13 ವರ್ಷದ ಬಾಲಕ ತನ್ನ ಪಕ್ಕದಲ್ಲಿಯೇ ಮಲಗಿದ್ದ 9 ವರ್ಷದ ತಂಗಿ ಮೇಲೆ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.ಮಧ್ಯಪ್ರದೇಶದ ರಿವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ :ಮತ್ತೆ ಹೃದಯ ಗೆದ್ದ ಡ್ರೋನ್ ಪ್ರತಾಪ್.. ಬಿಗ್ಬಾಸ್ ಮಾಜಿ ಸ್ಪರ್ಧಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಇನ್ನೂ ಮಗನ ಈ ನೀಚ ಕೃತ್ಯಕ್ಕೆ ಶಿಕ್ಷಿಸುವ ಬದಲು ತಾಯಿ ಘಟನೆಯನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡಿದ್ದರು ಎನ್ನಲಾಗಿದೆ.ಬಾಲಕ ರಿವಾ ಜಿಲ್ಲೆಯ ನಿವಾಸಿಯಾಗಿದ್ದು, ಕಳೆದ ಒಂದು ವರ್ಷದಿಂದ ಮೊಬೈಲ್ನಲ್ಲಿ ಅಶ್ಲೀಲ ಸಿನಿಮಾಗಳನ್ನು ನೋಡುತ್ತಿದ್ದನು. ಯಾರಿಗೂ ತಿಳಿಯದಂತೆ ಅಶ್ಲೀಲ ವಿಡಿಯೋ ನೋಡುವುದು ಬಾಲಕನಿಗೆ ಚಟವಾಗಿ ಬದಲಾಗಿತ್ತು.
ಅಂತೆಯೇ ರಾತ್ರಿ ಮಲಗಿದ್ದಾಗ ಕದ್ದುಮುಚ್ಚಿ ಬಾಲಕ ಮೊಬೈಲ್ನಲ್ಲಿ ಅಶ್ಲೀಲ ಸಿನಿಮಾಗಳನ್ನು ನೋಡಿದ್ದಾನೆ. ನಂತರ ಪಕ್ಕದಲ್ಲಿಯೇ ಮಲಗಿದ್ದ 9 ವರ್ಷದ ತಂಗಿಯ ಬಾಯಿಯನ್ನು ಮುಚ್ಚಿ ರೇಪ್ ಮಾಡಿದ್ದಾನೆ.
ಈ ವೇಳೆ ತಂಗಿ ಎಲ್ಲಾ ಘಟನೆಯನ್ನು ತಂದೆಗೆ ಹೇಳುತ್ತೇನೆ ಅಂದಿದ್ದಾಳೆ. ಇದರಿಂದ ಅಂಜಿದ ಬಾಲಕ ತಂಗಿಯ ಕತ್ತು ಹಿಸುಕಿ ಕೊಲೆ ಮಾಡಲು ಮುಂದಾಗಿದ್ದಾನೆ. ಕತ್ತು ಹಿಸುಕಿದ್ದರಿಂದ ಬಾಲಕಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಬಾಲಕ ತಾಯಿ ಬಳಿ ಹೋಗಿ ಎಲ್ಲಾ ವಿಷಯ ಹೇಳಿದ್ದಾನೆ.ತಾಯಿ ಬಂದು ನೋಡಿದಾಗ ಮಗಳು ಇನ್ನು ಉಸಿರಾಡುತ್ತಿದ್ದಳು. ಆದರೆ ಆ ಪಾಪಿ ತಾಯಿ ಮಗಳ ಜೀವ ಉಳಿಸುವ ಬದಲು ಮಗನ ಜೊತೆ ಸೇರಿ ಮತ್ತಷ್ಟು ಜೋರಾಗಿ ಕತ್ತು ಹಿಸುಕಿ ಬಾಲಕಿಯ ಉಸಿರು ನಿಲ್ಲಿಸಿದ್ದಾರೆ.
ಈ ವಿಷಯವನ್ನು ಮರೆಮಾಚಲು ತಾಯಿ ಪೊಲೀಸರ ಮುಂದೆ ವಿಷಕಾರಿ ಹುಳು ಕಚ್ಚಿದ್ದರಿಂದ ಮಗಳು ಮೃತಪಟ್ಟಿದ್ದಾಳೆ. ಎಂದು ಹೇಳಿಕೆ ನೀಡಿದ್ದಳು.
ತಂದೆ- ತಾಯಿ ಹಾಗೂ ನಾಲ್ಕು ಮಕ್ಕಳು ಸೇರಿದಂತೆ ಆರು ಜನರು ಕುಟುಂಬದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಮೂರು ಹೆಣ್ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದನು. ಘಟನೆ ನಡೆದ ದಿನದಂದು ಒಂದು ಕೋಣೆಯಲ್ಲಿ ಇಬ್ಬರು ಹೆಣ್ಣಮಕ್ಕಳು ತಾಯಿ ಜೊತೆ ಮಲಗಿದ್ರೆ, ಮತ್ತೊಂದು ರೂಮ್ನಲ್ಲಿ ಅಣ್ಣ ಮತ್ತು ತಂಗಿ ಮಲಗಿದ್ದರು. ಈ ವೇಳೆ ಕೃತ್ಯ ನಡೆದಿದೆ.ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಎಲ್ಲಾ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.