ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಜೆ ಎ ಪದವಿಪೂರ್ವ ಕಾಲೇಜ್ ದಿನಾಂಕ 18/9/2024 ರಂದು ಎಸ್ .ಡಿ.ವ್ಹಿ.ಎಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಂಕೇಶ್ವರದಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಬಾಲಕಿಯರ ಪುಟ್ಬಾಲ್ ಪಂದ್ಯಾವಳಿಯಲ್ಲಿ ಜೆ.ಎ.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯರ ಹೆಸರು,ಕುಮಾರಿ: ಲಕ್ಷ್ಮೀ ಗುರವ, ಉಜ್ವಲಾ ಯಾದವ, ಸಂಜನಾ ಜಾಧವ್, ರೇಣುಕಾ ಅಪ್ಪಾಜಿ,ಗಾಯತ್ರಿ ಚೌಗಲಾ ಈ ವಿದ್ಯಾರ್ಥಿನಿಯರು “ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ” ಇವರಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ರಾಮ ಕುಲಕರ್ಣಿ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಚಾರ್ಯರರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಕಾಲೇಜಿನ ಗೌರವ ಹಾಗೂ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ ವಿದ್ಯಾರ್ಥಿನಿಯರಿಗೆ ಹೆಮ್ಮೆಯ ವಿಷಯವಾಗಿದೆ ಈ ವಿದ್ಯಾರ್ಥಿಗಳಿಗೆ ಶಾಲೆಯ ಗುರುಹಿರಿಯರು ಹಾಗೂ ಅಧ್ಯಕ್ಷರು ಎಲ್ಲರೂ ಸೇರಿ ಅಭಿನಂದಿಸಿದ್ದಾರೆ .
ಎಸ್ .ಡಿ.ವ್ಹಿ.ಎಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಂಕೇಶ್ವರದಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಬಾಲಕಿಯರ ಪುಟ್ಬಾಲ್ ಪಂದ್ಯಾವಳಿಯಲ್ಲಿ ಜೆ.ಎ.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ .
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಜೆ ಎ ಪದವಿಪೂರ್ವ ಕಾಲೇಜ್ ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ) ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಕರಾಟೆ ಆಟದಲ್ಲಿ ಜೆ.ಎ.ಪದವಿ ಪೂರ್ವ ಕಾಲೇಜು ಅಥಣಿಯ ವಿದ್ಯಾರ್ಥಿನಿಯರಾದ ಕುಮಾರಿ: ರುತಿಕಾ ಗಡದೆ ಮತ್ತು ಕುಮಾರಿ: ಸಾಕ್ಷಿ ಮೋರೆ ಇವರು ಭಾಗವಹಿಸಿ ಇಬ್ಬರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ರಾಮ ಕುಲಕರ್ಣಿ ಮತ್ತು ಆಡಳಿತ ಮಂಡಳಿಯ ಸದಸ್ಯರು ಕಾಲೇಜು ಪ್ರಾಚಾರ್ಯರರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳು ಕೋರಿರುತ್ತಾರೆ.