spot_img
spot_img

ಎನ್​ಡಿಎ, ಎನ್​ಎ ಪರೀಕ್ಷೆಗೆ ಅರ್ಜಿ ಆಹ್ವಾನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ಭಾರತದ ಮೂರು ರಕ್ಷಣಾ ವಿಭಾಗಗಳನ್ನು ಸೇರಲಿಚ್ಛಿಸುವ ಅಭ್ಯರ್ಥಿಗಳು ಈ ಪರೀಕ್ಷೆ ತೆಗೆದುಕೊಳ್ಳಬಹುದು. ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy – NDA) ಮತ್ತು ನೌಕಾ ಅಕಾಡೆಮಿ (Naval Academy-NA) ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ, ಪದವಿ ಅರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಒಟ್ಟು 406 ಹುದ್ದೆಗಳು ಇವೆ. ಭೂ ಸೇನೆ- 208 ಹುದ್ದೆಗಳಲ್ಲಿ 10 ಮಹಿಳಾ ಅಭ್ಯರ್ಥಿಗಳಿಗೆ. ನೌಕಾ ಸೇನೆ- 42 ಹುದ್ದೆಗಳಲ್ಲಿ 6 ಮಹಿಳಾ ಅಭ್ಯರ್ಥಿಗಳಿಗೆ. ವಾಯು ಸೇನೆ- ಫ್ಲೈಯಿಂಗ್​ನಲ್ಲಿ 92 ಹುದ್ದೆಗಳಲ್ಲಿ 2 ಮಹಿಳೆಯರಿಗೆ, ಗ್ರೌಂಡ್​ ಡ್ಯೂಟಿ (ತಾಂತ್ರಿಕ): 18 ಹುದ್ದೆಗಳಿಗೆ 2 ಮಹಿಳಾ ಅಭ್ಯರ್ಥಿಗಳಿಗೆ, ಗ್ರೌಂಡ್​ ಡ್ಯೂಟಿ (ತಾಂತ್ರಿಕೇತರ) 10 ಹುದ್ದೆಗಳಲ್ಲಿ 2 ಮಹಿಳೆಯರಿಗೆ. ನೌಕಾ ಅಕಾಡೆಮಿ- 36 ಹುದ್ದೆಗಳಲ್ಲಿ 5 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಹೊಂದಿರುತ್ತದೆ.

ಪಿಯುಸಿ ಪೂರ್ಣಗೊಳಿಸಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತವನ್ನು ಅಭ್ಯಾಸ ಮಾಡಿರಬೇಕು. ಅಭ್ಯರ್ಥಿಗಳು ಅವಿವಾಹಿತರಾಗಿದ್ದು, 2006ರ ಜುಲೈ 2ರಿಂದ 2009 ಜುಲೈ 1ರೊಳಗೆ ಜನಿಸಿರಬೇಕು ಎಂದು ಹೇಳಿದ್ದಾರೆ.

ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಎನ್​ಡಿಎ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗೆ ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರೆ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಭರಿಸಬೇಕು.

ಲಿಖಿತ, ಬೌದ್ಧಿಕ, ವ್ಯಕ್ತಿತ್ವ, ಪೈಲಟ್​ ಆಪ್ಟಿಟ್ಯೂಡ್​​ ಪರೀಕ್ಷೆ ಜೊತೆಗೆ ಸಂದರ್ಶನ. ಡಿಸೆಂಬರ್​ 11ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಡಿ.31 ಕಡೇಯ ದಿನ. ಅರ್ಜಿ ಪರಿಷ್ಕರಣೆಗೆ ಜನವರಿ 1ರಿಂದ ಜನವರಿ 7ರವರೆಗೆ ಅವಕಾಶವಿದೆ. ಏಪ್ರಿಲ್​ 13ರಂದು ಪರೀಕ್ಷೆ ನಡೆಯಲಿದೆ.

ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ಮತ್ತು ಧಾರವಾಡದಲ್ಲಿ ಪರೀಕ್ಷಾ ಕೇಂದ್ರಗಳಿವೆ. ಈ ಕುರಿತು ಹೆಚ್ಚಿನ ಮಾಹಿತಿಗೆ upsc.gov.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

C T RAVI ARREST ISSUE – ಸಿ.ಟಿ ರವಿ ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?

Hubli News: "ತರಾತುರಿಯಲ್ಲಿ ಸಿ. ಟಿ. ರವಿ‌ ವಿರುದ್ಧ ಎಫ್​ಐಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್​ಗೆ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ" ಎಂದು...

PM MODI TO ATTEND CHRISTMAS – ಪ್ರಧಾನಿ ಮೋದಿ ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿ

New Delhi News: ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್​ಮಸ್ ಆಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ...

BANDIPUR FOREST – ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ

BANDIPUR NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (BTR) ಮೂಲಕ ಹಾದು ಹೋಗುವ 24.7 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳು...

JAYADEVA HOSPITAL – ನೂತನ ಜಯದೇವ ಆಸ್ಪತ್ರೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Kalaburagi News: ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವೀಕ್ಷಿಸಿದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ...