spot_img
spot_img

ATM MONEY FRAUD CASE : ATMನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ವಂಚಿಸುತ್ತಿದ್ದವ ಅರೆಸ್ಟ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Haveri News:

ATM ಕೇಂದ್ರದಲ್ಲಿ ಮೋಸದಿಂದ ಎಟಿಎಂ ಕಾರ್ಡ್ ಬದಲಿಸಿ‌, ಹಣ ಲಪಟಾಯಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ATM ಕೇಂದ್ರಕ್ಕೆ ಹಣ ಡ್ರಾ ಮಾಡಿಕೊಳ್ಳಲು ಬರುತ್ತಿದ್ದ ಅಮಾಯಕ ಜನರಿಗೆ ಮೋಸ ಮಾಡಿ, ಎಟಿಎಂ ಕಾರ್ಡ್ ಬದಲಿಸಿ‌ಕೊಂಡು ಹಣ ಲಪಟಾಯಿಸುತ್ತಿದ್ದ ಆರೋಪಿಯನ್ನು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಗ್ರಾಮದ ನಿವಾಸಿ ಕಿರಣಕುಮಾರ ಕಾಳೇಗೌಡ (32) ಎಂದು ಗುರುತಿಸಲಾಗಿದೆ. ಈತನಿಂದ 47 ಸಾವಿರ ರೂ. ನಗದು, 28 ಸಾವಿರ ಮೌಲ್ಯದ ಮೊಬೈಲ್, ವಿವಿಧ ಬ್ಯಾಂಕ್​ಗಳ 60ಕ್ಕೂ ಹೆಚ್ಚು ಎಟಿಎಂ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.

Fraud by giving substitute ATM card: ಬಳಿಕ ಹಣ ಬರಲಿಲ್ಲ, ಸಮಸ್ಯೆ ಇದೆ ಎಂದು ಅವರಿಗೆ ತನ್ನ ಬಳಿಯಿರುವ ಬದಲಿ ATM ಕಾರ್ಡ್​​ ​ಕೊಡುತ್ತಿದ್ದ. ಈ ವೇಳೆ ಪಾಸ್​ವರ್ಡ್​ ತಿಳಿದುಕೊಂಡಿರುತ್ತಿದ್ದ ಆರೋಪಿಯು ಬಳಿಕ ಬೇರೆ ATMಎಟಿಎಂಗಳಿಗೆ ತೆರಳಿ ಹಣ ಡ್ರಾ ಮಾಡಿಕೊಂಡು ಪರಾರಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಕಿರಣಕುಮಾರ ಹಣ ಡ್ರಾ ಮಾಡಿಕೊಳ್ಳುವ ನೆಪದಲ್ಲಿ ATM ಹತ್ತಿರವೇ ನಿಲ್ಲುತ್ತಿದ್ದ. ATMಗೆ ಬರುವ ಅನಕ್ಷರಸ್ಥರು, ಅಮಾಯಕರು ಸಹಾಯ ಕೇಳಿದಾಗ ಅವರ ATM ತೆಗೆದುಕೊಂಡು ಪಾಸ್​​ವರ್ಡ್ ಪಡೆಯುತ್ತಿದ್ದ. ಕಿರಣಕುಮಾರ್ ಅಂತರ್​​ಜಿಲ್ಲೆಯಲ್ಲದೆ, ಅಂತಾರಾಜ್ಯ ವಂಚಕನಾಗಿದ್ದಾನೆ ಎಂಬ ಅಂಶ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯು 2024 ಆ.6ರಂದು ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ATM ಕಾರ್ಡ್​​ ಬದಲಾವಣೆ ಮಾಡಿ 75 ಸಾವಿರ ಕಳ್ಳತನ ಮಾಡಿದ್ದ. ಬಂಕಾಪುರ ಪಿಎಸ್ಐ ನಿಂಗರಾಜ್ ನೇತೃತ್ವದಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿದೆ.

A separate case: ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, 2 ಪ್ರಕರಣಗಳಲ್ಲಿ ಬಂಧಿತ ಆರೋಪಿಗಳಿಂದ ಒಟ್ಟು 42 ಲಕ್ಷ ರೂ. ಮಾಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಮಾಡಿದ ಖದೀಮರನ್ನು ಸೆರೆ ಹಿಡಿಯುವಲ್ಲಿ ಹಲಗೂರು ಹಾಗೂ ಕೆ.ಎಂ.ದೊಡ್ಡಿ ಠಾಣೆಗಳ ಪೊಲೀಸರು ಯಶಸ್ವಿಯಾಗಿದ್ದಾರೆ.

