ಟೀಮ್ ಭಾರತ ಮತ್ತು ಬಾಂಗ್ಲಾದೇಶದ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 19ನೇ ದಿನದಿಂದ ಚೆನ್ನೈನ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಇದರ ಮಧ್ಯೆ ಟೀಮ್ ಇಂಡಿಯಾ ಬಾಂಗ್ಲಾ ವಿರುದ್ಧ ಟಿ20 ಸರಣಿ ಆಡಲಿದ್ದು, ಬಿಗ್ ಅಪ್ಡೇಟ್ ಒಂದಿದೆ.
ಇದನ್ನೂ ಓದಿ : ಮಹಿಳೆಯರು ಇಲ್ಲದೇ ಕನ್ನಡ ಸಿನಿಮಾ ಮಾಡ್ತಾರಂತೆ: ಕವಿತಾ ಲಂಕೇಶ್ ಹೇಳಿದ್ದೇನು?
ಬಾಂಗ್ಲಾ ವಿರುದ್ಧ ಟಿ20 ಸರಣಿಯಿಂದ ಟೀಮ್ ಇಂಡಿಯಾ ಉಪನಾಯಕ ಶುಭ್ಮನ್ ಗಿಲ್ಗೆ ಕೊಕ್ ನೀಡಲಾಗುತ್ತಿದೆ. ಅಂದರೆ ಟಿ20 ಸರಣಿಯಿಂದ ಕೈ ಬಿಡುತ್ತಿಲ್ಲ, ಬದಲಿಗೆ ಗಿಲ್ ಅವರಿಗೆ ರೆಸ್ಟ್ ನೀಡೋ ಸಾಧ್ಯತೆ ಇದೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಗಮನದಲ್ಲಿಟ್ಟುಕೊಂಡು ಗಿಲ್ಗೆ ವಿಶ್ರಾಂತಿ ಕೊಡುವ ಪ್ಲಾನ್ ಬಿಸಿಸಿಯದ್ದು.
ಇದನ್ನೂ ಓದಿ :ಹಿಂದೂ-ಮುಸ್ಲಿಂ ಧಾರ್ಮಿಕ ಸ್ಥಳಗಳ ಮೇಲೆ ಕಲ್ಲು ತೂರಾಟ.! ಅಂಗಡಿ ವಾಹನಗಳಿಗೆ ಬೆಂಕಿ ಹಚ್ಚಲಾಗಿ.!
ಅಕ್ಟೋಬರ್ 7ನೇ ದಿನದಂದು ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಶುರುವಾಗಲಿದೆ. ವಿಶ್ರಾಂತಿ ನೀಡುವ ಸಾಧ್ಯತೆ ಇರುವ ಕಾರಣ ಗಿಲ್ ಭಾರತ ಟಿ20 ಸೇರುವುದು ಡೌಟ್. ಹೀಗಾಗಿ ಇವರ ಸ್ಥಾನದಲ್ಲಿ ದುಲೀಪ್ ಟ್ರೋಫಿಯಲ್ಲಿ ಮಿಂಚುತ್ತಿರೋ ಇಶಾನ್ ಕಿಶನ್ಗೆ ಸ್ಥಾನ ನೀಡಬಹುದು. ದುಲೀಪ್ ಟ್ರೋಫಿಯಲ್ಲಿ ಸತತ ಸ್ಥಿರ ಪ್ರದರ್ಶನವನ್ನು ನೀಡಿರೋ ಕಾರಣ ಆಯ್ಕೆದಾರರು ಇಶಾನ್ಗೆ ಮಣೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.