ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನಕೊಂದು ಹೊಸ ರೂಪ ಪಡೆದುಕೊಳ್ಳುತ್ತಿದೆ. ಬಿಗ್ಬಾಸ್ ಮನೆಗೆ ಬಂದ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಿಗ್ಬಾಸ್ ನಿನ್ನೆಯ ಸಂಚಿಕೆಯಲ್ಲಿ ಕೊಟ್ಟ ಟಾಸ್ಕ್ ಮಧ್ಯೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಗೆ ಬಂದಿದ್ದ ರಜತ್ ಹಾಗೂ ಗೋಲ್ಡ್ ಸುರೇಶ್ ಗಲಾಟೆ ಮಾಡಿಕೊಂಡಿದ್ದರು.
ಆದರೆ ಇದೀಗ ತಂಡ ಇಬ್ಬರು ಉಸ್ತುವಾರಿಗಳೇ ಜೋರಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಹೌದು, ಬಿಗ್ಬಾಸ್ ಎರಡು ತಂಡಗಳಿಗೆ ಟಾಸ್ಕ್ವೊಂಡನ್ನು ನೀಡಿದ್ದಾರೆ.
6ಗಾರ್ಡನ್ ಏರಿಯಾದಲ್ಲಿ ನಡೆಯುತ್ತಿದ್ದ ಈ ಟಾಸ್ಕ್ನಲ್ಲಿ ಕೆಂಪು ತಂಡದಿಂದ ಮಂಜು, ರಜತ್ ಆಡಿದರೆ, ನೀಲಿ ಟೀಮ್ನಿಂದ ತ್ರಿವಿಕ್ರಮ್ ಮತ್ತು ಧರ್ಮ ಅವರು ಆಡುತ್ತಿದ್ದರು. ಇದೇ ವೇಳೆ ಶಿಶಿರ್ ಹಾಗೂ ಚೈತ್ರಾ ಕುಂದಾಪುರ ಮಧ್ಯೆ ಜೋರು ಗಲಾಟೆ ನಡೆದಿದೆ.
ಈ ಗಲಾಟೆ ಮಧ್ಯೆ ಶಿಶಿರ್ಗೆ ಚೈತ್ರಾ ಕುಂದಾಪುರ ಸವಾಲ್ ಹಾಕಿದ್ದಾರೆ. ಸೋಲುತ್ತೇವೆ ಅಂತ ಭಯ ಇದ್ದಾಗ ಹಿಂಗೆ ಆಡೋದು ಅಂತ ಚೈತ್ರಾ ಹೇಳ್ತಾರೆ. ಆಗ ಶಿಶಿರ್ ಬರಿ ಮಾತು ಮಾತು ಮಾತು ಅಂತ ಇದನ್ನೇ ಹೇಳುತ್ತಾ ಇರುತ್ತಾರೆ. ಆಗ ಚೈತ್ರಾ ಇದನ್ನೂ ಬಿಟ್ಟು ಬೇರೆ ಏನು ಹೇಳೋದಕ್ಕೆ ಬರುತ್ತೆ ನಿಮಗೆ ಅಂತ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಆಗ ಸುಮ್ನೆ ಹೋಗು ಆ ಕಡೆ ಅಂತ ಶಿಶಿರ್ ಜೋರಾಗಿ ಕೂಗಾಡಿದ್ದಾರೆ.
ನಂತರ ಚೈತ್ರಾ ನನಗೆ ಆ ಕಡೆ ಹೋಗು ಅಂತ ಹೇಳೋದಕ್ಕೆ ಯಾವ ಅಧಿಕಾರ ಕೂಡ ನಿಮಗಿಲ್ಲ. ಆ ಕಡೆ ಹೋಗೋದಿಲ್ಲ ಇಲ್ಲೇ ನಿಂತುಕೊಳ್ಳುತ್ತೇನೆ ತಾಕ್ ಇದ್ರೆ ತಡೀರಿ ನೋಡೋಣ ಅಂತ ಅವಾಜ್ ಹಾಕಿದ್ದಾರೆ.
ಸದ್ಯ ಬಿಗ್ಬಾಸ್ ಮನೆಯಲ್ಲಿ ನೀಲಿ ಮತ್ತು ಕೆಂಪು ಎಂಬ ಎರಡು ತಂಡಗಳಾಗಿ ವಿಂಗಡಣೆ ಮಾಡಲಾಗಿದೆ. ಭವ್ಯಾ ಗೌಡ ಅವರ ನೀಲಿ ಟೀಮ್ನಲ್ಲಿ ಗೋಲ್ಡ್ ಸುರೇಶ್, ಶಿಶಿರ್, ಧರ್ಮ, ತ್ರಿವಿಕ್ರಮ್, ಮೋಕ್ಷಿತಾ, ಐಶ್ವರ್ಯಾ ಇದ್ದಾರೆ. ಶೋಭಾ ಶೆಟ್ಟಿ ನಾಯಕತ್ವದ ಕೆಂಪು ತಂಡದಲ್ಲಿ ಧನರಾಜ್ ಆಚಾರ್, ಹನುಮಂತ, ಗೌತಮಿ, ಮಂಜು, ಚೈತ್ರಾ ಕುಂದಾಪುರ ಮತ್ತು ರಜತ್ ಇದ್ದಾರೆ.
ಇನ್ನೂ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಚೈತ್ರಾ, ಮಂಜು, ಗೌತಮಿ, ತ್ರಿವಿಕ್ರಮ್, ಹನುಮಂತ, ಮೋಕ್ಷಿತಾ ಹಾಗೂ ಧರ್ಮ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಈ ಎಲ್ಲ ಸ್ಪರ್ಧಿಗಳ ಮನಸ್ಸಲ್ಲಿ ನಡುಕ ಹುಟ್ಟಿದೆ.