spot_img
spot_img

ಕಲಾಕೃತಿಯ ಭಾವನೆಗಳನ್ನು ವ್ಯಕ್ತಪಡಿಸುವ ಎಐ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕೃತಕ ಬುದ್ಧಿಮತ್ತೆ ಎಲ್ಲರಂಗದಲ್ಲೂ ಕರಾರುವಕ್ಕಾಗಿ ತನ್ನ ಚಾಕಚಕ್ಯತೆಯನ್ನು ತೋರಿಸುತ್ತಿರುವುದು ನಮಗೆ ಗೊತ್ತೇ ಇದೆ. ಇದು ಹೀಗೆ ಮುಂದುವರಿದರೆ, ಮನುಷ್ಯನ ಸೂಕ್ಷ್ಮ ಸ್ವ-ಆಲೋಚನೆ, ಭಾವನೆಗಳನ್ನು ತೋರ್ಪಡಿಸುವಿಕೆ ಮುಂತಾದ ಅಂಶಗಳಲ್ಲೂ ಸಾಮರ್ಥ್ಯ ಸಾಧಿಸಿದರೆ ಮುಗಿದೆ ಹೋಯಿತು. ತಾನೇ ಸಾಕಿದ ಗಿಣಿ ತನ್ನದೇ ಮೂಗು ಕಚ್ಚಿದಂತೆ, ಇಲ್ಲವೇ ಪ್ರೀತಿಯಿಂದ ಮಾತನಾಡಿದಂತೆ ಎಂಬ ಮಾತಿಗೆ ಇಂಬು ಕೊಟ್ಟಂತಾಗುತ್ತದೆ.
ಸಂಶೋಧಕರು ಇತ್ತೀಚೆಗೆ ಹೊಸ ಎಐ(ಕೃತಕ ಬುದ್ಧಿಮತ್ತೆ) ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ಕಲಾಕೃತಿಗಳಲ್ಲಿ ಭಾವನೆಗಳನ್ನು ಗುರುತಿಸುವ ಸಾಮರ್ಥ್ಯವನ್ನು ತೋರ್ಪಡಿಸುತ್ತದೆ, ಭಾವನಾತ್ಮಕ ಬುದ್ಧಿವಂತಿಕೆಯೊಂದಿಗೆ ಯಂತ್ರಗಳನ್ನು ರಚಿಸುವತ್ತ ಹೆಜ್ಜೆ ಹಾಕುತ್ತದೆ ಎನ್ನುತ್ತಾರೆ.
ಈಗ ಅಭಿವೃದ್ಧಿಪಡಿಸಿದ ಈ ಹೊಸ ಅಲ್ಗಾರಿದಮ(ಕ್ರಮಾವಳಿ) ಕಲಾಕೃತಿಗಳನ್ನು ವಿಸ್ಮಯ, ವಿನೋದ, ಭಯ ಮತ್ತು ದುಃಖ ಸೇರಿದಂತೆ ಎಂಟು ಭಾವನಾತ್ಮಕ ವರ್ಗಗಳಲ್ಲಿ ಒಂದಾಗಿ ವರ್ಗೀಕರಿಸಬಲ್ಲದು. ಇದು ಒಂದೇ ಚಿತ್ರದೊಳಗೆ ವಿಭಿನ್ನ ಭಾವನೆಗಳನ್ನು ಗುರುತಿಸುವ ಮೂಲಕ ಚಿತ್ರಕಲೆಯ ಒಟ್ಟಾರೆ ಮನಸ್ಥಿತಿಯನ್ನು ಗುರುತಿಸುವುದನ್ನು ಮೀರಿದೆ. ಹೆಚ್ಚುವರಿಯಾಗಿ, ವರ್ಣಚಿತ್ರದ ವಿಷಯವನ್ನು ನಿಖರವಾಗಿ ವಿವರಿಸುವ ಮತ್ತು ಭಾವನಾತ್ಮಕ ಓದುವಿಕೆಯನ್ನು ಸಮರ್ಥಿಸುವ ಲಿಖಿತ ಶೀರ್ಷಿಕೆಗಳನ್ನು ಈ ಎಐ ರಚಿಸುತ್ತದೆ.
ಈ ತಂತ್ರಜ್ಞಾನವು ಪ್ರಸ್ತುತ ತಂತ್ರಜ್ಞಾನಗಳಿಗಿಂತ ಹೆಚ್ಚು ಆಳವಾಗಿ ಭಾವನೆಗಳನ್ನು ನೋಡುವ ಮತ್ತು ಅರ್ಥೈಸುವ ಭವಿಷ್ಯದ ವ್ಯವಸ್ಥೆಗಳಿಗೆ ಕಾರಣವಾಗಬಹುದು ಎಂಬುದು ತಂತ್ರಜ್ಞರ ಅಭಿಪ್ರಾಯ. ಕಲಾವಿದರು ವೀಕ್ಷಕರಲ್ಲಿ ನಿರ್ದಿಷ್ಟ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹೊರಹೊಮ್ಮಿಸುವ ಗುರಿಯನ್ನು ಹೊಂದಿರುವ ಕಾರಣ ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ ಕಲೆಯನ್ನು ಕೇಂದ್ರೀಕರಿಸಿದ್ದಾರೆ.
