ಹೈದರಾಬಾದ್: ದೇಶದಲ್ಲಿನ ಎಲ್ಲಾ ದೇವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರೀಯ ಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ ಸ್ಥಾಪಿಸಬೇಕಾಗಿದೆ ಎಂದು ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾಗೆ ಚಮ್‌ಕ ಹಿಡಿಸಿದ ಬೂಮ್ರಾ ; 8 ವಿಕೆಟ್ ಢಮಾರ್.. ಹಿಡಿತ ಸಾಧಿಸಿದ ರೋಹಿತ್ ಪಡೆ.!
ತಿರುಪತಿ ತಿರುಮಲ ಲಡ್ಡುಗಳಲ್ಲಿ ಪ್ರಾಣಿಯ ಕೊಬ್ಬು ಬಳಕೆಗೆ ಸಂಬಂಧ ಪಟ್ಟಂತೆ ಇದೇ ಮೊದಲ ಬಾರಿಗೆ ಡಿಸಿಎಂ ಪವನ್ ಕಲ್ಯಾಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿನ ದೇವಾಲಯಗಳ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರ ಮಟ್ಟದಲ್ಲಿ ರಕ್ಷಣಾ ಮಂಡಳಿಯನ್ನು ಸ್ಥಾಪಿಸುವ ಸಮಯ ಬಂದಿದೆ. ದೇಶಾದ್ಯಂತ ಅನ್ವಯ ಆಗುವಂತೆ ಧರ್ಮ ರಕ್ಷಣಾ ಬೋರ್ಡ್ ರಚಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ನೀತಿ ನಿರೂಪಕರು, ನ್ಯಾಯಾಂಗ, ಧಾರ್ಮಿಕ ಮುಖ್ಯಸ್ಥರು, ನಾಗರಿಕರು ಅವರವರ ಕ್ಷೇತ್ರಗಳಲ್ಲಿ ಚರ್ಚೆ ನಡೆಸಬೇಕಿದೆ. ತಿರುಪತಿ ತಿರುಮಲ ಲಡ್ಡುಗಳಲ್ಲಿ ಪ್ರಾಣಿಯ ಕೊಬ್ಬು ಬಳಕೆ ಮಾಡಿರುವ ಬಗ್ಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಇದು ದೇವಾಲಯಗಳ ಅಪವಿತ್ರತೆ ಹಾಗೂ ಇತರ ಧಾರ್ವಿುಕ ಆಚರಣೆಗಳ ಸುತ್ತಲಿನ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : SSLC ಪಾಸ್ ಆಗಿದ್ರೆ ಸರ್ಕಾರಿ ಕೆಲಸ : ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್ ಫಾರ್ಮ್.!
ಸಂಸ್ಥೆಯೊಂದು ಎಕ್ಸ್ ಅಕೌಂಟ್ನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಪವನ್ ಕಲ್ಯಾಣ್ ಅವರು ಎಕ್ಸ್ ಮೂಲಕವೇ ಉತ್ತರ ನೀಡಿದ್ದಾರೆ. ಸನಾತನ ಧರ್ಮಕ್ಕೆ ಯಾವುದೇ ರೂಪದಲ್ಲಿ ಸಮಸ್ಯೆಗಳು ಬಂದರೆ ಅವುಗಳನ್ನು ನಾವೆಲ್ಲ ಒಟ್ಟಾಗಿ ಪರಿಹರಿಸಬೇಕಿದೆ ಎಂದಿದ್ದಾರೆ. ಸದ್ಯ ಡಿಸಿಎಂ ಮಾಡಿರುವ ಎಕ್ಸ್ ಪೋಸ್ಟ್ ವೈರಲ್ ಆಗುತ್ತಿದ್ದು ಸಾಕಷ್ಟು ಜನರು ಕಮೆಂಟ್ಗಳನ್ನು ಮಾಡುತ್ತಿದ್ದಾರೆ.