spot_img
spot_img

ಬಾಂಗ್ಲಾಗೆ ಶಾಕ್‌ ಕೊಟ್ಟ ಆರ್ ಅಶ್ವಿನ್ ಹಾಗಲ್ಲ ; ಇತಿಹಾಸ ನೆನಪಿಸಿದ ಸ್ಟಾರ್ ಆಲ್​​ರೌಂಡರ್..!​ ಏನದು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಟಫ್​ ಟೈಮ್​ನಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳೋರೆ ಹೆಚ್ಚು. ಆದ್ರೆ ಆರ್. ಅಶ್ವಿನ್ ಹಾಗಲ್ಲ. ಸಂಕಷ್ಟದ ಟೈಮ್​​​ನಲ್ಲಿ ಯಾರು ಆಡ್ತಾರೋ, ಬಿಡ್ತಾರೋ ಗೊತ್ತಿಲ್ಲ. ಆದ್ರೆ ಸ್ಟಾರ್ ಆಲ್​ರೌಂಡರ್ ಮಾತ್ರ ಹೆಬ್ಬಂಡೆಯಾಗಿ ನಿಲ್ಲುತ್ತಾರೆ.

ಟೀಮ್ ಇಂಡಿಯಾದ ‘ಆಪ್ತರಕ್ಷಕ’ ಅಶ್ವಿನ್​​​..!

ಆರ್​ ಅಶ್ವಿನ್​ ಯಾರು, ಅವರ ಕೆಪಾಸಿಟಿ ಏನು, ಸಾಧನೆ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ವಿಶ್ವದ ದಿ ಬೆಸ್ಟ್​​ ಆಲ್​ರೌಂಡರ್ ಅನ್ನಿಸಿಕೊಂಡ ಅಶ್ವಿನ್​​​​​ರಂತ ಆಟಗಾರ ಟೀಮ್ ಇಂಡಿಯಾಗೆ ಸಿಗೋದು ನೂರಕ್ಕೆ ಒಬ್ಬ. ಮತ್ತೊಮ್ಮೆ ತಾನೇಕೆ ಸ್ಟಾರ್ ಆಲ್​ರೌಂಡರ್ ಅನ್ನೋದನ್ನ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಶತಕ ಸಿಡಿಸಿದ ಅಶ್ವಿನ್​ರ​ ಕೆಚ್ಚದೆಯ ಹೋರಾಟಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ.

ಆರ್​​​​. ಅಶ್ವಿನ್ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆ

2021, ಚೆಪಾಕ್​ ಮೈದಾನದಲ್ಲಿ ನಡೆದ ಇಂಡಿಯಾ-ಇಂಗ್ಲೆಂಡ್​​​​ ಟೆಸ್ಟ್​​​​ ಅನ್ನ ಒಬ್ಬರು ಭಾರತ​ ಕ್ರಿಕೆಟ್ ಪ್ರೇಮಿ ಮರೆಯಲು ಸಾಧ್ಯವಿಲ್ಲ. ಎಸ್ಪೆಷಲಿ ಆರ್​​​ ಅಶ್ವಿನ್​​​​ ಬ್ಯಾಟ್​ನಿಂದ ಮೂಡಿ ಬಂದ ಆ ಶತಕ ಇದೆಯಲ್ಲ. ಅದಂತೂ ಇನ್ನೂ ಕಣ್ಣಂಚಿನಲ್ಲಿದೆ. ಇಂಡಿಯಾ ಟೀಮ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 106 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂಗ್ಲೆಂಡ್, ಭಾರತವನ್ನ ಬೇಗನೆ ಕಟ್ಟಿ ಹಾಕಿ ಸಲುವಾಗಿ ಪಂದ್ಯ ಗೆಲ್ಲುವ ಲೆಕ್ಕಚಾರದಲ್ಲಿತ್ತು. ಆದರೆ ಆ ಕನಸಿಗೆ ಕೊಳ್ಳಿ ಇಟ್ಟಿದ್ದು ಇದೇ ಅಶ್ವಿನ್​​​.