ಸ್ಟ್ಯಾನ್-ರ್ಡ್ ಇನ್ಸ್ಟಿಟ್ಯೂಟ್ – ಹ್ಯೂಮನ್ ಸೆಂಟರ್ಡ್ ಆರ್ಟಿಫಿಶಿಯಲ್ ಇಂಟೆಲಿಜೆ, – ಮತ್ತು ಸೌದಿ ಅರೇಬಿಯಾ ದಲ್ಲಿ ಸಂಶೋಧಕರು ಈ ಅಧ್ಯಯನವನ್ನು ನಡೆಸಿzರೆ. ಚಿತ್ರಗಳೊಳಗಿನ ವಸ್ತುಗಳನ್ನು ಗುರುತಿಸಲು ಮಾತ್ರವಲ್ಲದೆ ಆ ಚಿತ್ರಗಳು ಜನರಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹೇಗೆ ಉಂಟುಮಾಡುತ್ತವೆ ಎಂಬುದನ್ನು ಅರ್ಥಮಾಡಿ ಕೊಳ್ಳಲು ಕಂಪ್ಯೂಟರ್‌ಗಳಿಗೆ ಬೋಧನೆ ಮಾಡುವ ಪ್ರಕ್ರಿಯೇಯ ಮೇಲೆ ಕೇಂದ್ರೀಕರಿಸಿದೆ.
ಎಐ ಗೆ ತರಬೇತಿ ನೀಡಲು, ಸಂಶೋಧಕರು ಆರ್ಟೆಮಿಸ್ ಎಂಬ ಹೊಸ ಡೇಟಾಸೆಟ್ ಅನ್ನು ರಚಿಸಿದ್ದಾರೆ. ಇದರಲ್ಲಿ ಆನ್ಲೈನ್‌ನಲ್ಲಿ ಕಂಡುಬರುವ 81000 ವರ್ಣಚಿತ್ರಗಳು ಮತ್ತು 6500 ಕ್ಕೂ ಹೆಚ್ಚು ಭಾಗವಹಿಸುವವರಿಂದ 440000 ಭಾವನಾತ್ಮಕ ಪ್ರತಿಕ್ರಿಯೆಗಳು ಸೇರಿವೆ. ಈ ಪ್ರತಿಕ್ರಿಯೆಗಳು ಕಲಾಕೃತಿಗಳನ್ನು ವೀಕ್ಷಕರಿಗೆ ಹೇಗೆ ಅನಿಸುತ್ತದೆ ಎಂಬುದನ್ನು ವಿವರಿಸುತ್ತದೆ ಮತ್ತು ಅವರ ಭಾವನಾತ್ಮಕ ಆಯ್ಕೆಗಳಿಗೆ ವಿವರಣೆಗಳನ್ನು ಒಳಗೊಂಡಿರುತ್ತದೆ.
ಈ ತಂತ್ರಜ್ಞಾನವು ಕಲಾವಿದರಿಗೆ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಸಂಶೋಧಕರ ಅನಿಸಿಕೆ. ಇದು ಕಲಾವಿದನ ಕೃತಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ಅವರ ಸೃಜನಶೀಲ ಪ್ರಕ್ರಿಯೆಯನ್ನು ಪರಿಷ್ಕರಿಸಲು ಸಹಾಯ ಮಾಡುತ್ತದೆ. ಕಲೆಯ ಹೊರತಾಗಿ, ಯೋಜನೆಯು ವಿಶಾಲವಾದ ಪರಿಣಾಮಗಳನ್ನು ಇಟ್ಟುಕೊಂಡಿದೆ, ಯಂತ್ರಗಳು ಭಾವನೆಗಳನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಭಾವನಾತ್ಮಕ ಸೂಕ್ಷ್ಮತೆಯೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ ಮೂಲಕ ಮಾನವ ಮನೋವಿeನ ಮತ್ತು ಕೃತಕ ಬುದ್ಧಿಮತ್ತೆಯ ನಡುವಿನ ಅಂತರವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ.
ಎಐ, ಈ ಡೇಟಾವನ್ನು ನ್ಯೂರಲ್ ಸ್ಪೀಕರ್‌ಗಳಿಗೆ(ನರಭಾಷಿಕರು) ತರಬೇತಿ ನೀಡಲು ಬಳಸುತ್ತದೆ – ದೃಶ್ಯ ಕಲೆಗೆ ಲಿಖಿತ ಪ್ರತಿಕ್ರಿಯೆಗಳನ್ನು ಉತ್ಪಾದಿಸುವ ನರಗಳ ಜಾಲಗಳು ಇಲ್ಲಿ ಚುರುಕಾಗಿ ಕಾರ್ಯನಿರ್ವಹಿಸುತ್ತವೆ. ಈ ನ್ಯೂರಲ್ ಸ್ಪೀಕರುಗಳು ಚಿತ್ರಕಲೆ ಪ್ರಚೋದಿಸುವ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಮತ್ತು ಆ ಭಾವನೆಗಳ ಹಿಂದಿನ ತಾರ್ಕಿಕತೆಯನ್ನು ಸಹಜ ಭಾಷೆಯಲ್ಲಿ ವಿವರಿಸುತ್ತಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಆಡಲು ಸ್ಪರ್ಧಿಗಳ ಹರಸಾಹಸ

