Belgaum News:
ಒಂದು ತಿಂಗಳ ಹಸುಗೂಸು, ಬಾಣಂತಿ ಸೇರಿ ಮನೆಯವರನ್ನೆಲ್ಲಾ ಹೊರಗೆ ಹಾಕಿರುವ ಮೈಕ್ರೋ FINANCE ಸಿಬ್ಬಂದಿ, ಕುಟುಂಬವೊಂದರ ಮನೆ ಜಪ್ತಿ ಮಾಡಿದೆ.ಕಳೆದ 5 ವರ್ಷಗಳ ಹಿಂದೆ FINANCEನಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದೆ. ಬಳಿಕ ಮೂರು ವರ್ಷಗಳ ಕಾಲ ನಿರಂತರ ಕಂತು ತುಂಬಿದ್ದೆ.
ಆದರೆ, ಅನಾರೋಗ್ಯ ಮತ್ತು ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಕಂತು ತುಂಬಿಲ್ಲ. ಹಾಗಾಗಿ, ನಿನ್ನೆ ಏಕಾಏಕಿ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೆ ಮನೆಯನ್ನು FINANCEಸಿಬ್ಬಂದಿ ಜಪ್ತಿ ಪಡಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಒಂದು ತಿಂಗಳ ಬಾಣಂತಿ ಸದ್ಯ ಬೀದಿಪಾಲಾಗಿದ್ದಾರೆ.
ಮನೆಯ ಅಕ್ಕದ ಪುಟ್ಟ ಶೆಡ್ನಲ್ಲಿಯೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅನಾರೋಗ್ಯ, ಮನೆಯ ಪರಿಸ್ಥಿತಿ ನೆನದು ಲೋಹಾರ್ ಕುಟುಂಬ ಕಣ್ಣಿರು ಹಾಕುತ್ತಿದೆ.ಒಂದು ತಿಂಗಳ ಹಸುಗೂಸು, ಬಾಣಂತಿ ಸೇರಿ ಮನೆಯವರನ್ನೆಲ್ಲಾ ಹೊರಗೆ ಹಾಕಿದ್ದಲ್ಲದೇ, ವಾಸಿಸುವ ಮನೆ ಗೋಡೆ ಮೇಲೆ ಹರಾಜಿದೆ ಎಂದು ಬರೆದಿರುವುದಾಗಿ ಮೈಕ್ರೋFINANCE ಸಂಸ್ಥೆಯಿಂದ ಕಿರುಕುಳಕ್ಕೊಳಗಾದ ಕುಟುಂಬ ಅಳಲು ತೋಡಿಕೊಂಡಿದೆ.
ಬಾಣಂತಿ, ಹಸುಗೂಸು ಅಂತಾನೂ ನೋಡದೇ ಪಾತ್ರೆ, ಬಟ್ಟೆಗಳನ್ನು ಹೊರಗೆ ಹಾಕಿ ಮನೆಗೆ ಬೀಗ ಜಡಿದಿದ್ದಾರೆ.ರಾಜ್ಯದಲ್ಲಿ ಮೈಕ್ರೋ FINANCE ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು ಮುಂದುವರೆದಿದ್ದು, ಬೆಳಗಾವಿಗೂ ತಟ್ಟಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಗಣಪತಿ ರಾಮಚಂದ್ರ ಲೋಹಾರ್ ಎಂಬುವರ ಮನೆ ಜಪ್ತಿ ಪಡಿಸಿಕೊಳ್ಳಲಾಗಿದೆ.ಮೊದಲೇ ಸಿಜರಿಯನ್ ಮೂಲಕ ಹೆರಿಗೆ ಆಗಿರುವ ಬಾಣಂತಿ ಮತ್ತು ಹಸುಗೂಸಿಗೆ ಆರೈಕೆ ಬೇಕಿತ್ತು.
