spot_img
spot_img

CHINA SUPPORT TO WHO : ಡಬ್ಲ್ಯೂಎಚ್ಒಗೆ ಬೆಂಬಲ ಘೋಷಿಸಿದ ಚೀನಾ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Beijing (China) News:

ಚೀನಾ ಮತ್ತು ಅಮೆರಿಕ ಪ್ರತಿಸ್ಪರ್ಧಿ ರಾಷ್ಟ್ರಗಳು ಎಂಬುದರಲ್ಲಿ ಅನುಮಾನವಿಲ್ಲ. ಅದು WHOದ ವಿಚಾರದಲ್ಲೂ ಪ್ರತಿಫಲಿಸಲಿದೆ. ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ (WHO) ಯಿಂದ ಅಮೆರಿಕ ಹಿಂದೆ ಸರಿಯುವುದಾಗಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಘೋಷಿಸಿದ ಬೆನ್ನಲ್ಲೇ, ಚೀನಾವು ತನ್ನ ಬೆಂಬಲವನ್ನು ಪ್ರಕಟಿಸಿದೆ.ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್​ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ಅಮೆರಿಕವು ಡಬ್ಲ್ಯುಎಚ್‌ಒನಿಂದ ಹೊರಬರುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು.

ಇದು ಐದು ವರ್ಷಗಳ ಅಂತರದಲ್ಲಿ ಅಮೆರಿಕವು ಎರಡನೇ ಬಾರಿಗೆ ಡಬ್ಲ್ಯೂಎಚ್​ಒದಿಂದ ಹಿಂದೆ ಸರಿದಂತಾಗಿದೆ.ಜಾಗತಿಕ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಡಬ್ಲ್ಯೂಎಚ್​​ಒ ಅಧಿಕೃತ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸಬೇಕೇ ಹೊರತು, ಅದನ್ನು ದುರ್ಬಲಗೊಳಿಸಬಾರದು ಎಂದು ಗುವೊ ತಿಳಿಸಿದ್ದಾರೆ.ಟ್ರಂಪ್ ಅವರ ಈ ನಿರ್ಧಾರ ಹೊರಬಿದ್ದ ಬಳಿಕ, ಚೀನಾವು ತನ್ನ ಬೆಂಬಲವನ್ನು ದೃಢಪಡಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಗೆ ತಮ್ಮ ಬೆಂಬಲವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

WHO Critic Trump:  ಟ್ರಂಪ್ ಹಿಂದಿನಿಂದಲೂ WHO ಅನ್ನು ಟೀಕಿಸುತ್ತಿದ್ದಾರೆ. ತಮ್ಮ ಮೊದಲ ಅವಧಿಯ ಆಡಳಿತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಬಳಿಕ ಬಂದ ಜೋ ಬೈಡನ್​ ಟ್ರಂಪ್ ಅವರ ನಿರ್ಧಾರವನ್ನು ರದ್ದುಗೊಳಿಸಿದ್ದರು.

Reasons for Trump’s decision: ಅಮೆರಿಕವು ಡಬ್ಲ್ಯುಎಚ್​​ಒದ ಅರಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಅದರ ಒಟ್ಟು ನಿಧಿಯ ಶೇ.18 ರಷ್ಟು ಕೊಡುಗೆಯನ್ನು ಅಮೆರಿಕ​ ನೀಡುತ್ತಿತ್ತು. ನೂತನ ಅಧ್ಯಕ್ಷರ ಹಿಂತೆಗೆತವು, ಕ್ಷಯ, ಎಚ್​ಐವಿ ಅಥವಾ ಏಡ್ಸ್​ ಸೇರಿ ಇತರ ಆರೋಗ್ಯ ತುರ್ತುಸ್ಥಿತಿಗಳನ್ನು ನಿರ್ವಹಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಸಮಸ್ಯೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಕೋವಿಡ್​ -19 ಸಾಂಕ್ರಾಮಿಕ ಸೇರಿ ಇತರ ಅಂತಾರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯೂಎಚ್​ಒ ವಿಫಲವಾಗಿದೆ. ಈ ಕಾರಣಕ್ಕಾಗಿ ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ನಿರ್ಗಮಿಸುತ್ತದೆ ಎಂದು ಟ್ರಂಪ್ ಹೇಳಿದ್ದರು.

ಇದನ್ನು ಓದಿರಿ : SHIVASENA SUPPORT TO BJP : ಬಿಜೆಪಿ ಅಭ್ಯರ್ಥಿಗಳಿಗೆ ಶಿಂಧೆ ಬಣದ ಶಿವಸೇನೆ ಬೆಂಬಲ ಘೋಷಣೆ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ISRO 100TH MISSION:ಬೆಳ್ಳಂಬೆಳಗ್ಗೆ ನಭಕ್ಕೆ ಜಿಗಿಯಲು ಸಿದ್ಧವಾಗಿದೆ ರಾಕೆಟ್.

ISROS 100th Mission News: ಇಸ್ರೋದ 100ನೇ MISSION ಸಿದ್ಧವಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ನಭಕ್ಕೆ ಹಾರಲು ರಾಕೆಟ್​ ತಯಾರಿಗೊಂಡಿದೆ. ಇದರ ಲೈವ್​ ಸ್ಟ್ರೀಮಿಂಗ್​, ಸಮಯ ಸೇರಿದಂತೆ...

HOW MUCH SALT INTAKE DAILY:ಪ್ರತಿನಿತ್ಯ ಯಾವ ವಯಸ್ಸಿನವರು ಎಷ್ಟು ಉಪ್ಪು ಸೇವಿಸಬೇಕು ನಿಮಗೆ ಗೊತ್ತೇ? ತಜ್ಞರ ಸಲಹೆ ಹೀಗಿದೆ.

How Much Salt You Should Consume in That Day's News : ನಿಮ್ಮ ದೈನಂದಿನ ಆಹಾರದಲ್ಲಿ ನಿಯಮಿತವಾಗಿ SALTನ್ನು ಸೇವಿಸಿದರೆ ಆರೋಗ್ಯದ ಅಪಾಯಗಳನ್ನು...

HEALTH BENEFITS OF APPLE:ಅನಿಮಿಯಾ ಸಮಸ್ಯೆ ಹೋಗಲಾಡಿಸಲು ಇದೊಂದು ಹಣ್ಣು ಸೇವಿಸಲು ತಜ್ಞರ ಸಲಹೆ .

Health Benefits That Apple News: ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ, ರಕ್ತಹೀನತೆಯ (ಅನಿಮಿಯಾ) ಅಪಾಯ ಹೆಚ್ಚಾಗುತ್ತದೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ, ಅನಿಮಿಯಾ ಸಮಸ್ಯೆ...

38TH NATIONAL GAMES:ಎಲ್ಲಾ ರಾಜ್ಯಗಳ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕರ್ನಾಟಕ!

38th National Games News: ಉತ್ತರಾಖಂಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಹೆಚ್ಚಿನ ಪದಕ ಗೆದ್ದು ನಂಬರ್​ ಒನ್​ ಸ್ಥಾನಕ್ಕೇರಿದೆ.ಕ್ರೀಡಾಕೂಟದ ಎರಡನೇ ದಿನವಾದ ಬುಧವಾರ ಸಂಜೆ...