ವಿಜಯಪುರ: ರೈತರು ಬಳಕೆ ಮಾಡುವುದರತ್ತ ದಿಟ್ಟ ಹೆಜ್ಜೆ ಇರಿಸಿದ್ದು, ಬಹುತೇಕ ರೈತರು ಸಲೀಸಾಗಿ ಆ್ಯಪ್ ಬಳಕೆ ಮಾಡುವುದರಲ್ಲಿ ನಿಪುಣರಾಗುತ್ತಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಬಳಕೆಯಲ್ಲಿ ಸುಶಿಕ್ಷಿತರು ಹಿಂದೆ ಬಿದ್ದಿದ್ದರೆ, ಓದು, ಬರಹ ಬಾರದ ರೈತರು ಮಾತ್ರ ಕೃಷಿ ಸಂಬಂಧಿಸಿದ ಮೊಬೈಲ್ ಆ್ಯಪ್ ಬಳಕೆ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ.ಹೌದು, ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಕೃಷಿಕರಾಗಿದ್ದಾರೆ.
ಕೃಷಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯಲ್ಲಿ ಡಜನ್ ಆ್ಯಪ್ಗಳಿವೆ. ಆದರೆ ಇವೆಲ್ಲಆ್ಯಪ್ಗಳನ್ನು ರೈತರು ಬಳಕೆ ಮಾಡುವುದರತ್ತ ದಿಟ್ಟ ಹೆಜ್ಜೆ ಇರಿಸಿದ್ದು, ಬಹುತೇಕ ರೈತರು ಸಲೀಸಾಗಿ ಆ್ಯಪ್ ಬಳಕೆ ಮಾಡುವುದರಲ್ಲಿ ನಿಪುಣರಾಗುತ್ತಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ರೈತರೇ ಆಯಾ ಹಂಗಾಮುವಾರು ಸಮೀಕ್ಷೆ ನಡೆಸಿ, ಕೃಷಿ ಇಲಾಖೆ ಅಧಿಕಾರಿಗಳಿಗೆ ಒದಗಿಸುವುದರ ಮಟ್ಟಿಗೆ ಎಕ್ಸಪರ್ಟ್ ಆಗಿದ್ದಾರೆ.
ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಕೃಷಿಕರಾಗಿದ್ದಾರೆ. ಈ ಪೈಕಿ 4 ಲಕ್ಷಕ್ಕೂ ಅಧಿಕ ರೈತರು ಕೃಷಿ ಇಲಾಖೆಯ ನಾನಾ ಆ್ಯಪ್ಗಳನ್ನು ಲೀಲಾಜಾಲವಾಗಿ ಬಳಕೆ ಮಾಡುವುದರ ಮೂಲಕ ಅಕ್ಷರಸ್ಥರನ್ನೇ ನಾಚಿಸುವಷ್ಟರ ಮಟ್ಟಿಗೆ ಆನ್ಲೈನ್ ಚತುರರಾಗಿದ್ದಾರೆ.
ಜಿಪಿಎಸ್ ಎಂದರೆ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ಈ ವಿಷಯದಲ್ಲಿ ರೈತರು ಪಕ್ಕಾ ಆಗಿದ್ದಾರೆ. ತಮ್ಮ ಜಮೀನು ಒಣ ಇಲ್ಲವೇ ನೀರಾವರಿ ಬೇಸಾಯ ಎಂಬುದನ್ನು ಆಯ್ಕೆ ಮಾಡಿಕೊಂಡು, ಜಿಪಿಎಸ್ ಮೂಲಕ ಎಷ್ಟು ಎಕರೆ ಹಿಡುವಳಿಯಲ್ಲಿ ಯಾವ ಬೆಳೆ ಬೆಳೆದಿದ್ದೇನೆ ಎಂಬುದನ್ನು ಬೆಳೆದರ್ಶಕ ಆ್ಯಪ್ನಲ್ಲಿ ದಾಖಲಿಸುತ್ತಿದ್ದಾರೆ.
ಒಂದು ವೇಳೆ ಕೃಷಿ ಇಲಾಖೆ ಪರವಾಗಿ ಆಯಾ ಗ್ರಾಮದ ಖಾಸಗಿ ನಿವಾಸಿಗಳು ಈ ಆ್ಯಪ್ನಲ್ಲಿ ತಪ್ಪಾಗಿ ನಮೂದಿಸಿದ್ದರೆ, ಈ ಆ್ಯಪ್ ಮೂಲಕ ರೈತರು ಆಕ್ಷೇಪ ಸಲ್ಲಿಸುವುಷ್ಟರ ಮಟ್ಟಿಗೆ ಆನ್ಲೈನ್ ಚತುರರಾಗಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಇಲಾಖೆಯ ಜನಪ್ರಿಯ ಯೋಜನೆಯಾಗಿರುವ ಪಿಎಂ ಕಿಸಾನ್ ಪಬ್ಲಿಕ್ ಪೋರ್ಟಲ್ ಬಳಸುವುದರಲ್ಲಿ ಬಹುತೇಕ ರೈತರು ನಿಪುಣರಾಗಿದ್ದಾರೆ. ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂ. ದಂತೆ ವರ್ಷಕ್ಕೆ 6 ಸಾವಿರ ರೂ. ರೈತರ ಬ್ಯಾಂಕ್ ಖಾತೆಗೆ ದೇಶಾದ್ಯಂತ ಡಿಬಿಟಿ ಮೂಲಕ ನೇರವಾಗಿ ಜಮೆಯಾಗುವ ಮೊತ್ತವನ್ನು ಪರಿಶೀಲಿಸಿಕೊಳ್ಳುತ್ತಿದ್ದಾರೆ.
ಕೃಷಿ ಇಲಾಖೆಯ ಮತ್ತೊಂದು ಜನಪ್ರಿಯ ಯೋಜನೆ ಈ ಫಸಲ್ ಬಿಮಾ ಯೋಜನೆ ಆ್ಯಪ್ ಬಳಸುವುದರಲ್ಲಿರೈತರು ಮುಂದಿದ್ದಾರೆ. ಈ ಯೋಜನೆಯಡಿ ಪ್ರಿಮಿಯಂ ಹಣ ಕಟ್ಟಿದ್ದು, ನಂತರ ಸರಕಾರದಿಂದ ಜಮೆಯಾಗಿದ್ದನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.