ಕನ್ನಡದ ಬಿಗ್​ಬಾಸ್​ ಸೀಸನ್​ 11ರಲ್ಲಿ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಸಖತ್​ ಸದ್ದು ಮಾಡುತ್ತಿದ್ದಾರೆ. ತಮ್ಮ ಹಳ್ಳಿ ಸೊಗಡಿನ ರೀತಿಯಲ್ಲೇ ಹಾಡು ಹಾಡಿ ವೀಕ್ಷಕರಿಗೆ ಮನರಂಜನೆ...

ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಕನ್ಯಾಕುಮಾರಿ ಮತ್ತು ಶ್ರೀಲಂಕಾ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮನ್ನಾರ್ ಗಲ್ಫ್...

ಹಿಂದುಳಿದ ವರ್ಗಗಳ ಮೀಸಲಾತಿಗೆ ಆಗ್ರಹ : ಪಂಚಮಸಾಲಿಗರ ಹೋರಾಟ ತೀವ್ರ!

ಬೆಂಗಳೂರು: ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ವಿರೋಧಿಸಿ ಸುವರ್ಣಸೌಧದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ವಿಪಕ್ಷ ನಾಯಕ ಆರ್, ಅಶೋಕ್ ನೇತೃತ್ವದಲ್ಲಿ...

ಆಸ್ತಿ ತೆರಿಗೆ ಕಟ್ಟಲು ನಿರಾಕರಣೆ : ರಸ್ತೆ ಸರಿಪಡಿಸಿದ ಪಂಚಾಯಿತಿ ಸದಸ್ಯರು

ಬೆಂಗಳೂರು: ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ...