spot_img
spot_img

848 ನಿವೇಶನಗಳ ಖಾತೆ ಮತ್ತು ನೋಂದಣಿ ಕಾರ್ಯ 9 ದಿನಗಳಲ್ಲಿ ಪೂರ್ಣಗೊಂಡಿದ್ದು ; ಯಾವುದೇ ಅಕ್ರಮವಾಗಿಲ್ಲ.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಸೊಸೈಟಿಗೆ ನಿವೇಶನಗಳನ್ನು ಬಿಡುಗಡೆ ಮಾಡುವಾಗ ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿ 2 ದಿನಗಳಲ್ಲಿ ಖಾತೆ ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ ಎಂಬ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಆರೋಪ ನಿರಾಧಾರ.

ಇದನ್ನೂ ಓದಿ : ಮುಸ್ಲಿಂ ಮುಖಂಡರ ಸವಾಲಿಗೆ ವಿಎಚ್‌ಪಿ ಮತ್ತು ಭಜರಂಗದಳ ಬಿಸಿ ರೋಡ್ ಚಲೋಗೆ ಕರೆ .!

ಮೈಸೂರು: 848 ನಿವೇಶನಗಳ ಖಾತಾ ಮತ್ತು ನೋಂದಣಿ ಕಾರ್ಯ 9 ದಿನಗಳಲ್ಲಿ ಪೂರ್ಣಗೊಂಡಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಭಾನುವಾರ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೊಸೈಟಿಗೆ ನಿವೇಶನಗಳನ್ನು ಬಿಡುಗಡೆ ಮಾಡುವಾಗ ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿ 2 ದಿನಗಳಲ್ಲಿ ಖಾತೆ ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ ಎಂಬ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಆರೋಪ ನಿರಾಧಾರ. ನಿವೇಶನ ಹಂಚಿಕೆಯನ್ನು ಕಾನೂನು ಬದ್ಧವಾಗಿಯೇ ಮಾಡಲಾಗಿದೆ ಎಂದು ಹೇಳಿದರು.

848 ಸೈಟ್‌ಗಳಿಗೆ ಖಾತಾಗಳನ್ನು 1ದಿನದಲ್ಲಿ ನೀಡಲಾಗಿಲ್ಲ, 9 ದಿನಗಳಲ್ಲಿ ಕಾನೂನು ಬದ್ಧವಾಗಿ ಪ್ರಕ್ರಿಯೆ ಪೂರ್ಣಗೊಂಡಿದೆ. 9 ದಿನಗಳ ಅಂತರದಲ್ಲಿ ಖಾತೆ ಆಗಿರುವ ಬಗ್ಗೆ ತಾಂತ್ರಿಕ ವರದಿಯಲ್ಲೇ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ತಿಳಿಸಿದರು.

ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನ ಬಿಡುಗಡೆ ವಿಷಯವು ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸುವಾಗ ನಾನು ಹಾಜರಿರಲಿಲ್ಲ. ನನ್ನ ಮತ್ತು ಅಂದಿನ ಆಯುಕ್ತರ ನಡುವೆ ಉತ್ತಮ ಬಾಂಧವ್ಯ ಇರಲಿಲ್ಲ. ಹೀಗಾಗಿ ಅವರು ನನ್ನ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದು ಸುಳ್ಳು ಆರೋಪ ಮಾಡಿದ್ದಾರೆಂದು ಹೇಳಿದರು.

ಇದನ್ನೂ ಓದಿ : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಹೈ ಅಲರ್ಟ್’ ಘೋಷಣೆ ಮಾಡಲಾಗಿದೆ; ಪ್ರತ್ಯೇಕ ವಲಯ ಸ್ಥಾಪನೆ.!

ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಯಾವುದೇ ಸರ್ಕಾರಿ ಭೂಮಿಯಲ್ಲಿ ಬಡಾವಣೆ ರಚನೆ ಮಾಡಿಲ್ಲ. 3500 ಸಾವಿರ ಸದಸ್ಯರಿರುವ ಸಂಘದಲ್ಲಿ ಈವರೆಗೆ 2500 ನಿವೇಶನ ಹಂಚಿಕೆ ಮಾಡಲಾಗಿದೆ. ಕೃಷಿ ಭೂಮಿಯನ್ನು ಮಾಲೀಕರಿಂದ ನೇರವಾಗಿ ಮಾರುಕಟ್ಟೆ ದರದಲ್ಲಿ ಖರೀದಿಸಲಾಗಿದೆ. ಎಲ್ಲವೂ ನಿಯಮಾನುಸಾರವಾಗಿಯೇ ನಡೆದಿದೆ.

