ಅಮರಾವತಿ: ಆಂಧ್ರ ಪ್ರದೇಶ ಸರ್ಕಾರ ಸೋಮವಾರ 2,94,427.25 ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದು, ಆದಾಯ ವೆಚ್ಚ 2,35,916.99 ಕೋಟಿ ರೂ., ಬಂಡವಾಳ ವೆಚ್ಚ 32,712.84 ಕೋಟಿ ರೂ. ಆಗಿದೆ.
ಹಣಕಾಸು ವರ್ಷದಲ್ಲಿ ಅಂದಾಜು ಆದಾಯ ಕೊರತೆ ಸುಮಾರು 34,743.38 ಕೋಟಿ ರೂ (ಜಿಎಸ್ ಡಿಪಿಯ 2.12 ಶೇಕಡಾ) ಮತ್ತು ವಿತ್ತೀಯ ಕೊರತೆ ಸುಮಾರು 68,742.65 ಕೋಟಿ ರೂ (ಜಿಎಸ್ಡಿಪಿಯ 4.19 ಶೇಕಡಾ) ಎಂದು ಅಂದಾಜಿಸಲಾಗಿದೆ ಎಂದು ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಪಯ್ಯವುಲ ಕೇಶವ್ ಹೇಳಿದರು.
“ಇಂದಿನ ಬಜೆಟ್ ರಾಜ್ಯದ ಆರ್ಥಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಮತ್ತು ಸಂಪತ್ತನ್ನು ಸೃಷ್ಟಿಸುವ ಮೂಲಕ ರಾಜ್ಯವನ್ನು ಆರ್ಥಿಕವಾಗಿ ಪುನರುಜ್ಜೀವನಗೊಳಿಸುವ ಪ್ರಸ್ತಾಪಗಳನ್ನು ಒಳಗೊಂಡಿದೆ. ಇದು ರಾಜ್ಯದ ಆರ್ಥಿಕ ಸುಧಾರಣೆಗಳನ್ನು ಗುರಿ ಹೊಂದಿದೆ” ಎಂದು ಕೇಶವ್ ಹೇಳಿದರು.
2024-25ನೇ ಸಾಲಿನ ಬಜೆಟ್‌ನಲ್ಲಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸಚಿವರಾಗಿರುವ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿಗೆ ಇಲಾಖೆಗೆ 16,739 ಕೋಟಿ ರೂ. ಮೀಸಲಿಡಲಾಗಿದೆ. ಶಾಲಾ ಶಿಕ್ಷಣಕ್ಕೆ 29,909 ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 18,421 ಕೋಟಿ ರೂ. ನೀಡಲಾಗಿದೆ.
ಹಿಂದಿನ ವೈಎಸ್ಆರ್‌ಸಿಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಶವ್, ಹಿಂದಿನ ಸರ್ಕಾರವು ಅಧಿಕಾರ ಬಿಟ್ಟು ಹೊರಡುವ ಸಮಯದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಕುಸಿತದ ಅಂಚಿನಲ್ಲಿತ್ತು ಎಂದು ಹೇಳಿದರು.
ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ 18,497 ಕೋಟಿ ರೂ., ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ 7,557 ಕೋಟಿ ರೂ. ಒದಗಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 39,007 ಕೋಟಿ ರೂ., ಅಲ್ಪಸಂಖ್ಯಾತರ ಕಲ್ಯಾಣಕ್ಕೆ 4,376 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 4,285 ಕೋಟಿ ರೂ. ನೀಡಲಾಗಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿಗೆ 1,215 ಕೋಟಿ ರೂ., ಉನ್ನತ ಶಿಕ್ಷಣಕ್ಕೆ 2,326 ಕೋಟಿ ರೂ., ಆರೋಗ್ಯಕ್ಕೆ 18,421 ಕೋಟಿ ರೂ., ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿಗೆ 16,739 ಕೋಟಿ ರೂ., ನಗರಾಭಿವೃದ್ಧಿಗೆ 11,490 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ವಸತಿಗೆ 4,012 ಕೋಟಿ ರೂ., ಜಲಸಂಪನ್ಮೂಲಕ್ಕೆ 16,705 ಕೋಟಿ ರೂ., ಕೈಗಾರಿಕೆ ಮತ್ತು ವಾಣಿಜ್ಯಕ್ಕೆ 3,127 ಕೋಟಿ ರೂ., ಇಂಧನಕ್ಕೆ 8,207 ಕೋಟಿ ರೂ., ರಸ್ತೆಗಳು ಮತ್ತು ಕಟ್ಟಡಗಳಿಗೆ 9,554 ಕೋಟಿ ರೂ., ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ 322 ಕೋಟಿ ರೂ., ಪೊಲೀಸ್ ಇಲಾಖೆಗೆ 8,495 ಕೋಟಿ ರೂ., ಪರಿಸರಕ್ಕೆ 687 ಕೋಟಿ ರೂ. ಅರಣ್ಯಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಮೀಸಲಿಡಲಾಗಿದೆ. ಕೃಷಿ ಸಚಿವ ಕೆ.ಅಚ್ಚನ್ ನಾಯ್ಡು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now