7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಶ್ವಿನ್​​​​ ಎಂಟೆದೆ ಬಂಟನಂತೆ ಹೋರಾಡಿದ್ರು. ಆಂಗ್ಲರ ಬಲಿಷ್ಠ ಬೌಲಿಂಗ್ ಪಡೆಯನ್ನ ಛಿದ್ರಗೊಳಿಸಿದ್ರು. ಒತ್ತಡವನ್ನ ಲೆಕ್ಕಿಸದೇ ಬ್ಯಾಟ್ ಬೀಸಿದ ಅಶ್ವಿನ್​​​ ಭರ್ಜರಿ ಸೆಂಚುರಿ ಹೊಡೆದು, ಭಾರತ ತಂಡ ಸ್ಫರ್ಧಾತ್ಮಕ ಮೊತ್ತ ಕಲೆಹಾಕಲು ಕಾರಣರಾಗಿದ್ರು. ಅಶ್ವಿನ್​ ಅಮೋಘ ಶತಕದ ನೆರವಿನಿಂದ ಭಾರತ ತಂಡ ಈ ಪಂದ್ಯವನ್ನ 317 ರನ್​ಗಳಿಂದ ಗೆದ್ದು ಬೀಗ್ತು.

 

2024, ಚೆಪಾಕ್ ಮೈದಾನ.. ಭಾರತ 166ಕ್ಕೆ 6 ವಿಕೆಟ್​​..!

3 ವರ್ಷಗಳ ನಂತ್ರ ಅಶ್ವಿನ್​​​​​​​​ ಮತ್ತೆ ಭರ್ಜರಿ ಶತಕ ಸಿಡಿಸಿ ಭಾರತ ತಂಡವನ್ನ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಇಲ್ಲಿ ಎದುರಾಳಿ ಮಾತ್ರ ಬೇರೆ. ಆದ್ರೆ ಮೈದಾನ ಸೇಮ್​​​. ಸಂದರ್ಭವು ಸೇಮ್​​. 166ಕ್ಕೆ ಭಾರತ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. ಆಗ ತಂಡಕ್ಕೆ ಆಸರೆಯಾಗಿದ್ದು ನಿಂತಿದ್ದೆ ಮತ್ತದೇ ಅಶ್ವಿನ್​​. ಕಠಿಣ ಸಂದರ್ಭದಲ್ಲಿ ವೀರ ಸೇನಾನಿಯಂತೆ ಹೋರಾಡಿದ ಅಶ್ವಿನ್​ ಶತಕ ಬಾರಿಸಿ ತಂಡದ ಸುಸ್ಥಿತಿಗೆ ಕಾರಣರಾಗಿದ್ದಾರೆ.

2024.. ಬಾಂಗ್ಲಾ ಎದುರಿನ 100

ಈ ಎರಡು ದಿಟ್ಟ ಇನ್ನಿಂಗ್ಸ್​ನಿಂದ ಒಂದಂಥೂ ಅರ್ಥ ಆಗುತ್ತೆ. ಅದೇನಂದ್ರೆ ತಂಡಕ್ಕೆ ಸಂಕಷ್ಟ ಅಂತ ಬಂದ್ರೆ ಅಶ್ವಿನ್​​ ರಕ್ಷಕನಾಗ್ತಾರೆ. ಡೋಂಟ್​​ ವರಿ ನಾನಿದ್ದೇನೆ ಅನ್ನೋ ಆಶಾಕಿರಣ ಅವರು. ಮುಂದೆಯೂ ಸೇವಿಯರ್​ ಅಶ್ವಿನ್ ಬ್ಯಾಟ್​​ನಿಂದ ಇಂತಹ ಇನ್ನಷ್ಟು ದಿಟ್ಟ ಇನ್ನಿಂಗ್ಸ್​ಗಳು ಮೂಡಿ ಬರಲಿ.

 

WhatsApp Group Join Now
Telegram Group Join Now
Instagram Account Follow Now
spot_img

Related articles

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...

ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾಗಿದ್ದಾಳೆ.! ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!

ಬೀದರ್, ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಳ್ಳಿಯೊಂದರಲ್ಲಿ 9ನೇ ತರಗತಿ ಓದುತ್ತಿರುವ 14 ವರ್ಷದ ಈ ಬಾಲಕಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ ದಿಟ್ಟ ಹೋರಾಟಗಾರ್ತಿ, ಇತರೆ...