ಆದರೆ, ಮಾನವೀಯತೆಯನ್ನೂ ಲೆಕ್ಕಿಸದೇ FINANCE ಸಿಬ್ಬಂದಿ ಈ ರೀತಿ ಉದ್ಧಟತನ ಮೆರೆದಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಇಂತಹದ್ದೊಂದು ಘಟನೆ ಆಗಬಾರದಿತ್ತು, ಆಗಿದೆ. ಮಧ್ಯವರ್ತಿಗಳ ಹಾವಳಿಯಿಂದ ಈ ರೀತಿ ಆಗುತ್ತಿದೆ. ಮಧ್ಯವರ್ತಿ ಹಾಗೂ ಮೂರನೇ ವ್ಯಕ್ತಿಗಳಿಂದ ಕಾಟ ಕೊಡುತ್ತಿರುವುದು ನಮ್ಮ ಇಂಟಲಿಜೆನ್ಸ್ ಮೂಲಕ ಮಾಹಿತಿ ಇದೆ.
ನಾನು ಈಗಾಗಲೇ ಅಧಿಕಾರಿಗಳಿಗೆ ಹಾಗೂ ಎಸ್ಪಿ ಅವರಿಗೆ ಕ್ರಮಕ್ಕಾಗಿ ಸೂಚನೆ ನೀಡಿದ್ದೇನೆ ಎಂದರು.ಮೂರು ವರ್ಷ ಕಟ್ಟಿರುವ ಕಂತಿನ ಹಣದ ಸ್ಟೇಟಮೆಂಟ್ ಕೊಡಲು FINANCE ಸಿಬ್ಬಂದಿ ನಿರಾಕರಿಸುತ್ತಿದ್ದಾರೆ. ಸದ್ಯ 7.5 ಲಕ್ಷ ರೂಪಾಯಿ ಒಂದೇ ಹಂತದಲ್ಲಿ ಕಟ್ಟುವಂತೆ FINANCE ಸಿಬ್ಬಂದಿ ಪೀಡಿಸುತ್ತಿದ್ದಾರೆ.
ಈಗಾಗಲೇ ಮೂರು ವರ್ಷ ಕಂತು ತುಂಬಿದರೂ, ಈಗ ಮತ್ತೆ 7.5 ಲಕ್ಷ ರೂ. ನಾವು ಎಲ್ಲಿಂದ ತುಂಬುವುದು ಅಂತಾ ಲೋಹಾರ್ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.ಮೊದಲೇ ಸಿಜರಿಯನ್ ಮೂಲಕ ಹೆರಿಗೆ ಆಗಿರುವ ಬಾಣಂತಿ ಮತ್ತು ಹಸುಗೂಸಿಗೆ ಆರೈಕೆ ಬೇಕಿತ್ತು. ಆದರೆ, ಮಾನವೀಯತೆಯನ್ನೂ ಲೆಕ್ಕಿಸದೇ FINANCE ಸಿಬ್ಬಂದಿ ಈ ರೀತಿ ಉದ್ಧಟತನ ಮೆರೆದಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಅಲ್ಲದೇ, ಇನ್ಮುಂದೆ ಈ ರೀತಿಯ ಘಟನೆ ಆಗಬಾರದು.
ಇದರ ಬಗ್ಗೆ ಗಮನ ಹರಿಸುತ್ತೇವೆ. ಜಿಲ್ಲೆಯಲ್ಲಿ ಬಹಳಷ್ಟು FINANCEಗಳಿಂದ ಕಿರುಕುಳ ಆಗುತ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ಮೈಕ್ರೋ FINANCEಗಳು ಕೆಲಸ ಮಾಡುತ್ತಿವೆ. ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಬಾಣಂತಿಯನ್ನು ಮನೆಯಿಂದ ಹೊರಹಾಕಿ ಮನೆ ಹರಾಜಿಗಿಟ್ಟ ಪ್ರಕರಣ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, ಕುಟುಂಬಸ್ಥರು ದೂರು ಕೊಟ್ಟರೆ, FINANCEನವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದ್ದನು ಓದಿರಿ :WANKHEDE STADIUM 50TH ANNIVERSARY:14,505 ಲೆದರ್ ಬಾಲ್ಗಳಿಂದ ‘ವಾಕ್ಯ’ ರಚಿಸಿ ಗಿನ್ನೆಸ್ ದಾಖಲೆ.