ತುಮಕೂರು: ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ಅನುದಾನದಡಿ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ಒಂದು ಸಾವಿರ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಇಲಾಖೆಗಳಿಂದ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಈ ಎಲ್ಲಾ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು.
ಕಾಮಗಾರಿಗಳ ಗುಣಮಟ್ಟದ ದೃಢೀಕರಣವನ್ನು ಸಂಬಂಧಪಟ್ಟ ಇಲಾಖೆಯವರು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು ಎಂದು ಹೇಳಿದರು.
ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ನಿರ್ದೇಶಿಸಿದರು.
ಜಿ.ಪಂನಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ‘ಎಲ್ಲಾ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಎಲ್ಲೂ ಲೋಪವಾಗದಂತೆ ಅನುಷ್ಠಾನ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅನುದಾನ ಪೋಲಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆಯುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಸಾರ್ವಜನಿಕ ಶೌಚಾಲಯಗಳ ದುರಸ್ತಿಗೆ, ನೀರಿನ ಟ್ಯಾಂಕ್ ನಿರ್ಮಾಣ, ಬೇಸನ್ ರಿಪೇರಿ, ಶಿಥಿಲ ಗೊಂಡಿರುವ ಗೋಡೆಗಳ ನಿರ್ವಹಣೆ ಮಾಡುವುದು 2,11,5,9ನೇ ವಾರ್ಡ್‌ಗಳಿಗೆ ಸರಿಯಾದ ರೀತಿಯಲ್ಲಿ ಕುಡಿಯುವ ನೀರು ಪೂರೈಕೆ ಯಾಗುತ್ತಿಲ್ಲ ಎಂದು ಕೈಪಂಪ್ ಹಾಗೂ ಮಿನಿ ವಾಟರ್ ಸಪ್ಲೈ ತೊಂಬೆ ಗಳನ್ನು ಅಳವಡಿಸುವಂತೆ ಸೂಚಿಸ ಲಾಯಿತು. ಕೆಲವು ವಾರ್ಡ್‌ಗಳಿಗೆ ಸಿಸಿ ರಸ್ತೆ ಸಿಸಿ ಚರಂಡಿ ನಿರ್ಮಿಸಿರುವ ಸ್ಥಳಗಳಲ್ಲಿ ಶಿಥಿಲ ವಾಗಿರುವ ಕಾಮಗಾರಿ ಗಳನ್ನು ದುರಸ್ತಿ ಮಾಡಿಸುವಂತೆ ಕ್ರಮ ವಹಿಸಬೇಕು ಎಂದು ಸದಸ್ಯರು ತಿಳಿಸಿದರು.
ಉಪಾಧ್ಯಕ್ಷ ವೈ.ಎಸ್. ನಿಂಗರಾಜು, ಮುಖ್ಯಾಧಿಕಾರಿ ಉಮಾ ಶಂಕರ್, ಸದಸ್ಯರಾದ ಬೀಮಪ್ಪ, ಜೆ.ಶ್ರೀನಿವಾಸ, ಉಮಾಶಂಕರ್, ನಾಗರಾಜು, ಮಹದೇವಮ್ಮ, ಶಿಲ್ಪ, ನಾಗರತ್ನ, ಕೆ.ಮಲ್ಲಯ್ಯ, ಅಧಿಕಾರಿಗಳಾದ ಜೆಇ ಬೆಟ್ಟಸ್ವಾಮಿ, ಪ್ರಕಾಶ್, ಸಮುದಾಯ ಸಂಘಟನಾ ಧಿಕಾರಿ ನಂಜುಂಡಯ್ಯ, ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ, ಕುಮಾರ ಇದ್ದರು.
ಪ.ಪಂ ಜೂನಿಯರ್ ಪ್ರೋಗ್ರಾಮ್‌ಗೆ ವೇತನ ಪಾವತಿಸಲು ಮತ್ತು ಪಟ್ಟಣದ ಕಾವೇರಿ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಹಾಲಂ ಖರೀದಿ ಸುವುದು. ಪಟ್ಟಣದ ಕಾವೇರಿ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಕ್ಲೋರಿನೇಷನ್ ಸಿಲಿಂಡರ್ ಖರೀದಿಸಲು ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.