ಸಭೆಯಲ್ಲಿ 4 ಯೋಜನೆಗಳ 848 ನಿವೇಶನಗಳಿಗೆ ಖಾತೆ ಮಾಡಿಕೊಡುವ ವಿಷಯಕ್ಕೆ ಒಪ್ಪಿಗೆ ಕೊಡಲಾಗಿದೆ. ಆದರೆ, ಬೇರೆ ಬೇರೆ ದಿನಾಂಕಗಳಲ್ಲಿ ಕಾಲಾನುಕಾಲವಾಗಿ ನಿವೇಶನಗಳನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ 1 ದಿನ ನಿವೇಶನ ಬಿಡುಗಡೆ ಮಾಡಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದದ್ದು ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

50:50 ಅನುಪಾತದಡಿ ಮುಡಾ ಸಭೆಯಲ್ಲಿ ಚರ್ಚಿಸಿ ಹಂಚಿಕೆಯಾಗಿರುವ ನಿವೇಶಗಳ ವಿಚಾರದಲ್ಲಿ ಯಾವುದೇ ಅಕ್ರಮವಾಗಿಲ್ಲ. ಸಭೆಯ ಗಮನಕ್ಕೆ ಬಾರದ ಪ್ರಕರಣಗಳಲ್ಲಿ ತಪ್ಪುಗಳು ಆಗಿರಬಹುದು. ಅವುಗಳು ತನಿಖೆಯಿಂದ ಹೊರಬರಲಿವೆ ಎಂದು ಹೇಳಿದರು.

ನಟೇಶ್ ಅವರ ಅಕ್ರಮಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರಿಂದ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ. ನಾನು ನಟೇಶ್ ಅವರ ನಿರ್ಧಾರಗಳನ್ನು ವಿರೋಧಿಸಲು ಪ್ರಾರಂಭಿಸಿದ ನಮ್ಮಿಬ್ಬರ ಸಂಬಂಧವು ಹದಗೆಟ್ಟಿತ್ತು. ಈ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರೂ ಕ್ರಮ ಕೈಗೊಳ್ಳಳಿಲ್ಲ. ನಟೇಶ್ ಅವರು ಆಯುಕ್ತರಾಗಿದ್ದ ಅವಧಿಯಲ್ಲಿ ಹಲವಾರು ಅಕ್ರಮಗಳು ನಡೆದಿವೆ. ಈ ಅಕ್ರಮಗಳ ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ಸರ್ಕಾರ ರಚಿಸಿದೆ. ವರದಿ ಸಲ್ಲಿಕೆಯಾದ ನಂತರ ಅಕ್ರಮದಲ್ಲಿ ಭಾಗಿಯಾಗಿರುವ ಆಯುಕ್ತರು ಮತ್ತು ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಮುಡಾ ಅಧ್ಯಕ್ಷ ರಾಜೀವ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ 2022 ರ ಫೆಬ್ರುವರಿ 22 ರಂದು ಆಗಿನ ಮುಡಾ ಆಯುಕ್ತ ಡಿಬಿ ನಟೇಶ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಶ್ರೀವತ್ಸ ಅವರು ಆರೋಪಿಸಿದ್ದರು.

ರಾಜೀವ್ ಅವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಿದ್ದಾರೆ ಮತ್ತು ಸರ್ಕಾರಿ ಆದೇಶ ಮತ್ತು ವಲಯ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ. ಹೌಸಿಂಗ್ ಸೊಸೈಟಿಗೆ ಸಂಬಂಧಿಸಿದ ಕಡತಗಳನ್ನು ಮುಡಾ ಆಯುಕ್ತರಿಗೆ ಹಿಂದಿರುಗಿಸುವ ಬದಲು ತಮ್ಮ ಕಚೇರಿಯಲ್ಲಿ ಇರಿಸಿದ್ದಾರೆ ಎಂದು ಆರೋಪಿಸಿದ್ದರು

WhatsApp Group Join Now
Telegram Group Join Now
Instagram Account Follow Now
spot_img

Related articles

ಕಾರ್ಪೊರೇಟ್ ಯುಗದಲ್ಲಿ Ratan Tata ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದು ಹೇಗೆ ?

Ratan Tata Death ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಗಳಲ್ಲಿ ಒಬ್ಬರಾದ ರತನ್ ಟಾಟಾ. ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ೩೦ ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದು...

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...