿಂದೂ ನಟ ಹಿಂಸೆಗೊಳಗಾದಾಗ, ಯಾರೂ ಪ್ರತಿಕ್ರಿಯಿಸುವುದಿಲ್ಲ.
ಇದನ್ನು ಓದಿರಿ : MYSTERIOUS DEATH IN RAJOURI : ಜಮ್ಮುವಿನಲ್ಲಿ ಒಂದೇ ಗ್ರಾಮದ 17 ಜನರ ನಿಗೂಢ ಸಾವು