spot_img
spot_img

ಬೇಸರಗೊಂಡಿದ್ದ ಬಾಂಗ್ಲಾ ಆಟಗಾರರು ; ಪಂತ್ ಹಾಗೂ ಗಿಲ್ ಅವರ ಬ್ಯಾಟಿಂಗ್ ಇನ್ನಷ್ಟು ಪ್ರಬಲವಾಗತ್ತಿತ್ತು ̤!

spot_img
spot_img

Share post:

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದೆ.​ ಮೊದಲ ಟೆಸ್ಟ್​ನ  2ನೇ ಇನ್ನಿಂಗ್ಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರಿಷಬ್ ಪಂತ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ರಿಷಬ್ ಪಂತ್ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲಿ ಕುತೂಹಲಕಾರಿ ಸಂಗತಿಯೊಂದು ನಡೆದಿದ್ದು ಬಾಂಗ್ಲಾ ಪ್ಲೇಯರ್ಸ್​ ಅನ್ನು ಫ್ಲೀಲ್ಡಿಂಗ್ ನಿಲ್ಲಿಸಿದ್ದಾರೆ.

ಇದನ್ನೂ ಓದಿ : ವಂಚನೆ ಮಾಡಿದ ಬ್ಯಾಂಕ್‌ ಸಿಬ್ಬಂದಿಯೂ ಸೇರಿ 14 ಜನರು ; 74 ಕೋಟಿ ರೂಪಾಯಿಗಳು.!

ಮೈದಾನದಲ್ಲಿ ಬಾಂಗ್ಲಾ ಬೌಲರ್​ಗಳ ಎಸೆತಗಳನ್ನು​ ಪಂತ್ ಹಾಗೂ ಗಿಲ್​ ಮನ ಬಂದಂತೆ ಚಚ್ಚುತ್ತಿದ್ದರು. ಇವರನ್ನು ಔಟ್ ಮಾಡುವುದು ಹೇಗೆ ಎಂದು ಬಾಂಗ್ಲಾ ಕ್ಯಾಪ್ಟನ್​ಗೆ ತಲೆ ಕೆಟ್ಟು ಹೋಗಿತ್ತು. ಮೈದಾನದಲ್ಲಿ ತಮ್ಮ ಪ್ಲೇಯರ್ಸ್​ ಅನ್ನು ಎಲ್ಲಿ ನಿಲ್ಲಿಸಿದರು ಪಂತ್ ಹಾಗೂ ಗಿಲ್ ಅವರ ಬ್ಯಾಟಿಂಗ್ ಇನ್ನಷ್ಟು ಪ್ರಬಲವಾಗತ್ತಿತ್ತು. ಇದರಿಂದ ಬೇಸರಗೊಂಡಿದ್ದ ಬಾಂಗ್ಲಾ ಆಟಗಾರರು ನಿಯಮದಂತೆ ಫೀಲ್ಡಿಂಗ್​ ಸರಿಯಾಗಿ ನಿಂತಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ : ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ : BJP ಶಾಸಕ.!

ಈ ವೇಳೆ ಪಂತ್ ಸ್ಟ್ರೈಕ್ ಬಂದಾಗ ಲೆಗ್​​ಸೈಡ್​ ಫ್ರಂಟ್​ನಲ್ಲಿ ಫೀಲ್ಡರ್ ಯಾರು ಇರಲಿಲ್ಲ. ಹೀಗಾಗಿ ಆಫ್​ಸೈಡ್​ನಲ್ಲಿದ್ದ ಫೀಲ್ಡರ್​ನನ್ನು ರಿಷಬ್ ಪಂತ್ ಕರೆದು, ಒಬ್ಬ ಫಿಲ್ಡರ್​ ಇಲ್ಲಿ ಬಂದು ನಿಲ್ಲಬೇಕು ಪಂತ್ ಹೇಳಿದ ಸ್ಥಳಕ್ಕೆ ಓಡೋಡಿ ಬಂದು ಫೀಲ್ಡರ್ ನಿಲ್ಲುತ್ತಾನೆ. ಮತ್ತೆ ಪಂತ್, ಗಿಲ್​ ಬಿರುಸಿನ ಬ್ಯಾಟಿಂಗ್ ಮುಂದುವರೆಯುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಅಭಿಮಾನಿಗಳು ಪಂತ್​​ರನ್ನ ಹಾಡಿ ಹೊಗಳುತ್ತಿದ್ದಾರೆ.

ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ 2ನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್​ಗೆ 287 ರನ್​ಗಳನ್ನ ಗಳಿಸಿತ್ತು. ಆಗ ರೋಹಿತ್ ಶರ್ಮಾ ಡಿಕ್ಲೈರ್ ಮಾಡಿಕೊಂಡರು. ಸದ್ಯ ಭಾರತ 514 ರನ್​ಗಳ ಮುನ್ನಡೆ ಸಾಧಿಸಿದ್ದು ಬಾಂಗ್ಲಾ ಗೆಲ್ಲಬೇಕು ಎಂದರೆ 515 ರನ್​ಗಳನ್ನು ಗಳಿಸಬೇಕಿದೆ.

 

spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...