spot_img
spot_img

ಬೇಸರಗೊಂಡಿದ್ದ ಬಾಂಗ್ಲಾ ಆಟಗಾರರು ; ಪಂತ್ ಹಾಗೂ ಗಿಲ್ ಅವರ ಬ್ಯಾಟಿಂಗ್ ಇನ್ನಷ್ಟು ಪ್ರಬಲವಾಗತ್ತಿತ್ತು ̤!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದೆ.​ ಮೊದಲ ಟೆಸ್ಟ್​ನ  2ನೇ ಇನ್ನಿಂಗ್ಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರಿಷಬ್ ಪಂತ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ರಿಷಬ್ ಪಂತ್ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲಿ ಕುತೂಹಲಕಾರಿ ಸಂಗತಿಯೊಂದು ನಡೆದಿದ್ದು ಬಾಂಗ್ಲಾ ಪ್ಲೇಯರ್ಸ್​ ಅನ್ನು ಫ್ಲೀಲ್ಡಿಂಗ್ ನಿಲ್ಲಿಸಿದ್ದಾರೆ.

ಇದನ್ನೂ ಓದಿ : ವಂಚನೆ ಮಾಡಿದ ಬ್ಯಾಂಕ್‌ ಸಿಬ್ಬಂದಿಯೂ ಸೇರಿ 14 ಜನರು ; 74 ಕೋಟಿ ರೂಪಾಯಿಗಳು.!

ಮೈದಾನದಲ್ಲಿ ಬಾಂಗ್ಲಾ ಬೌಲರ್​ಗಳ ಎಸೆತಗಳನ್ನು​ ಪಂತ್ ಹಾಗೂ ಗಿಲ್​ ಮನ ಬಂದಂತೆ ಚಚ್ಚುತ್ತಿದ್ದರು. ಇವರನ್ನು ಔಟ್ ಮಾಡುವುದು ಹೇಗೆ ಎಂದು ಬಾಂಗ್ಲಾ ಕ್ಯಾಪ್ಟನ್​ಗೆ ತಲೆ ಕೆಟ್ಟು ಹೋಗಿತ್ತು. ಮೈದಾನದಲ್ಲಿ ತಮ್ಮ ಪ್ಲೇಯರ್ಸ್​ ಅನ್ನು ಎಲ್ಲಿ ನಿಲ್ಲಿಸಿದರು ಪಂತ್ ಹಾಗೂ ಗಿಲ್ ಅವರ ಬ್ಯಾಟಿಂಗ್ ಇನ್ನಷ್ಟು ಪ್ರಬಲವಾಗತ್ತಿತ್ತು. ಇದರಿಂದ ಬೇಸರಗೊಂಡಿದ್ದ ಬಾಂಗ್ಲಾ ಆಟಗಾರರು ನಿಯಮದಂತೆ ಫೀಲ್ಡಿಂಗ್​ ಸರಿಯಾಗಿ ನಿಂತಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ : ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ : BJP ಶಾಸಕ.!

ಈ ವೇಳೆ ಪಂತ್ ಸ್ಟ್ರೈಕ್ ಬಂದಾಗ ಲೆಗ್​​ಸೈಡ್​ ಫ್ರಂಟ್​ನಲ್ಲಿ ಫೀಲ್ಡರ್ ಯಾರು ಇರಲಿಲ್ಲ. ಹೀಗಾಗಿ ಆಫ್​ಸೈಡ್​ನಲ್ಲಿದ್ದ ಫೀಲ್ಡರ್​ನನ್ನು ರಿಷಬ್ ಪಂತ್ ಕರೆದು, ಒಬ್ಬ ಫಿಲ್ಡರ್​ ಇಲ್ಲಿ ಬಂದು ನಿಲ್ಲಬೇಕು ಪಂತ್ ಹೇಳಿದ ಸ್ಥಳಕ್ಕೆ ಓಡೋಡಿ ಬಂದು ಫೀಲ್ಡರ್ ನಿಲ್ಲುತ್ತಾನೆ. ಮತ್ತೆ ಪಂತ್, ಗಿಲ್​ ಬಿರುಸಿನ ಬ್ಯಾಟಿಂಗ್ ಮುಂದುವರೆಯುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಅಭಿಮಾನಿಗಳು ಪಂತ್​​ರನ್ನ ಹಾಡಿ ಹೊಗಳುತ್ತಿದ್ದಾರೆ.

ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ 2ನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್​ಗೆ 287 ರನ್​ಗಳನ್ನ ಗಳಿಸಿತ್ತು. ಆಗ ರೋಹಿತ್ ಶರ್ಮಾ ಡಿಕ್ಲೈರ್ ಮಾಡಿಕೊಂಡರು. ಸದ್ಯ ಭಾರತ 514 ರನ್​ಗಳ ಮುನ್ನಡೆ ಸಾಧಿಸಿದ್ದು ಬಾಂಗ್ಲಾ ಗೆಲ್ಲಬೇಕು ಎಂದರೆ 515 ರನ್​ಗಳನ್ನು ಗಳಿಸಬೇಕಿದೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

MODI NEWS : 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಕುವೈತ್’ಗೆ

NEW DELHI NEWS: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಗಲ್ಫ್‌ ರಾಷ್ಟ್ರ ಕುವೈತ್‌ಗೆ ಪ್ರವಾಸ ಕೈಗೊಂಡಿದ್ದು, ಇದು 43 ವರ್ಷಗಳ...

BBMP Notification : ಮಹದೇವಪುರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಗುರುತಿಸಿ

Bangalore News: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂದರ್ಭದಲ್ಲಿ, ನಿವಾಸಿಯೊಬ್ಬರು ‘ಸಾರ್ವಜನಿಕ ಶೌಚಾಲಯ’ ನಿರ್ಮಿಸಲು...

GOLDEN CHARIOT TRAIN RESTARTED – 2018ರಲ್ಲಿ ಸ್ಥಗಿತಗೊಂಡಿದ್ದ ಐಷಾರಾಮಿ ರೈಲು ಮತ್ತೆ ಆರಂಭ

Bangalore News: 2018 ರಲ್ಲಿ ಕಾರ್ಯಾಚರಣೆ ಸ್ಥಗಿತವಾಗಿದ್ದ ರೈಲಿಗೆ ಮತ್ತೆ ಯಶವಂತಪುರ ನಿಲ್ದಾಣದಲ್ಲಿ ರಾಜ್ಯದ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹಸಿರು ನಿಶಾನೆ ತೋರುವ ಮೂಲಕ...

SRINAGAR FREEZES AT MINUS – ಕಾಶ್ಮೀರದಲ್ಲಿ ಹೆಪ್ಪುಗಟ್ಟುತ್ತಿರುವ ನೀರು

Srinagar News: ಕಾಶ್ಮೀರದಲ್ಲಿ ಶುಕ್ರವಾರ ಮೈನಸ್​ 8.5 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗುತ್ತಿದ್ದು, 1974ರ ಬಳಿಕ ಅತ್ಯಂತ ಚಳಿಯ ರಾತ್ರಿ ಇದಾಗಿದೆ. ಕಣಿವೆ ರಾಜ್ಯದಲ್ಲಿ ಮೈನಸ್​...