spot_img
spot_img

ಪ್ಯಾರಿಸ್ ಒಲಿಂಪಿಕ್ಸ್​ಗೆ ಅದ್ಧೂರಿ ಚಾಲನೆ: ಇಂದಿನಿಂದ ಭಾರತ ಪದಕ ಭೇಟೆ ಆರಂಭ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಪ್ಯಾರಿಸ್ ಒಲಿಂಪಿಕ್ಸ್ 2024 ಗೆ ಅದ್ಧೂರಿ ಚಾಲನೆ ದೊರೆತಿದೆ. ಫ್ರಾನ್ಸ್ ರಾಜಧಾನಿ ಸೀನ್ ನದಿಯ ತಟದಲ್ಲಿ ನಡೆದ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ವಿಶೇಷ ಎಂದರೆ ಈ ಬಾರಿ ಪರೇಡ್ ಆಫ್ ನೇಷನ್ಸ್ ಅನ್ನು ನದಿಯಲ್ಲಿ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಸ್ಟೇಡಿಯಂ ಒಳಗೆ ನಡೆಯುವ ಕ್ರೀಡಾಪಟುಗಳ ಮೆರವಣಿಗೆ ಈ ಸಲ ಬೋಟ್​ಗಳಲ್ಲಿ ಆಯೋಜಿಸಿ ಪ್ರೇಕ್ಷರನ್ನು ಭವ್ಯತೆ ಮತ್ತು ಸಾಂಕೇತಿಕವಾಗಿ ಆಕರ್ಷಿಸಿತು.

ಈ ಪರೇಡ್​ನಲ್ಲಿ ಭಾರತವನ್ನು ಪಿವಿ ಸಿಂಧು ಹಾಗೂ ಶರತ್ ಕಮಲ್ ಮುನ್ನಡೆಸಿದ್ದರು. ಭಾರತೀಯ ಕ್ರೀಡಾಪಟುಗಳು ದೇಶಿ ಉಡುಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಆಸ್ಟರ್ಲಿಟ್ಜ್ ಸೇತುವೆಯ ಭಾಗದಿಂದ ಶುರುವಾದ ಪರೇಡ್ ಆಫ್ ನೇಷನ್ಸ್ ಮೆರವಣಿಯಲ್ಲಿ 85 ದೋಣಿಗಳು 6,800 ಕ್ಕೂ ಹೆಚ್ಚು ಕ್ರೀಡಾಪಟುಗಳು ಕಾಣಿಸಿಕೊಂಡಿದ್ದರು. ಪ್ರತಿ ದೇಶಗಳ ಕ್ರೀಡಾಪಟುಗಳ ಆಗಮನದ ವೇಳೆ ನೆರೆದಿದ್ದ ಪ್ರೇಕ್ಷಕರಿಂದ ಹರ್ಷೋದ್ಗಾರ ಮೊಳಗಿತು. ಆದಾಗ್ಯೂ, ಶನಿವಾರದಂದು ಪಂದ್ಯಗಳಿರುವ ಅನೇಕ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಿಂದ ಹೊರಗುಳಿದಿದ್ದರು.

ಇನ್ನು ಈ ಉದ್ಘಾಟನಾ ಸಮಾರಂಭದಲ್ಲಿ ಫ್ರೆಂಚ್ ಫುಟ್​ಬಾಲ್ ತಾರೆ ಝಿನೆಡಿನ್ ಝಿದಾನೆ, ಟೆನಿಸ್ ಆಟಗಾರ ರಾಫೆಲ್ ನಡಾಲ್ ಒಲಿಂಪಿಕ್ಸ್ ಜ್ಯೋತಿಯೊಂದಿಗೆ ಕಾಣಿಸಿಕೊಂಡಿದ್ದರು. ಇವರ ಜೊತೆಗೆ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಪಾಪ್ ತಾರೆಯರಾದ ಲೇಡಿ ಗಾಗಾ ಮತ್ತು ಅಯಾ ನಕಮುರಾ, IOC ಅಧ್ಯಕ್ಷ ಥಾಮಸ್ ಬಾಚ್ ಮತ್ತು ಪ್ಯಾರಿಸ್ 2024 ಮುಖ್ಯಸ್ಥ ಟೋನಿ ಎಸ್ಟಾಂಗ್ಯುಟ್ ಉಪಸ್ಥಿತರಿದ್ದರು.

ಒಲಿಂಪಿಕ್ಸ್- ಪದಕಗಳ ಬೇಟೆಯಾಡಲಿ ಭಾರತ!:

33ನೇ ಆವೃತ್ತಿಯ ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ ದೊರೆತಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಭಾರತದ 117 ಸ್ಪರ್ಧಿಗಳು ಕಣದಲ್ಲಿದ್ದಾರೆ. ಅದರಲ್ಲೂ ಜುಲೈ 27 ರಂದು ನಡೆಯುವ 11 ಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಗಳು ಕಣಕ್ಕಿಳಿಯಲಿರುವುದು ವಿಶೇಷ.

ಶನಿವಾರ ಮಧ್ಯಾಹ್ನದಿಂದ ಪಂದ್ಯಗಳು ಶುರುವಾಗಲಿದ್ದು, ಭಾರತವು ಏರ್​ ರೈಫಲ್​ ಮೂಲಕ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಬ್ಯಾಡ್ಮಿಂಟನ್, ರೋಯಿಂಗ್, ಶೂಟಿಂಗ್, ಟೆನಿಸ್, ಟೇಬಲ್ ಟೆನ್ನಿಸ್, ಬಾಕ್ಸಿಂಗ್ ಮತ್ತು ಹಾಕಿ ಪಂದ್ಯಗಳು ನಡೆಯಲಿದೆ. ಹಾಕಿ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸಲಿದ್ದು, ಶುಭಾರಂಭ ಮಾಡಲು ಕಾತುರದಿಂದ ಇದೆ.

WhatsApp Group Join Now
Telegram Group Join Now
Instagram Account Follow Now
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...