ಚಾಮರಾಜನಗರ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ಸಂಬಂಧ ಈಗಾಗಲೇ ಕ್ರಮ ಕೈಗೊಂಡಿದ್ದೇವೆ, ಮುಂದೆಯೂ ಕ್ರಮ ಕೈಗೊಳ್ಳುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
“ಜೌಷಧಿ ಸರಿ ಇಲ್ಲ ಎಂದು ಡ್ರಗ್ ಕಂಟ್ರೋಲರ್ನ ಅಮಾನತು ಮಾಡಿದ್ದೇವೆ. ಜೌಷಧಿ ವಿತರಣೆ ಮಾಡಿದ್ದವರನ್ನು ಕಪ್ಪು ಪಟ್ಟಿಗೆ ಹಾಕಿದ್ದೇವೆ. ಜೊತೆಗೆ ಒಂದು ಕಮಿಟಿ ಕೂಡ ಮಾಡಿದ್ದೆವು. ಅವರಿಗೆ ವರದಿ ಕೊಡಲು ಹೇಳಿದ್ದೇವೆ. ಅವರು ವರದಿ ಕೊಟ್ಟ ಮೇಲೆ ಯಾರು ತಪ್ಪಿತಸ್ಥರು ಇದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ. ಮುಂದೆಯೂ ತೆಗೆದುಕೊಳ್ಳುತ್ತೇವೆ” ಎಂದರು.
ಕೊಳ್ಳೇಗಾಲ ತಾಲೂಕಿನ ನರಿಪುರ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರು ಮೃತಪಟ್ಟಿರುವ ಸಂಬಂಧ ನಾನು ಈಗಾಗಲೇ ಮೀಟಿಂಗ್ ಮಾಡಿದ್ದೆ. ಇವತ್ತು ಆರೋಗ್ಯ ಸಚಿವರು ಮತ್ತು ಇಲಾಖೆ ಅಧಿಕಾರಿಗಳು ಅಲ್ಲಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now