Thief arrested by Halaguru police: ಈ ಸಂಬಂಧ ಆರೋಪಿ ಮೈಸೂರಿನ ವಿದ್ಯಾರಣ್ಯಪುರದ ಅನಂತ ಆಲಿಯಾಸ್ ಗುರುವ ಆಲಿಯಾಸ್ ಮೆಡ್ಡ ಎಂಬಾತನನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್ 22, 2024ರಲ್ಲಿ ಮಳವಳ್ಳಿ ತಾಲೂಕು ಅಗಸನಪುರ ಗ್ರಾಮದ ಚಿಕ್ಕಬಸವಣ್ಣ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ ಒಟ್ಟು 45 ಗ್ರಾಂ ಚಿನ್ನದ ಆಭರಣಗ ಹಾಗೂ 5 ಕೆ.ಜಿ. 403 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 35,000 ನಗದು ಕಳವು ಮಾಡಲಾಗಿತ್ತು. ಈತ ತನ್ನ ಸಹಚರನೊಂದಿಗೆ ಸೇರಿ 5 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಹಲಗೂರು ಪೊಲೀಸ್ ಠಾಣೆಯಲ್ಲಿ 3, ಬೆಳಕವಾಡಿ ಠಾಣೆಯಲ್ಲಿ 1, ಕಿರುಗಾವಲು ಠಾಣೆಯಲ್ಲಿ 1 ಪ್ರಕರಣವನ್ನು ಭೇದಿಸಲಾಗಿದೆ. ಆರೋಪಿಯಿಂದ ಒಟ್ಟು 301 ಗ್ರಾಂ. ತೂಕದ ಚಿನ್ನದ ಒಡವೆಗಳು (ಒಟ್ಟು ಮೌಲ್ಯ ₹22,37,634) ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬೈಕ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

  1. M. Doddy police arrested the thieves: ಕಳೆದ ಡಿ.31ರಂದು ಮದ್ದೂರು ತಾಲೂಕಿನ ಕುರಿಕೆಂಪನದೊಡ್ಡಿ ಗ್ರಾಮದ ಸವಿತಾ ಎಂಬವರು ತಮ್ಮ ಟೀ ಅಂಗಡಿಯಲ್ಲಿದ್ದಾಗ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು, ಟೀ ಕೇಳುವ ನೆಪದಲ್ಲಿ ಅವರ ಕತ್ತಿನಲ್ಲಿದ್ದ 26 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

  2. ಈ ಬಗ್ಗೆ ಕೆ.ಎಂ. ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಆರೋಪಿಗಳು ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯ ಪ್ರಕರಣವು ಸೇರಿದಂತೆ ಮಂಡ್ಯ ಜಿಲ್ಲೆಯ ನಾಗಮಂಗಲ ಗ್ರಾಮಾಂತರದಲ್ಲಿ 02, ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ 02. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ 01 ಹಾಗೂ ಮದ್ದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣದಲ್ಲಿ ಭಾಗಿಯಾಗಿದ್ದರು.

  3. ತನಿಖೆ ಕೈಗೊಂಡ ಪೊಲೀಸರು, ಬೆಂಗಳೂರಿನ ಬಾರ್​ವೊಂದರಲ್ಲಿ ಸಪ್ಲೆಯರ್ ಕೆಲಸ ಮಾಡುತ್ತಿದ್ದ ಮಂಡ್ಯ ತಾಲೂಕಿನ ಮುತ್ತೇಗೆರೆ ಗ್ರಾಮದವರಾದ ಸುದೀಪ್ ಹೆಚ್.ಪಿ., ಆಟೋ ಡ್ರೈವರ್ ಆಗಿದ್ದ ಹೆಚ್.ಆ‌ರ್.ಚೇತನ, ವ್ಯವಸಾಯ ಮಾಡಿಕೊಂಡಿದ್ದ ದರ್ಶನ್ ಹೆಚ್.ಎಸ್., ಕಿರಣ್ ಕುಮಾರ್ ಹೆಚ್.ಸಿ., ಹಾಗೂ ಎಂ.ಆರ್.ಚೇತನ್ ಎಂಬವರನ್ನು ಬಂಧಿಸಿದ್ದಾರೆ.

  4. ಆರೋಪಿಗಳಿಂದ ಒಟ್ಟು ₹22,12 ಲಕ್ಷ ಮೌಲ್ಯದ 278 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳು, 20 ಗ್ರಾಂ ತೂಕದ ಬೆಳ್ಳಿಯ ಕರಡಿಗೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2 ಮೋಟಾ‌ರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲಗೂರು ಹಾಗೂ ಕೆ.ಎಂ. ದೊಡ್ಡಿ ಪೊಲೀಸ್ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಯವರ ಯಶಸ್ವಿ ಕಾರ್ಯಾಚರಣೆಗೆ ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿರಿ : ROAD ACCIDENT : ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವು

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...